ಕೊಲ್ಕತಾ:ಕಲ್ಲಿದ್ದಲು ಕಳ್ಳಸಾಗಾಣಿಕೆ ಕುರಿತಾದ ತನಿಖೆಯಲ್ಲಿ ಸಹಕಾರ ನೀಡಬೇಕೆಂದು ಕೋರಿ ಸಿಬಿಐ ನಿನ್ನೆ ನೀಡಿದ್ದ ನೋಟೀಸಿಗೆ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಹೆಂಡತಿ ರುಜಿರಾ ನರುಲಾ ಬ್ಯಾನರ್ಜಿ ಇಂದು ಪ್ರತಿಕ್ರಿಯೆ ನೀಡಿದ್ದಾರೆ. “ಈ ವಿಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲ….” ಎಂದಿರುವ ರುಜಿರಾ, ನಾಳೆ ತನಿಖಾಧಿಕಾರಿಗಳನ್ನು ಭೇಟಿ ಮಾಡಲು ಒಪ್ಪಿದ್ದಾರೆ.
ಬಂಗಾಳದ ಕುನುಸ್ತೊರಿಯಾ ಮತ್ತು ಕಜೋರಿಯದಲ್ಲಿರುವ ಈಸ್ಟರ್ನ್ ಕೋಲ್​ಫೀಲ್ಡ್​ ಲಿಮಿಟೆಡ್​ಗೆ ಸೇರಿದ ಕಲ್ಲಿದ್ದಲು ಕ್ಷೇತ್ರಗಳಲ್ಲಿ ಕಾನೂನುಬಾಹಿರ ಗಣಿಗಾರಿಕೆ ಮತ್ತು ಕಳವಿನ ಬಗ್ಗೆ ಕಳೆದ ವರ್ಷ ನವೆಂಬರ್​ನಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು. ಕಲ್ಲಿದ್ದಲು ಮಾಫಿಯಾದವರು ಬಂಗಾಳದ ಆಡಳಿತಾರೂಢ ಟಿಎಂಸಿ ಪಕ್ಷದ ನಾಯಕರಿಗೆ ನಿಯಮಿತವಾಗಿ ಲಂಚ ನೀಡುತ್ತಿರುವ ಆರೋಪ ಈ ಪ್ರಕರಣದಲ್ಲಿದೆ. ಲಂಚದ ವ್ಯವಹಾರವನ್ನು ಟಿಎಂಸಿ ಯೂತ್ ವಿಂಗ್​ ಕಾರ್ಯದರ್ಶಿ ವಿನಯ್ ಮಿಶ್ರಾ ವಹಿಸಿಕೊಂಡಿದ್ದರು ಎನ್ನಲಾಗಿದ್ದು, ತಲೆಮರೆಸಿಕೊಂಡಿರುವ ಮಿಶ್ರ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿಯಲ್ಲಿದೆ. ಇದೀಗ ಯೂತ್​ ವಿಂಗ್​ನ ನಾಯಕತ್ವ ವಹಿಸಿರುವ ಅಭಿಷೇಕ್ ಬ್ಯಾನರ್ಜಿ ಅವರ ಹೆಂಡತಿ ರುಜಿರಾರನ್ನು ವಿಚಾರಣೆ ನಡೆಸಲು ಸಿಬಿಐ ಮುಂದಾಗಿದೆ.
ಇದನ್ನೂ ಓದಿ:ಕಲ್ಲಿದ್ದಲು ಕಳ್ಳಸಾಗಾಣಿಕೆ : ಅಭಿಷೇಕ್ ಬ್ಯಾನರ್ಜಿ ಹೆಂಡತಿಗೆ ಸಿಬಿಐ ನೋಟೀಸು
ಭಾನುವಾರ ಮಧ್ಯಾಹ್ನ ಸಿಬಿಐ ತಂಡ, ರುಜಿರಾ ವಿಚಾರಣೆ ನಡೆಸಲು ಮಧ್ಯಾಹ್ನ 3 ಗಂಟೆಯ ಸಮಯ ನಿಗದಿ ಮಾಡಿ, ಅವರ ಮನೆಗೆ ಭೇಟಿ ನೀಡಿತ್ತು. ಆದರೆ ಆ ಸಮಯದಲ್ಲಿ ಆಕೆ ಮನೆಯಲ್ಲಿರದ ಕಾರಣ, ನೋಟೀಸು ನೀಡಿ ಅಧಿಕಾರಿಗಳು ವಾಪಸಾಗಿದ್ದರು. ಸಿಬಿಐ ನೋಟೀಸಿಗೆ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಅಳಿಯನೂ ಆದ ಅಭಿಷೇಕ್ ಬ್ಯಾನರ್ಜಿ, ತಮ್ಮನ್ನು ಗುರಿಯಾಗಿಸಿಕೊಂಡು ಮಾಡಿರುವ ಬಿಜೆಪಿ ತಂತ್ರ ಎಂಬ ರೀತಿ ಪ್ರತಿಕ್ರಿಯಿಸಿದ್ದರು. “ನಮ್ಮನ್ನು ಈ ರೀತಿಯಾಗಿ ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾವು ಹೀಗೆ ಬೆದರಿ ಸುಮ್ಮನಾಗುವವರಲ್ಲ… ನನಗೆ ಕಾನೂನಿನ ಮೇಲೆ ಪೂರ್ಣ ವಿಶ್ವಾಸವಿದೆ” ಎಂದು ಟ್ವೀಟ್ ಮಾಡಿದ್ದರು.
