ನವದೆಹಲಿ:ದೆಹಲಿಯ ಕೋಚಿಂಗ್ ಸೆಂಟರ್​ಗಳು ಸಾವಿನ ಚೇಂಬರ್​ಗಳಾಗಿ ಮಾರ್ಪಟ್ಟಿದ್ದು, ಮಕ್ಕಳ ಜೀವನದೊಂದಿಗೆ ಆಟವಾಡುತ್ತಿವೆ ಎಂದು ಸುಪ್ರೀಂ ಕೋರ್ಟ್ ಕೆಂಡಕಾರಿದೆ. ಜುಲೈನಲ್ಲಿ ದೆಹಲಿಯ ಓಲ್ಡ್ ರಾಜೇಂದ್ರ ನಗರದಲ್ಲಿ ರಾವ್ಸ್ ಐಎಎಸ್ ಕೋಚಿಂಗ್ ಅಕಾಡೆಮಿಯ ನೆಲ ಮಾಳಿಗೆಗೆ ಮಳೆ ನೀರು ನುಗ್ಗಿ, ಮೂವರು ವಿದ್ಯಾರ್ಥಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಕೋರ್ಟ್ ಕಿಡಿಕಾರಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ದುರಂತದ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಸುಪ್ರೀಂಕೋರ್ಟ್, ದೆಹಲಿಯೊಂದರಲ್ಲೇ ನೂರಾರು ಕೋಚಿಂಗ್ ಸೆಂಟರ್​ಗಳಿದ್ದು, ಐಎಎಸ್ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿರುವ ಈ ಸೆಂಟರ್​ಗಳಿಗೆ ಏನೆಲ್ಲಾ ನಿಯಮಗಳನ್ನು ರೂಪಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದೆ. ವಿದ್ಯಾರ್ಥಿಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಶುಲ್ಕ ವಿಧಿಸಿದ ಹೊರತಾಗಿಯೂ, ಸುರಕ್ಷಿತ ವ್ಯವಸ್ಥೆಯನ್ನು ಕಲ್ಪಿಸದಿರುವ ಬಗ್ಗೆ ಕೋರ್ಟ್ ಸಿಡಿಮಿಡಿಗೊಂಡಿದೆ.
ಸುರಕ್ಷತೆ ಮತ್ತು ಗೌರವಯುತ ಜೀವನಕ್ಕಾಗಿ ಮೂಲಭೂತ ಮಾನದಂಡಗಳ ಸಂಪೂರ್ಣ ಅನುಸರಣೆ ಇಲ್ಲದಿದ್ದರೆ ಕೋಚಿಂಗ್ ಸಂಸ್ಥೆಗಳು ಆನ್​ಲೈನ್​ನಲ್ಲಿ ಕಾರ್ಯನಿರ್ವಹಿಸಬಹುದು. ಕೋಚಿಂಗ್ ಸೆಂಟರ್​ಗಳು ಐಎಎಸ್ ಆಕಾಂಕ್ಷಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿರುವುದನ್ನು ನೋಡಿ ಸುಮ್ಮನಿರಲಾಗದು ಎಂದು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾ. ಉಜ್ಜಲ್ ಭುಯಾನ್ ಆಕ್ರೋಶ ಹೊರಹಾಕಿದ್ದಾರೆ.
ಲಕ್ಷ ರೂ. ದಂಡ
ನಾಗರಿಕ ಮತ್ತು ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪಾಲಿಸದ ಕೋಚಿಂಗ್ ಸೆಂಟರ್​ಗಳನ್ನು ಬಂದ್ ಮಾಡುವಂತೆ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದಕ್ಕಾಗಿ ಕೋಚಿಂಗ್ ಇನ್​ಸ್ಟಿ್ಟ್ಯೂಟ್ ಫೆಡರೇಶನ್​ಗೆ ಸುಪ್ರೀಂಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿದೆ. ಮಾನದಂಡ ಪಾಲಿಸದ ಸುಮಾರು 30ಕ್ಕೂ ಹೆಚ್ಚು ಕೋಚಿಂಗ್ ಕೇಂದ್ರಗಳನ್ನು ಈಗ ಮುಚ್ಚಲಾಗಿದೆ.
ಬಾಂಗ್ಲಾದಲ್ಲಿ ಇಷ್ಟೊಂದು ಹಿಂಸಾಚಾರ ಏಕೆ? 300ಕ್ಕೂ ಅಧಿಕ ಸಾವು, ಇಷ್ಟಕ್ಕೆಲ್ಲ ಕಾರಣ ಇದೇ ನೋಡಿ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:one × two =
Remember me
