ನವದೆಹಲಿ:ಈಚೆಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಸರ್ಕಾರ ರಚಿಸಲು ಹಕ್ಕು ಮಂಡಿಸಿದೆ. ಇನ್ನೂ ಎನ್​ಡಿಎ ಸರ್ಕಾರ ರಚಿಸುವ ಮುನ್ನವೇ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ನೇತೃತ್ವದ ಜೆಡಿಯು ಕ್ಯಾತೆ ತೆಗೆದಿದ್ದು, ಕೆಲವು ಯೋಜನೆಗಳ ಕುರಿತು ಮರುಚಿಂತನೆ ನಡೆಸುಂತೆ ಬಿಜೆಪಿಗೆ ಹೇಳಿದೆ.
2022ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಅಗ್ನಿಪಥ್ ಯೋಜನೆ ಕುರಿತು ಮರುಚಿಂತನೆ ನಡೆಸಬೇಕು ಎಂದು ಸಂಯುಕ್ತಾ ಜನತಾದಳ ಬೇಡಿಕೆ ಮಂಡಿಸಿದೆ. ಈ ಮೂಲಕ ಹೊಸ ಜನಾದೇಶದ ಬಳಿಕ ಅಸ್ತಿತ್ವಕ್ಕೆ ಬರಲಿರುವ ನೂತನ ಸರ್ಕಾರದ ಸ್ವರೂಪ ಯಾವ ರೀತಿ ಇರಬಹುದು ಎಂಬ ಸೂಚನೆಯನ್ನು ನೀಡಿದೆ.
ಈ ಕುರಿತು ಮಾತನಾಡಿರುವ ಸಂಯುಕ್ತಾ ಜನತಾದಳದ ಹಿರಿಯ ನಾಯಕ ಕೆ.ಸಿ. ತ್ಯಾಗಿ, ಅಗ್ನಿವೀರ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಹೊಸ ರೀತಿಯಲ್ಲಿ ಯೋಚಿಸಬೇಕಾಗಿದೆ. ಒಂದು ವರ್ಗದ ಮತದಾರರು ಅಗ್ನಿವೀರ್ ಯೋಜನೆ ಬಗ್ಗೆ ಕೋಪಗೊಂಡಿದ್ದಾರೆ. ಸಾರ್ವಜನಿಕರು ಪ್ರಶ್ನೆಗಳನ್ನು ಎತ್ತಿರುವ ನ್ಯೂನತೆಗಳ ಬಗ್ಗೆ ವಿವರವಾಗಿ ಚರ್ಚಿಸಬೇಕು ಮತ್ತು ಅವುಗಳನ್ನು ತೆಗೆದುಹಾಕಬೇಕು ಎಂದು ನಮ್ಮ ಪಕ್ಷ ಬಯಸುತ್ತದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಸಿಎಂ, ಏಕರೂಪ ನಾಗರಿಕ ಸಂಹಿತೆ (UCC) ಕುರಿತು ಕಾನೂನು ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ನಮ್ಮ ವಿರೋಧವಿಲ್ಲ ಆದರೆ ಮೈತ್ರಿಕೂಟದೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
#WATCH| JD(U) spokesperson KC Tyagi says, "A section of voters has been upset over the Agniveer scheme. Our party wants those shortcomings which have been questioned by the public to be discussed in detail and removed…On UCC, as the national president of the party, CM had…pic.twitter.com/KBKbmJHXZL
ಇದನ್ನೂ ಓದಿ:ಸಿನಿಮಾದಿಂದ ವೆಬ್​ಸೀರೀಸ್​ಗೆ ಎಂಟ್ರಿ ಕೊಟ್ಟ ರಕ್ಷಿತ್​ ಶೆಟ್ಟಿ; ಜನುಮದಿನದಂದು ಹೊರಬಿತ್ತು ಮೇಜರ್​ ಅಪ್ಡೇಟ್
ಜಾತಿ ಆಧಾರಿತ ಜನಗಣತಿ ಕುರಿತು ಮಾತನಾಡಿದ ಕೆ.ಸಿ.ತ್ಯಾಗಿ, ದೇಶದ ಯಾವ ಪಕ್ಷವೂ ಜಾತಿ ಆಧಾರಿತ ಜನಗಣತಿಯನ್ನು ತಿರಸ್ಕರಿಸಿಲ್ಲ. ಜಾತಿ ಆಧಾರಿತ ಜನಗಣತಿ ಇಂದಿನ ಅಗತ್ಯವಾಗಿದೆ. ನಾವು ಅದನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ. ಯಾವುದೇ ಪೂರ್ವ ಷರತ್ತುಗಳಿಲ್ಲ. ಬೇಷರತ್ ಬೆಂಬಲವಿದೆ. ಆದರೆ ಬಿಹಾರಕ್ಕೆ ವಿಶೇಷ ಸ್ಥಾನಮಾನ ಸಿಗಬೇಕು ಎಂಬುದು ನಮ್ಮ ಮನಸ್ಸಲ್ಲಿದೆ.
ಏಕರೂಪದ ನಾಗರಿಕ ಸಂಹಿತೆಗೆ ಕುರಿತ ತೀರ್ಮಾನವನ್ನು ಬೆಂಬಲಿಸಲಿದೆ ಎಂದು ಸ್ಪಷ್ಟಪಡಿಸಿದರು. ಅಗ್ನಿವೀರ್ ಯೋಜನೆಗೆ ವಿರೋಧವಿದೆ. ಹೀಗಾಗಿ, ಮರುಪರಿಶೀಲಿಸಲು ಕೋರುತ್ತೇವೆ. ಆದರೆ, ನಾವು ಇದನ್ನು ವಿರೋಧಿಸುತ್ತಿಲ್ಲ ಎಂದು ಸಂಯುಕ್ತಾ ಜನತಾದಳದ ಹಿರಿಯ ನಾಯಕ ಕೆ.ಸಿ. ತ್ಯಾಗಿ ಹೇಳಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five + eight =
Remember me