ಸಿಬಿಐ ನೋಟೀಸಿಗೆ ಇಂದು ಪತ್ರಮುಖೇನ ಪ್ರತಿಕ್ರಿಯಿಸಿರುವ ರುಜಿರಾ, “ನನ್ನನ್ನು ಪ್ರಶ್ನಿಸುವುದಕ್ಕೆ ಕಾರಣವಾಗಲೀ, ತನಿಖೆ ನಡೆಸುತ್ತಿರುವ ವಿಚಾರದ ಬಗ್ಗೆಯಾಗಲೀ ನನಗೆ ಏನೂ ತಿಳಿದಿಲ್ಲವಾದರೂ, ನೀವು ನಾಳೆ (ಫೆಬ್ರವರಿ 23) ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯ ನಡುವೆ ನನ್ನ ಮನೆಗೆ ಭೇಟಿ ನೀಡಬಹುದು… ನೀವು ಬರುವ ಸಮಯವನ್ನು ನನಗೆ ಮುಂಚಿತವಾಗಿ ತಿಳಿಸಿ” ಎಂದು ತನಿಖಾಧಿಕಾರಿಗಳಿಗೆ ಹೇಳಿದ್ದಾರೆ.
ಇದನ್ನೂ ಓದಿ:“ಚುನಾವಣೆ ಮುಗಿಯೋ ಮುನ್ನ ಮಮತಾ ಬ್ಯಾನರ್ಜಿ ಜೈ ಶ್ರೀ ರಾಮ್ ಅಂತಾರೆ”
ಇದೇ ರೀತಿಯ ನೋಟೀಸನ್ನು ಸಿಬಿಐ, ಅಭಿಷೇಕ್ ಬ್ಯಾನರ್ಜಿ ಅವರ ನಾದಿನಿ ಮೇನಕಾ ಗಂಭೀರ್​ಗೆ ಕೂಡ ನೀಡಿದ್ದು, ಅಧಿಕಾರಿಗಳು ಅವರೊಂದಿಗೆ ಪ್ರಶ್ನೋತ್ತರ ನಡೆಸಲು ಈಗಾಗಲೇ ತೆರಳಿದ್ದಾರೆ ಎನ್ನಲಾಗಿದೆ.
ಬಹುಕಾಲದಿಂದ ಬಿಜೆಪಿ, ಅಭಿಷೇಕ್ ಬ್ಯಾನರ್ಜಿ ಅವರು ಕಲ್ಲಿದ್ದಲು ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸುತ್ತಾ ಬಂದಿದೆ. ಇದೀಗ ಬಂಗಾಳದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಸಿಬಿಐನ ಈ ಕಾರ್ಯಾಚರಣೆ ಟಿಎಂಸಿಗೆ ಆತಂಕ ನೀಡುವ ವಿಷಯವಾಗಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಮಾನನಷ್ಟ ಮೊಕದ್ದಮೆ : ಅಮಿತ್​ ಷಾಗೆ ಬಂಗಾಳ ಕೋರ್ಟ್ ಸಮನ್ಸ್
VIDEO| ಈ ವಿಡಿಯೋ ನೋಡಿದ್ರೆ ಮದ್ವೆ ಊಟ ಮಾಡಲು ನೀವು ಭಯ ಪಡ್ತೀರಾ: ಥೂ ಇಂಥವರೂ ಇರ್ತಾರಾ!
ಹದಿಹರೆಯದ ಮಗಳನ್ನೇ ರೇಪ್ ಮಾಡಿ ಗರ್ಭಿಣಿಯಾಗಿಸಿದ, ಗರ್ಭಪಾತವಾದ ಮೇಲೆ ಮತ್ತೆ ಮೇಲೆರಗಿದ… ಕೋರ್ಟ್ ಹೇಳಿದ್ದೇನು ?


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 + 8 =
Remember me
