ನಾಡಿಯಾಡ್:ಡ್ರೈವರ್​ನ ಹುಚ್ಚು ಧೈರ್ಯದಿಂದಾಗಿ ಕಾಲೇಜು ಬಸ್ಸೊಂದು ಅಂಡರ್​ ಪಾಸ್​ನಲ್ಲಿ ಸಿಲುಕಿಕೊಂಡಿರುವ ಘಟನೆ ಗುಜರಾತ್​ನ ಖೇಡಾ ಜಿಲ್ಲೆಯ ನಾಡಿಯಾಡ್ ಪ್ರದೇಶದಲ್ಲಿ ನಡೆದಿದೆ.ಶನಿವಾರ ಬೆಳಿಗ್ಗೆ ಭಾರೀ ಮಳೆಯಿಂದಾಗಿ ನಗರದಾದ್ಯಂತ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದ್ದು, ವಿವಿಧ ಭಾಗಗಳಲ್ಲಿ ಜಲಾವೃತವಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ಪ್ರವಾಹಕ್ಕೆ ಒಳಗಾದ ನಾಡಿಯಾಡ್​ನ ಅಂಡರ್​ ಪಾಸ್​ನಲ್ಲಿ ನೀರು ತುಂಬಿಕೊಂಡಿದ್ದರೂ ಬಸ್​ ಡ್ರೈವರ್​ ಅಪಾಯವನ್ನು ಲೆಕ್ಕಿಸದೇ ಹುಚ್ಚು ಧೈರ್ಯದಿಂದ ಬಸ್​ನ್ನು ಹಾಗೇ ಚಲಾಯಿಸಿಕೊಂಡು ಹೋಗಿದ್ದಾನೆ.ಇದನ್ನೂ ಓದಿ:ನಳಿನ್​ ಕುಮಾರ್​ ಕಟೀಲ್​ರನ್ನು ಕಾಮಿಡಿ ಕಿಲಾಡಿ ಎನ್ನುವುದು ಇದೇ ಕಾರಣಕ್ಕೆ: ಕಾಂಗ್ರೆಸ್​ ಟಾಂಗ್​ಈ ವೇಳೆ ಬಸ್​ ಅಂಡರ್​ ಪಾಸ್​​ನಲ್ಲಿಯೇ ಸಿಲುಕಿದ್ದು ಕೂಡಲೇ ಸ್ಥಳೀಯರು ತಕ್ಷಣ ಸಹಾಯಕ್ಕಾಗಿ ಧಾವಿಸಿ, ತುರ್ತು ಕಿಟಕಿಗಳ ಮೂಲಕ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಈ ಕುರಿತಾದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು ವಿದ್ಯಾರ್ಥಿಗಳ ಪ್ರಾಣವನ್ನು ಲೆಕ್ಕಿಸದೇ ಬಸ್​ ಚಲಾಯಿಸಿದ ಡ್ರೈವರ್​ನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಬಿಪರ್‌ಜಾಯ್‌ ಚಂಡಮಾರುತದ ಪರಿಣಾಮದಿಂದಾಗಿ ಗುಜರಾತ್​ನಲ್ಲಿ ಲಕ್ಷಗಟ್ಟಲೆ ಜನಜೀವನ ನಿರಾಶ್ರಿತರಾಗಿದ್ದು ಮತ್ತು ವಿದ್ಯುತ್‌ ಇಲ್ಲದೇ ಸಾವಿರಾರು ಹಳ್ಳಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ, ಈ ನಡುವೆ ಗುಜರಾತ್​ನ ವಿವಿಧ ಭಾಗಗಳಲ್ಲಿ ಭಾರೀ ಮಳೆ ಸುರಿದಿದ್ದು, ಇದು ಕೆಲವು ಜಿಲ್ಲೆಗಳಲ್ಲಿ ಪ್ರವಾಹವನ್ನು ಸೃಷ್ಟಿಸಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − five =
Remember me
