ಲಖನೌ:ಕಾಲೇಜಿನ ಟಾಯ್ಲೆಟ್​ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಅಸಾಮಗಢದ ಡಿಎವಿ ಪಿಜಿ ಕಾಲೇಜಿನಲ್ಲಿ ನಡೆದಿದ್ದು, ವಿದ್ಯಾರ್ಥಿಗಳ ಆಕ್ರೋಶ ಬಳಿಕ ಸಿಸಿಟಿವಿ ಕ್ಯಾಮೆರಾವನ್ನು ತೆರವುಗೊಳಿಸಲಾಗಿದೆ.
ನಮ್ಮ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುವ ಯತ್ನ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರಾಂಶುಪಾಲರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಳಿಕ ಸಿಸಿಟಿವಿ ಕ್ಯಾಮೆರಾ ತೆರವುಗೊಳಿಸಲಾಯಿತು.
ಇದನ್ನೂ ಓದಿ:ಸಾಲ ಮಾಡಿ ಲಾಟರಿ ಖರೀದಿಸಿದ ಕೂಲಿಕಾರನಿಗೆ ಜಾಕ್​ಪಾಟ್​! ಬಹುಮಾನದ ಮೊತ್ತ ಕೇಳಿದ್ರೆ ಬೆರಗಾಗ್ತೀರಾ
ಕಾಲೇಜು ಆವರಣದಲ್ಲಿ ನೀರಿನ ಟ್ಯಾಪ್‌ಗಳು ನಿಯಮಿತವಾಗಿ ಕಾಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಲೇಜುಗಳ ವಿವಿಧೆಡೆ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಇದರ ಭಾಗವಾಗಿ ಶೌಚಾಲಯದ ಒಳಗೂ ಕ್ಯಾಮೆರಾ ಹಾಕಲಾಗಿತ್ತು. ಇದನ್ನು ಕಂಡ ವಿದ್ಯಾರ್ಥಿಗಳು ಕಾಲೇಜು ಮಂಡಳಿ ವಿರುದ್ಧ ಕಿಡಿಕಾರಿದ್ದರು.
ಪ್ರಾಂಶುಪಾಲರ ಕಚೇರಿ ಮುಂದೆ ಧರಣಿ ಕುಳಿತ ಬಳಿಕ ಶೌಚಾಲಯದಲ್ಲಿ ತಪ್ಪಾಗಿ ಕ್ಯಾಮೆರಾ ಅಳವಡಿಸಲಾಗಿದ್ದು, ಅದನ್ನು ತಕ್ಷಣವೇ ತೆಗೆದುಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿಗೆ ವಿವಾದ ಸುಖಾಂತ್ಯ ಕಂಡಿದೆ.(ಏಜೆನ್ಸೀಸ್​)
ಬೆಂಗಳೂರಿನಲ್ಲಿದ್ದಾರೆ ಶೂ ಕಳ್ಳರು; ಮಧ್ಯರಾತ್ರಿ ಅಪಾರ್ಟ್​ಮೆಂಟ್​ಗೆ ನುಗ್ಗುತ್ತಾರೆ ಈ ಖದೀಮರು!

ನಿಮ್ಮ ಕಣ್ಣಿಗೊಂದು ಸವಾಲ್​! ಈ ಫೋಟೋದಲ್ಲಿರುವ ಟೆನಿಸ್​ ಬಾಲ್​ ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್…

ಮತ್ತೆ ಕನ್ನಡಕ್ಕೆ ಶಿಲ್ಪಾ ಶೆಟ್ಟಿ; ಪ್ರೇಮ್​ ನಿರ್ದೇಶನದ ‘ಕೆಡಿ’ ಚಿತ್ರದಲ್ಲಿ ನಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − four =
Remember me
