ಕೊಲ್ಕತ:ತೃಣಮೂಲ ಕಾಂಗ್ರೆಸ್​​ನ ಮುಂಚಿನ ಅವಧಿಯ ಸರ್ಕಾರವಿದ್ದಾಗ ಪಶ್ಚಿಮ ಬಂಗಾಳದಲ್ಲಿ ನಡೆಯಿತೆನ್ನಲಾದ ದೊಡ್ಡ ಪ್ರಮಾಣದ ಕಲ್ಲಿದ್ದಲು ಕಳ್ಳಸಾಗಣೆ, ಸಾಗಾಣಿಕೆ ಮತ್ತು ಭ್ರಷ್ಟಾಚಾರದ ಪ್ರಕರಣದ ಪ್ರಮುಖ ಆರೋಪಿ ಬಿಕಾಶ್​ ಮಿಶ್ರನನ್ನು ಸಿಬಿಐ ವಶಪಡಿಸಿಕೊಂಡಿದೆ.
ಟಿಎಂಸಿ ಯೂತ್​ ವಿಂಗ್​ ನಾಯಕ ಬಿನಯ್​ ಮಿಶ್ರ ಅವರ ಸೋದರನಾದ ಬಿಕಾಶ್​ ಮಿಶ್ರ ಹಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದು, ಆತ ಚಿಕಿತ್ಸೆ ಪಡೆಯುತ್ತಿದ್ದ ಕೊಲ್ಕತಾದ ಖಾಸಗಿ ಆಸ್ಪತ್ರೆಯೊಂದರಿಂದ ಸಿಬಿಐ ಅಧಿಕಾರಿಗಳು ಇಂದು ಅವನನ್ನು ಬಂಧಿಸಿದ್ದಾರೆ ಎಂದು ಎಎನ್​​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಪ್ರಕರಣದಲ್ಲಿ ಅದಾಗಲೇ ಬಿನಯ್​ ಮಿಶ್ರನನ್ನು ಬಂಧಿಸಿದ್ದು, ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯನಾದ ಅಭಿಷೇಕ್​ ಬ್ಯಾನರ್ಜಿ ಅವರನ್ನೂ ಸಿಬಿಐ ವಿಚಾರಣೆ ಮಾಡಿತ್ತು ಎನ್ನಲಾಗಿದೆ.
ಇದನ್ನೂ ಓದಿ:ಸೇನಾ ಹೆಲಿಕಾಪ್ಟರ್ ಬಿದ್ದಿದ್ದು ಯಾಕೆ? ಕಾರಣ ತಿಳಿಸಿದ ವಾಯುಪಡೆ ಮಾಜಿ ಅಧಿಕಾರಿ!
ಪ್ರಕರಣದ ವಿವರ:ಬಂಗಾಳದ ಕುನುಸ್ತೊರಿಯಾ ಮತ್ತು ಕಜೋರಿಯದಲ್ಲಿರುವ ಈಸ್ಟರ್ನ್ ಕೋಲ್​ಫೀಲ್ಡ್​ ಲಿಮಿಟೆಡ್​ಗೆ ಸೇರಿದ ಕಲ್ಲಿದ್ದಲು ಕ್ಷೇತ್ರಗಳಲ್ಲಿ ಕಲ್ಲಿದ್ದಲಿನ ಕಾನೂನುಬಾಹಿರ ಗಣಿಗಾರಿಕೆ ಮತ್ತು ಕಳವಿನ ಬಗೆಗೆ ಕಳೆದ ವರ್ಷ ನವೆಂಬರ್​ನಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು. ಕಲ್ಲಿದ್ದಲು ಮಾಫಿಯಾದವರು ಬಂಗಾಳದ ಆಡಳಿತಾರೂಢ ಟಿಎಂಸಿ ಪಕ್ಷದ ನಾಯಕರಿಗೆ ನಿಯಮಿತವಾಗಿ ಲಂಚ ನೀಡುತ್ತಿರುವ ಆರೋಪ ಈ ಪ್ರಕರಣದಲ್ಲಿದೆ. ಈ ಹಣವನ್ನು ಪಕ್ಷದ ಯುವ ನಾಯಕ ಬಿನಯ್ ಮಿಶ್ರಾ ಮೂಲಕ ಚಾನಲ್ ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಬಿನಯ್​ ಮಿಶ್ರರ ಸೋದರ ಬಿಜಯ್​ ಮಿಶ್ರ ವಿರುದ್ಧವೂ ಸಿಬಿಐ ಜಾಮೀನುರಹಿತ ವಾರೆಂಟ್ ಜಾರಿ ಮಾಡಿತ್ತು ಎನ್ನಲಾಗಿದೆ.(ಏಜೆನ್ಸೀಸ್)
ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಪೇಜಾವರ ಶ್ರೀಗಳ ತೀವ್ರ ವಿರೋಧ: ಇದು ಜೀವನಶೈಲಿ ಬದಲಿಸುವ ಕೃತ್ಯ ಎಂದ ಸ್ವಾಮೀಜಿ

ಮನೆ ಕಡೆಗೆ ಮಣ್ಣಿನ ಮಕ್ಕಳು! ವರ್ಷಕ್ಕೂ ಹೆಚ್ಚು ಕಾಲ ನಡೆದ ರೈತ ಪ್ರತಿಭಟನೆಗೆ ಬಿತ್ತು ತೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
