ದೆಹಲಿ:ರೈಲು ಪ್ರಯಾಣಿಕರಿಗೆ ಊಟದಲ್ಲಿ ಜಿರಳೆ ಪತ್ತೆಯಾದ ಪರಿಣಾಮ, ಆಹಾರ ಪೂರೈಕೆದಾರರಿಗೆ (ಕೆಟರಿಂಗ್​​) ಭಾರಿ ದಂಡ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ.ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕನೊಬ್ಬ ರಾಣಿ ಕಮಲಾಪತಿ (ಹಬೀಬ್‌ಗಂಜ್)-ಹಜರತ್ ನಿಜಾಮುದ್ದೀನ್​ ರೈಲಿನಲ್ಲಿ ಪ್ರಯಾಣಿಸತ್ತಿದ್ದ ವೇಳೆ ಊಟವನ್ನು ಆರ್ಡರ್ ಮಾಡಿದ್ದ. ಆದರೆ ಊಟ ಬಂದ ತಕ್ಷಣ ತನ್ ಪಾರ್ಸೆಲ್​ನ್ನು ತೆರೆದು ನೋಡಿದಾಗ ಜಿರಳೆ ಕಂಡು ಬಂದಿದೆ. ಕೂಡಲೇ ಆತ ಈ ಕುರಿತು ಟ್ವಿಟರ್​ನಲ್ಲಿ ಮಾಹಿತಿನ್ನು ಪೋಟೋ ಸಮೇತ ಹಂಚಿಕೊಂಡು ರೈಲುಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾನೆ.ಇದನ್ನೂ ಓದಿ:ಸಮಾಲೋಚನೆ ವೇಳೆ ಡಾಕ್ಟರ್​​ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ರೋಗಿ: ಮುಂದೆ ನಡೆದದ್ದು..ಪ್ರಯಾಣಿಕರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, IRCTCಯು ಅಹಿತಕರ ಅನುಭವಕ್ಕಾಗಿ ಕ್ಷಮೆಯಾಚಿಸಿದ್ದು ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದೆ. ಆಹಾರ ತಯಾರಿಕೆಯ ಸಮಯದಲ್ಲಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಸೇವಾ ಪೂರೈಕೆದಾರರಿಗೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದೆ.ವೆಸ್ಟ್ ಸೆಂಟ್ರಲ್ ರೈಲ್ವೇ ವಕ್ತಾರರು, ಪ್ರಯಾಣಿಕರಿಗೆ ಕೂಡಲೇ ಪರ್ಯಾಯ ಆಹಾರವನ್ನು ತ್ವರಿತವಾಗಿ ನೀಡಲಾಗಿದೆ. ಲೋಪಕ್ಕೆ ಕಾರಣವಾದ ಕೆಟರಿಂಗ್​ನವರಿಗೆ 25,000 ರೂ. ದಂಡವನ್ನು ವಿಧಿಸಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಹೆಚ್ಚುವರಿಯಾಗಿ, ಭವಿಷ್ಯದಲ್ಲಿ ಇದೇ ರೀತಿಯ ಘಟನೆಗಳನ್ನು ತಡೆಗಟ್ಟಲು ಪರವಾನಗಿದಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 5 =
Remember me
