ನವದೆಹಲಿ:ಭಾರೀ ಮಳೆಯಿಂದಾಗಿ ದೇಶಾದ್ಯಂತ ಜಲಪ್ರಳಯವೇ ಉಂಟಾಗಿದೆ. ಈ ನಡುವೆ ಬೆಚ್ಚಗಿನ ಸ್ಥಳಗಳನ್ನು ಹುಡುಕಿ ಹಾವುಗಳು ಎಲ್ಲೆಂದರಲ್ಲಿ ನುಗ್ಗುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕಿದೆ. ಇದಕ್ಕೆ ಸೂಕ್ತ ಉದಾಹರಣೆಯಾಗಿ ಅರಣ್ಯಾಧಿಕಾರಿ ಸುಶಾಂತ್ ನಂದಾ ಅವರು ಹಂಚಿಕೊಂಡಿರುವ ವಿಡಿಯೋ ನೋಡಿದರೆ ಎಂತಹವರೂ ಬೆಚ್ಚಿಬೀಳಿಸುವಂತಿದೆ.
ತೀವ್ರ ಮಳೆಯಿಂದಾಗಿ ಎಲ್ಲೆಂದರಲ್ಲಿ ನುಗ್ಗುತ್ತಿರುವ ಹಾವುಗಳು ಮನೆಯ ಅಡುಗೆ ಕೋಣೆ, ಬಟ್ಟೆಗಳಲ್ಲಿ ಅಲ್ಲದೇ ಹಾಕುವ ಚಪ್ಪಲಿ ಹಾಗೂ ಶೂ ಗಳಲ್ಲೂ ಕೂಡ ಅವಿತುಕುಳಿತಿರುತ್ತವೆ. ತಮ್ಮ ಟ್ವಿಟ್ಟರ್​ನಲ್ಲಿ ಅಧಿಕಾರಿ ಹಂಚಿಕೊಂಡಿರುವ ವಿಡಿಯೋನಲ್ಲಿ ಈ ಭಯಾನಕ ದೃಶ್ಯವನ್ನು ಕಾಣಬಹುದು.
You will find them at oddest possible places inhttps://t.co/2dzONDgCTjcareful. Take help of trained personnel.WA fwd.pic.twitter.com/AnV9tCZoKS— Susanta Nanda (@susantananda3)July 11, 2022
You will find them at oddest possible places inhttps://t.co/2dzONDgCTjcareful. Take help of trained personnel.WA fwd.pic.twitter.com/AnV9tCZoKS
ಮನೆಯೊಂದರ ಚಪ್ಪಲಿ ಸ್ಟ್ಯಾಂಡ್​​ನಲ್ಲಿ ವಿಚಿತ್ರ ಶಬ್ದ ಕೇಳಿಬರುತ್ತದೆ. ಗಾಬರಿಯಾದ ಮನೆಯವರು ಇದು ಹಾವಿನದ್ದೇ ಇರಬಹುದೆಂದು ಊಹಿಸಿ ಹಾವು ತಜ್ಞರನ್ನು ಕರೆಸುತ್ತಾರೆ. ಶೂ ನಲ್ಲೇ ಅವಿತುಕುಳಿತಿರುವ ಬಗ್ಗೆ ಖಚಿತಗೊಂಡು ಅದೇ ಶೂ ಬಳಿ ರಾಡ್​​ನಿಂದ ಮುಟ್ಟಿದ ಕೂಡಲೇ ಗಾಬರಿಗೊಂಡ ಹಾವು ಹೆಡೆ ಎತ್ತಿ ನಿಲ್ಲುತ್ತದೆ. ಈ ಭಯಾನಕ ವಿಡಿಯೋ ಈಗ ಭಾರೀ ವೈರಲ್​ ಆಗುತ್ತಿದೆ. ವಿಶೇಷವಾಗಿ ಮಾನ್ಸೂನ್​ ಸಮಯದಲ್ಲಿ ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿ ಸಲಹೆ ನೀಡಿದ್ದಾರೆ.(ಏಜೆನ್ಸೀಸ್​)
ವಿಶ್ವದ ಶ್ರೇಷ್ಠ ಸ್ಥಳಗಳ ಪೈಕಿ ಭಾರತದ ಈ ಎರಡು ರಾಜ್ಯಗಳ ನಗರಗಳಿಗೂ ಸ್ಥಾನ! ಇಲ್ಲಿದೆ ವಿವರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 6 =
Remember me
