ನವದೆಹಲಿ:ಇದು ಪುರುಷರಿಗೆ ಸಂತೋಷದ ಸಂಗತಿ. ಮತ್ತೊಂದು ರೀತಿಯಲ್ಲಿ ಇದು ಅವರಿಗೆ ಬೇಸರದ ವಿಷಯವಾದರೂ ಅಚ್ಚರಿ ಏನಲ್ಲ. ಆದರೆ ಗೃಹಿಣಿಯರಿಗೆ ಇದು ಸಂತೋಷದ ವಿಚಾರ ಆಗಿರುವ ಸಾಧ್ಯತೆಯೇ ಅಧಿಕ. ಅಸಲಿಗೆ ಇದು ಆತ್ಮಹತ್ಯೆಯ ವಿಷಯ, ಇದರಲ್ಲೇನು ಸಂತೋಷ ಎಂಬ ಕುತೂಹಲ ಸಹಜ. ಆದರೆ ಆತ್ಮಹತ್ಯೆಗಳಿಗೆ ಸಂಬಂಧಿಸಿದಂತೆ ನಡೆದ ಅಧ್ಯಯನವೊಂದು ಸ್ತ್ರೀ-ಪುರುಷರಿಬ್ಬರೂ ಸಂತೋಷ-ಸಮಾಧಾನ ಪಟ್ಟುಕೊಳ್ಳುವಂಥ ಅಂಶವೊಂದನ್ನು ಬಹಿರಂಗಪಡಿಸಿದೆ.
ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ ಜಗತ್ತಿನಲ್ಲಿ ಆತ್ಯಹತ್ಯೆ ಮಾಡಿಕೊಳ್ಳುವವರ ಪೈಕಿ ಸ್ತ್ರೀಯರಿಗಿಂತ ಪುರುಷರೇ ಅಧಿಕ ಎಂಬುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅಧ್ಯಯನವೊಂದು ನಡೆದಿದ್ದು, ಅದು ಪುರುಷರೇ ಏಕೆ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬುದರ ಹಿಂದಿನ ಅಂಶವನ್ನು ಕಂಡುಹಿಡಿದಿದೆ. ಕೊಲೊರಡೊ ಸ್ಟೇಟ್​ ಯುನಿವರ್ಸಿಟಿ ಇಂಥದ್ದೊಂದು ಅಧ್ಯಯನ ನಡೆಸಿದೆ.
ಇದನ್ನೂ ಓದಿ:ಕೊವ್ಯಾಕ್ಸಿನ್‌ಗಿಂತ ಕೋವಿಶೀಲ್ಡ್ ಲಸಿಕೆ ಬೆಸ್ಟ್ ಅಂತೆ!; ಯಾಕೆ ಅಂತ ಹೇಳುತ್ತೆ ಈ ಅಧ್ಯಯನ…
ಈ ಅಧ್ಯಯನದಿಂದ ಹೊರಹೊಮ್ಮಿರುವ ಪ್ರಮುಖ ಅಂಶ ಪುರುಷರಿಗೆ ಆತ್ಮಹತ್ಯೆಯ ಸಾಧ್ಯತೆಯಿಂದ ಪಾರಾಗುವ ಪರಿಹಾರವನ್ನು ಸೂಚಿಸಿ, ಸಮಾಧಾನವನ್ನು ನೀಡುವಂತಿದೆ. ಮತ್ತೊಂದೆಡೆ ಇದು ಗೃಹಿಣಿಯರ ಸಂತೋಷವನ್ನು ಹೆಚ್ಚಿಸುವಂತಿದೆ. ಮನೆ ಯಜಮಾನ ಆತ್ಮಹತ್ಯೆಗೆ ಒಳಗಾಗದಂತೆ ತಪ್ಪಿಸುವ ದಾರಿಯೊಂದು ಸಿಕ್ಕಿರುವುದು ಸಂತೋಷಕ್ಕೆ ಕಾರಣವಾಗುವುದು ಸಹಜವೇ ಆಗಿದ್ದರೂ, ಅವರ ಸಂತೋಷಕ್ಕಿರುವ ಮತ್ತೊಂದು ಕಾರಣ ಕೌಟುಂಬಿಕ ಆರೈಕೆ. ಆರ್ಥಿಕ ಸಂಪನ್ಮೂಲ ಪೂರೈಕೆಗಷ್ಟೇ ಪುರುಷ ಹೆಚ್ಚಿನ ಒತ್ತು ನೀಡುತ್ತಿದ್ದು, ಕೌಟುಂಬಿಕ ಆರೈಕೆಗೆ ಹೆಚ್ಚಿನ ಆದ್ಯತೆ ನೀಡದಿರುವುದೇ ಆತ್ಮಹತ್ಯೆ ಪ್ರಕರಣಗಳಲ್ಲಿ ಪುರುಷರ ಸಂಖ್ಯೆ ಹೆಚ್ಚಿರಲು ಪ್ರಮುಖ ಕಾರಣ ಎಂಬುದು ಈ ಅಧ್ಯಯನದ ತಿರುಳು.
