ಹೈದರಾಬಾದ್:ಬಕ್ರೀದ್​ ಸಂದರ್ಭದಲ್ಲಿ ಮುಸ್ಲಿಂರ ವೇಷ ಧರಿಸಿ ಮೇಕೆಗಳನ್ನು ರಕ್ಷಿಸಿದ್ದ ಜೈನ ಸಮುದಾಯದವರನ್ನು ಅವಹೇಳನ ಮಾಡಿದ್ದ ಕಾಮಿಡಿಯನ್ ಡೇನಿಯಲ್ ಫರ್ನಾಂಡೀಸ್‌ ವಿರುದ್ಧ ಬಿಜೆಪಿಯ ಶಾಸಕ ರಾಜಾ ಸಿಂಗ್ ಗುಡುಗಿದ್ದು, ಇದೇ ಹಿನ್ನೆಲೆಯಲ್ಲಿ ಶನಿವಾರ(ಜೂ.29)ರಂದು ಹೈದರಾಬಾದ್​ನಲ್ಲಿ ನಡೆಯಬೇಕಿದ್ದ ಕಾಮಿಡಿ ಶೋ ಶೋ ರದ್ದಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಆಘಾತಕ್ಕೀಡಾಗಿದ್ದ ಮರಿಗೆರಿಲ್ಲಾ ಮತ್ತೆ ಮನುಷ್ಯನ ನಂಬಿದ್ದು ಹೇಗೆ? ಮನಮಿಡಿಯುವ ಕಥೆ ಇಲ್ಲಿದೆ ನೋಡಿ..
ಡೇನಿಯಲ್ ಫರ್ನಾಂಡೀಸ್, ಶನಿವಾರ ಸಂಜೆ 4 ಗಂಟೆಗೆ ಜ್ಯುಬಿಲಿ ಹಿಲ್ಸ್‌ನಲ್ಲಿ ಹಾರ್ಟ್ ಕಪ್ ಕಾಫಿ ತಮ್ಮ ಕಾಮಿಡಿ ಶೋ ಪ್ರದರ್ಶಿಸಬೇಕಿತ್ತು. ಆದರೆ ಜೈನರನ್ನು ಉಲ್ಲೇಖಿಸಿದ ಅವರ ಕಾಮಿಡಿ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇಷ್ಟಾಗಿಯೂ ಡೇನಿಯಲ್ ಹೈದರಾಬಾದ್​ನಲ್ಲಿ ಶೋ ನಡೆಸಲು ತೀರ್ಮಾನಿಸಿದ್ದರು. ಇದಕ್ಕೆ ಕುಪಿತರಾದ ಗೋಶಾಮಹಲ್ ಶಾಸಕ ರಾಜಾ ಸಿಂಗ್, “ನಿಮ್ಮ ಶೋ ಅನ್ನು ರದ್ದುಗೊಳಿಸಿ. ಇಲ್ಲವಾದರೆ ನೀವು ಹೈದರಾಬಾದ್ ಅಥವಾ ತೆಲಂಗಾಣಕ್ಕೆ ಭೇಟಿ ನೀಡಲು ನೂರು ಬಾರಿ ಯೋಚಿಸಿ. ನಮ್ಮ ಕಾರ್ಯಕರ್ತರು ನಿಮ್ಮನ್ನು ಥಳಿಸಲಿದ್ದಾರೆ” ಎಂದು ಎಚ್ಚರಿಸಿದ್ದರು.
ಇದೇ ವಿಚಾರವಾಗಿ ರಾಜಾ ಸಿಂಗ್, ಹೈದರಾಬಾದ್ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಶೋ ನಡೆಸಿದರೆ ಅನಾಹುತವಾಗಬಹುದು ಎಂದು ಎಚ್ಚರಿಕೆ ರವಾನಿಸಿದ್ದರು. ಶೋ ರದ್ದಾಗಿರುವುದನ್ನು ಖಾತರಿ ಪಡಿಸಿರುವ ಜ್ಯುಬಿಲಿ ಹಿಲ್ಸ್ ಪೊಲೀಸ್ ಠಾಣೆಯ ಠಾಣಾಧಿಕಾರಿ ವೆಂಕಟೇಶ್ವರ ರೆಡ್ಡಿ, ಸಂಘಟಕರು ಸ್ವಯಂಪ್ರೇರಿತವಾಗಿ ಶೋ ಅನ್ನು ರದ್ದುಗೊಳಿಸಿದ್ದಾರೆ. ಅವರು ಶೋಗೆ ಭದ್ರತೆ ನೀಡುವಂತೆ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟಿ-20 ವಿಶ್ವಕಪ್ ಸಂಭ್ರಮಾಚರಣೆ ವೇಳೆ ಅವಘಡ..ಲಂಡನ್​ನಲ್ಲಿ ಧ್ವಜ ಹಾರಿಸಲು ಹೋದ ವ್ಯಕ್ತಿ ಕಂಬದಿಂದ ಬಿದ್ದು ಗಾಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 3 =
Remember me
