ನವದೆಹಲಿ:ಹೊರಗಡೆಯ ಆಹಾರದಲ್ಲಿ ಬೇರೆ ಏನಾದರೂ ಇರುವುದು ಕಂಡು ಬಂದು ಆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವಂಥದ್ದು ಹಿಂದೆ ಹಲವು ಸಲ ನಡೆದಿದೆ. ಅಂಥದ್ದೇ ಒಂದು ಪ್ರಕರಣ ಈಗ ನಡೆದಿದ್ದು, ವಿಮಾನದಲ್ಲಿ ನೀಡಿದ್ದ ಆಹಾರದಲ್ಲಿ ಜಿರಳೆ ಇತ್ತು ಎಂಬ ಪೋಸ್ಟ್ ವೈರಲ್​ ಆಗಿದೆ.
ಏರ್​ ವಿಸ್ತಾರ ವಿಮಾನದಲ್ಲಿ ನೀಡಿದ್ದ ಆಹಾರದಲ್ಲಿ ಸಣ್ಣ ಜಿರಳೆ ಸಿಕ್ಕಿದೆ ಎಂಬುದಾಗಿ ಪ್ರಯಾಣಿಕ ನಿಕುಲ್ ಸೋಲಂಕಿ ಎಂಬವರು ನಿನ್ನೆ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಪರ-ವಿರೋಧವಾಗಿ ಹಲವರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದು, ಕಂಪನಿಯ ಅಧಿಕೃತ ಖಾತೆಯಿಂದ ಮತ್ತು ಸಿಇಒ ಕೂಡ ಪ್ರತ್ಯೇಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
“ನಮ್ಮ ಎಲ್ಲ ಆಹಾರವೂ ಉನ್ನತ ಗುಣಮಟ್ಟವನ್ನು ಮನಸಿನಲ್ಲಿ ಇರಿಸಿಕೊಂಡೇ ತಯಾರಿಸಲಾಗುತ್ತದೆ. ನಿಮ್ಮ ಪ್ರಯಾಣದ ವಿವರವನ್ನು ನಮಗೆ ನೇರವಾಗಿ ಕಳಿಸಿ, ಈ ಬಗ್ಗೆ ಪರಿಶೀಲಿಸುತ್ತೇವೆ” ಎಂಬುದಾಗಿ ಏರ್ ವಿಸ್ತಾರದ ಅಧಿಕೃತ ಹ್ಯಾಂಡಲ್​ನಿಂದ ಪ್ರತಿಕ್ರಿಯಿಸಲಾಗಿದೆ.
Small cockroach in air Vistara mealpic.twitter.com/YRfYOvr2Nk— NIKUL SOLANKI (@manikul008)October 14, 2022
Small cockroach in air Vistara mealpic.twitter.com/YRfYOvr2Nk
ಅಂದಹಾಗೆ ಇದಕ್ಕೆ ಪ್ರತಿಕ್ರಿಯೆಯಾಗಿ ನಿಕುಲ್ 2022ರ ಆ. 31ರಂದು ತಾವು ಪ್ರಯಾಣಿಸಿದ್ದ ಬಗ್ಗೆ ದಾಖಲೆ ಲಗತ್ತಿಸಿದ್ದರು. ಇದನ್ನು ನೋಡಿದ ಜನರು ಕೆಲವರು ಆರೋಪ ಹೊರಿಸಿದ್ದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎರಡು ತಿಂಗಳ ಕಾಲ ಸುಮ್ಮನಿದ್ದಿದ್ದು ಯಾಕೆ ಎಂಬುದಾಗಿ ಹಲವರು ಟೀಕಿಸಿದ್ದಾರೆ.
pic.twitter.com/Ao681qHUsh— NIKUL SOLANKI (@manikul008)October 14, 2022
pic.twitter.com/Ao681qHUsh
ಇನ್ನು ಜೆಟ್​ ಏರ್​ವೇಸ್ ಸಿಇಒ ಸಂಜಯ್ ಕಪೂರ್​ ಕೂಡ ಈ ವಿಚಾರವಾಗಿ ರಿಪ್ಲೈ ಮಾಡಿದ್ದಾರೆ. “ವಿಮಾನದಲ್ಲಿ ನೀಡಿದ ಆಹಾರದಲ್ಲಿ ಜಿರಳೆ ಇತ್ತು ಎನ್ನಲಾದ ಟ್ವಿಟರ್ ಪೋಸ್ಟ್​ ಹರಿದಾಡುತ್ತಿದೆ. ಇದೊಂದೇ ಪೋಸ್ಟ್​ ಇರುವ, ಬರೀ ಮೂರು ಫಾಲೋವರ್ ಇರುವ ಖಾತೆಯಿಂದ, ಪ್ರಯಾಣದ 2 ತಿಂಗಳ ಬಳಿಕ ಈ ರೀತಿ ಪೋಸ್ಟ್ ಮಾಡಿರುವುದು ಅನುಮಾನಾಸ್ಪದವಾಗಿದೆ” ಎಂಬುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Photo of a supposed cockroach in airline meal doing the rounds on Twitter. Posted by someone with just 3 followers, no other posts, and 2 months after the flight. Screams "fishy". Media, please do some basic checks before taking such posts at face value. This is a hit-job.— Sanjiv Kapoor (@TheSanjivKapoor)October 15, 2022
Photo of a supposed cockroach in airline meal doing the rounds on Twitter. Posted by someone with just 3 followers, no other posts, and 2 months after the flight. Screams "fishy". Media, please do some basic checks before taking such posts at face value. This is a hit-job.
ಕಾಂತಾರ: 2 ವಾರ ಕಳೆದರೂ ತಗ್ಗದ ಅಬ್ಬರ; ಬಾಲಿವುಡ್ ಚಿತ್ರಗಳೆರಡೂ ತತ್ತರ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 8 =
Remember me
