ನವದೆಹಲಿ:33ನೇ ಆವೃತ್ತಿಯ ಪ್ಯಾರಿಸ್​ ಒಲಿಂಪಿಕ್ಸ್​ಮ ಕುಸ್ತಿ ವಿಭಾಗದಲ್ಲಿ 50 ಕೆಲಿ ಸ್ಪರ್ಧೆಯಲ್ಲಿ ಫೈನಲ್​ಗೆ ಲಗ್ಗೆ ಇಟ್ಟು ಚಿನ್ನದ ಪದಕದ ನಿರೀಕ್ಷೆ ಮೂಡಿಸಿದ್ದ ಭಾರತದ  ವಿನೇಶ್​ ಪೋಗಟ್​, ತೂಕದ ಕಾರಣದಿಂದ ಒಲಿಂಪಿಕ್ಸ್​ನಿಂದ ಅನರ್ಹಗೊಳ್ಳುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಒಲಿಂಪಿಕ್​ ಸಂಘಟಕರ ಈ ಹಠಾತ್​ ನಿರ್ಧಾರದಿಂದ ಭಾರತಕ್ಕೆ ಆಘಾತವಾಗಿದ್ದು, ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದ ಕೋಟ್ಯಂತರ ಕನಸು ಭಗ್ನಗೊಂಡಿದೆ.
ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ ವಿನೇಶ್​ ಪೋಗಟ್​ ಅವರಿಗೆ ಬೆಂಬಲ ಸೂಚಿಸಿದ್ದು, ಸ್ಪೂರ್ತಿದಾಯಕ ಮಾತುಗಳನ್ನು ಆಡಿದ್ದಾರೆ. ಈ ಹಿಂದೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿನೇಶ್‌ ಪೋಗಟ್‌, ಸಾಕ್ಷಿ ಮಲಿಕ್​ ಪ್ರತಿಭಟನೆ ನಡೆಸಿದ್ದರು. ಇಂದಿನ (ಆಗಸ್ಟ್​ 07) ಫೈನಲ್​ ಪಂದ್ಯದಲ್ಲಿ ವಿನೇಶ್​ ಪೋಗಟ್​ ಗೆದ್ದರೆ ಮೋದಿ ಅವರಿಗೆ ಕರೆ ಮಾಡಿ ಅಭಿನಂದಿಸುತ್ತಾರೆಯೇ ಎಂದು ಅನೇಕರು ಪ್ರಶ್ನಿಸಿದ್ದರು. ಇದೀಗ ಅನರ್ಹಗೊಂಡ ಬೆನ್ನಲ್ಲೇ ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದು, ವಿನೇಶ್​ರನ್ನು ಸಂತೈಸಿದ್ದಾರೆ.
Vinesh, you are a champion among champions! You are India's pride and an inspiration for each and every Indian.Today's setback hurts. I wish words could express the sense of despair that I am experiencing.At the same time, I know that you epitomise resilience. It has always…
ಇದನ್ನೂ ಓದಿ:ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವವರಿಗೆ ನನ್ನ ರಾಜೀನಾಮೆ ಕೇಳುವ ನೈತಿಕತೆ ಇಲ್ಲ; ಬಿಎಸ್​ವೈ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ. ಇಂದಿನ ಹಿನ್ನಡೆ ನನಗೆ ನೋವು ತಂದಿದೆ. ಇಲ್ಲಿನ ಪದಗಳು ನಾನು ಅನುಭವಿಸುತ್ತಿರುವ ಹತಾಶೆಯ ಅರ್ಥವನ್ನು ವ್ಯಕ್ತಪಡಿಸಬಹುದು ಎಂದು ನಾನು ಭಾವಿಸುತ್ತೇನೆ. ಅದೇ ಸಮಯದಲ್ಲಿ, ನೀವು ಅಚಲ ಮನೋಭಾವವನ್ನು ಸಾರುತ್ತೀರಿ ಎಂದು ನನಗೆ ತಿಳಿದಿದೆ. ಸವಾಲುಗಳನ್ನು ಎದುರಿಸುವುದು ಯಾವಾಗಲೂ ನಿಮ್ಮ ಸ್ವಭಾವವಾಗಿದೆ. ಇನ್ನಷ್ಟು ಸ್ಟ್ರಾಂಗ್‌ ಆಗಿ ಮರಳಿ. ನಾವೆಲ್ಲರೂ ನಿಮ್ಮ ಬೆಂಬಲಕ್ಕೆ ಅಚಲವಾಗಿ ನಿಂತಿದ್ದೇವೆ ಎಂದು ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ.
ಮಹಿಳೆಯರ 50 ಕೆಜಿ ಕುಸ್ತಿ ಸ್ಪರ್ಧೆ ಅಡಿಯಲ್ಲಿ ವಿನೇಶ್​ ಸ್ಫರ್ಧಿಸಿದ್ದರು. ಇಂದು ರಾತ್ರಿ ಫೈನಲ್​ ಪಂದ್ಯ ನಡೆಯಲಿದ್ದು, ಅದಕ್ಕೂ ಮುನ್ನ ಬೆಳಿಗ್ಗೆ ವಿನೇಶ್​ ಅವರ ದೇಹದ ತೂಕವನ್ನು ಪರೀಕ್ಷಿಸುವ ಸಂದರ್ಭದಲ್ಲಿ ನಿಗದಿತ ತೂಕಕ್ಕಿಂತ 150 ಗ್ರಾಂ ತೂಕ ಹೆಚ್ಚಿರುವುದು ಕಂಡುಬಂದಿದೆ. ಈ ಕಾರಣದಿಂದ ಒಲಿಂಪಿಕ್ಸ್​ನಿಂದ ವಿನೇಶ್​ ಅನರ್ಹಗೊಂಡಿದ್ದಾರೆ. ಒಲಿಂಪಿಕ್ಸ್‌ ನಿಯಮದ ಪ್ರಕಾರ ತೂಕವನ್ನು ನಿರ್ವಹಿಸಲು ಸಾಧ್ಯವಾಗದ ಯಾವುದೇ ಕುಸ್ತಿಪಟುವನ್ನು ಸ್ಪರ್ಧೆಯಿಂದಲೇ ಅನರ್ಹಗೊಳಿಸಲಾಗುತ್ತದೆ ಮತ್ತು ಅವರಿಗೆ ಕೊನೆಯ ಸ್ಥಾನ ನೀಡಲಾಗುತ್ತದೆ. ಹೀಗಾಗಿ ವಿನೇಶ್​ ಪೋಗಟ್​ ಅವರು ಅನರ್ಹಗೊಂಡಿದ್ದು, ಬೆಳ್ಳಿ ಪದಕವೂ ಕೂಡ ಸಿಗುವುದಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + six =
Remember me
