ಮುಂಬೈ:ಯಾವುದಾದರೂ ವಸ್ತು ಕಳವಾದರೆ, ಅದನ್ನು ಪತ್ತೆ ಮಾಡಿಸಿ ಪಡೆಯುವ ಪ್ರಯತ್ನ ನಿರಂತರವಾಗಿದ್ದರೆ ಕೆಲವೇ ದಿನಗಳಲ್ಲಿ ಸಿಕ್ಕಿಬಿಡುತ್ತದೆ. ಇಲ್ಲವೇ ಐದಾರು ತಿಂಗಳು, ಗರಿಷ್ಠ ಎಂದರೆ ಒಂದೆರಡು ವರ್ಷದಲ್ಲಿ ಪತ್ತೆಯಾಗಿ ಬಿಡಬಹುದು. ಅದಾಗ್ಯೂ ಸಿಗಲಿಲ್ಲ ಎಂದರೆ ಇನ್ನು ಅದು ಸಿಗುವುದು ಅನುಮಾನವೇ ಎಂದು ಕಳೆದುಕೊಂಡವರು ಅಥವಾ ಪತ್ತೆ ಮಾಡಬೇಕಾದವರು ಕೈಚೆಲ್ಲಿ ಬಿಡುವ ಸಾಧ್ಯತೆಯೇ ಹೆಚ್ಚು.
ಆದರೆ ಇಲ್ಲಿ ಅಂಥದ್ದೇ ಒಂದು ಪ್ರಕರಣದಲ್ಲಿ ಕಳವಾದ ವಸ್ತು ಕೊನೆಗೂ ಹಲವು ವರ್ಷಗಳ ಬಳಿಕ ಸಿಕ್ಕಿದ್ದು, ವಾರಸುದಾರರ ಕೈಗೆ ಸೇರಿದೆ. ಅಂದಹಾಗೆ ಕಳೆದುಹೋಗಿದ್ದು ಸಣ್ಣ ಮೊತ್ತದ ವಸ್ತುವಲ್ಲ, ಬದಲಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ. ಅದು ಸಿಕ್ಕಿದ್ದು ಬರೋಬ್ಬರಿ 24 ವರ್ಷಗಳ ಬಳಿಕ.

ಮಹಾರಾಷ್ಟ್ರದ ಕೊಲಾಬ ನಿವಾಸಿ ಅರ್ಜನ್ ದಾಸ್ವಾನಿ ಕುಟುಂಬಕ್ಕೆ ಕೊಲಾಬ ಪೊಲೀಸರು ಚಿನ್ನಾಭರಣಗಳನ್ನು ತಲುಪಿಸಿದ್ದಾರೆ. 1998ರಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಈ ಕುಟುಂಬದವರು ಕಳೆದುಕೊಂಡಿದ್ದ 2 ಪುರಾತನ ಚಿನ್ನದ ನಾಣ್ಯ, 3 ಬ್ರೇಸ್​ಲೆಟ್​​ ಮತ್ತು 2 ಚಿನ್ನದ ಗಟ್ಟಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದು, ಅದನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗಿದೆ ಎಂದು ಕೊಲಾಬ ಎಸಿಪಿ ಪಾಂಡುರಂಗ ಶಿಂಧೆ ಹೇಳಿದ್ದಾರೆ.ಇನ್ನು ಈ ಪ್ರಕರಣ ಪತ್ತೆಯಾದ ಬಗೆ, ಕದ್ದ ಆರೋಪಿಗಳ ಕುರಿತ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. –ಏಜೆನ್ಸೀಸ್
ಪ್ರಧಾನಿಗೇ ನೇರ ತಲುಪಿತು ಧರ್ಮಸ್ಥಳದ ಪ್ರಸಾದ; ಶಾಸಕರು ಮೋದಿಗೆ ನೀಡಿದರು ಸ್ವರ್ಣಖಚಿತ ಸ್ಫಟಿಕ ರುದ್ರಾಕ್ಷಿ ಹಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 15 =
Remember me