ಇದನ್ನೂ ಓದಿ:ಎರಡೂ ಕೈಲಿ ಒಂದೊಂದೇ ಬೆರಳಿದ್ರೂ ಬರೆಯೋದು ಕಲಿತು ಡಿಗ್ರಿ ಮಾಡಿದ ಅಂಗವಿಕಲೆಗೆ ಒಲಿದು ಬಂದ ವರ!
ಪುರುಷರು ಕೌಟುಂಬಿಕ ಆರೈಕೆ ನಡೆಸುವುದಕ್ಕಿಂತ ಆರ್ಥಿಕ ಜವಾಬ್ದಾರಿ ನಿಭಾಯಿಸಲಿಕ್ಕೇ ಹೆಚ್ಚಿನ ಒತ್ತು ಕೊಡುತ್ತಿರುತ್ತಾರೆ. ಯಾವಾಗ ಅವರ ಆರ್ಥಿಕ ಸಂಪನ್ಮೂಲವಾದ ಉದ್ಯೋಗ ಅಥವಾ ಉದ್ಯಮ ಸಂಕಷ್ಟಕ್ಕೆ ಒಳಗಾಗುತ್ತದೋ ಅವರು ಕುಸಿದುಹೋಗಿ ಬಿಡುತ್ತಾರೆ. ಆದರೆ ಆರ್ಥಿಕ ಜವಾಬ್ದಾರಿ ನಿಭಾಯಿಸುವ ಜೊತೆಜೊತೆಗೆ ಕೌಟುಂಬಿಕ ಆರೈಕೆಯನ್ನೂ ನಿಭಾಯಿಸಿದಲ್ಲಿ ಸಂಕಷ್ಟದ ಸಂದರ್ಭದಲ್ಲಿ ಅವರಿಗೆ ಆತ್ಮಹತ್ಯೆಯ ಯೋಚನೆ ಬರುವುದು ವಿರಳ ಎನ್ನುತ್ತಾರೆ ಈ ಅಧ್ಯಯನ ನಡೆಸಿದ ಪ್ರಮುಖರಲ್ಲಿ ಒಬ್ಬರಾಗಿರುವ ಸೈಕಾಲಜಿ ಪ್ರೊಫೆಸರ್ ಸಿಲಿವಿಯಾ ಸಾರಾ ಕೆನೆಟ್ಟೊ.
ಇದನ್ನೂ ಓದಿ:ಆತ್ಮಹತ್ಯೆಯಿಂದ ಪತ್ನಿ ಸತ್ತ ಬೆನ್ನಿಗೇ ನೇಣು ಹಾಕಿಕೊಂಡ ಪತಿ; 4 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಪ್ರೇಮಿಗಳು..
ಮಕ್ಕಳಿಗೆ ಪಾಠ ಹೇಳಿಕೊಡುವುದು, ಮನೆಯಲ್ಲಿರುವ ಅವಲಂಬಿತ ಹಿರಿಯರ ಆರೈಕೆ ಮಾಡುವುದು ಸೇರಿ ಇನ್ನಿತರ ಕೌಟುಂಬಿಕ ನಿರ್ವಹಣೆಯಲ್ಲಿ ತೊಡಗಿಸಿಕೊಂಡರೆ ಪುರುಷರು ಹೆಚ್ಚಾಗಿ ಆತ್ಮಹತ್ಯೆಗೆ ಒಳಗಾಗುವುದನ್ನು ತಡೆಯಬಹುದು ಎಂಬುದು ಈ ಅಧ್ಯಯನದ ಪ್ರಮುಖ ಅಂಶ. ಅಮೆರಿಕ, ಆಸ್ಟ್ರಿಯಾ, ಬೆಲ್ಜಿಯಂ, ಕೆನಡ, ಜಪಾನ್​ ಸೇರಿ ಸುಮಾರು 20 ದೇಶಗಳಲ್ಲಿನ ಆತ್ಮಹತ್ಯೆ ಪ್ರಕರಣ, ಪುರುಷರಿಂದ ಕೌಟುಂಬಿಕ ಆರೈಕೆ, ನಿರುದ್ಯೋಗ ಇತ್ಯಾದಿ ವಿಚಾರಗಳನ್ನು ಅಭ್ಯಸಿಸಿ ಈ ಅಧ್ಯಯನ ನಡೆಸಲಾಗಿದೆ. ಎಲ್ಲಿ ಪುರುಷರು ಕೌಟುಂಬಿಕ ಆರೈಕೆಯಂಥ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರೋ ಅಲ್ಲಿ ಪುರುಷರ ಆತ್ಮಹತ್ಯೆ ಪ್ರಕರಣ ಕಡಿಮೆ ಇರುವುದು ಕಂಡುಬಂದಿದೆ.
ಇದನ್ನೂ ಓದಿ:ಮದ್ವೆಯಾಗಿ ನಾಲ್ಕೇ ದಿನಗಳಲ್ಲಿ ಕರೊನಾಗೆ ಬಲಿಯಾದ ಯುವತಿ; ಸೋಂಕಿರುವುದು ಆಕೆಯ ಮರಣದ ಬಳಿಕ ಗೊತ್ತಾಯಿತು..!
ಪುರುಷರ ಕೌಟುಂಬಿಕ ಆರೈಕೆ ಹೆಚ್ಚಿರುವ ದೇಶಗಳಲ್ಲಿ ಹೆಚ್ಚಿನ ನಿರುದ್ಯೋಗವಿದ್ದರೂ ಅದು ಆತ್ಮಹತ್ಯೆಯೊಂದಿಗೆ ತಳುಕು ಹಾಕಿಕೊಂಡಿಲ್ಲ. ಪುರುಷರ ಕೌಟುಂಬಿಕ ಆರೈಕೆ ಕಡಿಮೆ ಇದ್ದು, ನಿರುದ್ಯೋಗ ಹೆಚ್ಚಿರುವ ದೇಶಗಳಲ್ಲಿ ಅದು ಪುರುಷರ ಆತ್ಮಹತ್ಯೆಯೊಂದಿಗೆ ತಳುಕು ಹಾಕಿಕೊಂಡಿರುವುದು ಈ ಅಧ್ಯಯನದಲ್ಲಿ ತಿಳಿದು ಬಂದಿದೆ. ಒಟ್ಟಿನಲ್ಲಿ ಕೌಟುಂಬಿಕ ಆರೈಕೆಯಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಪುರುಷರು ಆರ್ಥಿಕ ಸಂಕಷ್ಟದಲ್ಲಿ ಗಟ್ಟಿಯಾಗಿರುತ್ತಾರೆ ಎನ್ನುತ್ತಿದೆ ಈ ಅಧ್ಯಯನ.
ಇದು ಲಸಿಕೆ​ಗೂ ಸವಾಲೊಡ್ಡುವ ಕರೊನಾ ವೈರಸ್​; ಚಿಂತೆ ಹೆಚ್ಚಿಸಿದೆ ಈ ಹೊಸ ವೇರಿಯಂಟ್​!

ದೈಹಿಕ ಅಂತರ, ಮಾಸ್ಕ್​ ಇಲ್ಲದೆ ಜನರ ಮಧ್ಯೆ ಸಚಿವರ ಪತ್ನಿಯ ಜನ್ಮದಿನಾಚರಣೆ; ಕರೊನಾಗೆ ಡೋಂಟ್​ ಕೇರ್!?

ಅದು ದೇವೇಗೌಡರು ಜನರಿಂದ ಗಳಿಸಿದ ಪದವಿ; ಫಾದರ್ಸ್ ಡೇಯಂದು ಕುಮಾರಸ್ವಾಮಿ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
