ವಾಷಿಂಗ್ಟನ್​​/ಮುಂಬೈ:ನಟ ಹಾಗೂ ಸ್ಟಾಂಡ್​ಅಪ್​ ಕಾಮೆಡಿಯನ್ ವೀರ್​ ದಾಸ್​ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಅಮೆರಿಕದಲ್ಲಿ ಮಾಡಿದ ಕಾಮೆಡಿ ‘ಪರ್ಫಾರ್ಮೆನ್ಸ್​’ ಒಂದರಲ್ಲಿ ಭಾರತದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿ ಬಗ್ಗೆ ಅವರು ಆಡಿರುವ ಮಾತುಗಳು ಹಲವು ರಾಷ್ಟ್ರಭಕ್ತರ ಕೆಂಗಣ್ಣಿಗೆ ಗುರಿಯಾಗಿವೆ.
ಅಮೆರಿಕದ ವಾಷಿಂಗ್ಟನ್​ ಡಿಸಿಯಲ್ಲಿರುವ ಜಾನ್​ ಎಫ್​ ಕೆನೆಡಿ ಸೆಂಟರ್​ನಲ್ಲಿ ಐತಿಹಾಸಿಕವಾದ ಸ್ಟಾಂಡ್​ಅಪ್​ ಕಾಮೆಡಿ ಶೋ​ ಮಾಡಲು ಹೋಗಿದ್ದ ದಾಸ್​​, ತಮ್ಮ ಭಾರತದ ಬಗೆಗಿನ ವ್ಯಂಗ್ಯ ಮತ್ತು ವಿಡಂಬನೆಯ ಭಾಷಣದ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಶೇರ್​ ಮಾಡಿದ್ದಾರೆ. ‘ಐ ಕಂ ಫ್ರಂ ಟೂ ಇಂಡಿಯಾಸ್​​’ ಎಂಬ ಶೀರ್ಷಿಕೆಯಡಿ ದಾಸ್​​ ಆಡುವ ಟೀಕೆಯ ಮಾತುಗಳು ಅವರ ಅಭಿಮಾನಿಗಳ ಪ್ರಶಂಸೆ ಗಳಿಸಿದೆ. ಆದರೆ ಜೊತೆಜೊತೆಗೇ, ಹಲವು ನೆಟ್ಟಿಗರು, ತಮ್ಮ ದೇಶದ ಬಗೆಗೇ ಇನ್ನೊಂದು ದೇಶಕ್ಕೆ ಹೋಗಿ ವ್ಯಂಗ್ಯ ಮಾಡುವುದು ಎಂಥಾ ಹಾಸ್ಯ ಎಂದು ಅವರಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಹಲವು ರಾಜಕಾರಣಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ವೀರ್​ ದಾಸ್​ರ ಈ ವ್ಯಂಗ್ಯಮಯ ಮಾನೋಲಾಗ್​​ ದೇಶಕ್ಕೆ ಅವಮಾನ ಮಾಡುವಂಥದ್ದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಚಿತ್ರನಿರ್ಮಾಪಕ ಹಾಗೂ ಸಾಮಾಜಿಕ ಕಾರ್ಯಕರ್ತ ಅಶೋಕ್​ ಪಂಡಿತ್​, “ತಮ್ಮದೇ ದೇಶವನ್ನು ಪರದೇಶದಲ್ಲಿ ಜರಿಯುವುದು ಉಗ್ರವಾದ. ವೀರ್​ ದಾಸ್​​ ಮೇಲೆ ಯುಎಪಿಎ ಅಡಿ ಕೇಸು ಹಾಕಿ ಜೈಲಿಗೆ ಕಳುಹಿಸಬೇಕು” ಎಂದಿದ್ದಾರೆ.
ವೀರ್​ ದಾಸ್​ ವಿರುದ್ಧ ಅದಾಗಲೇ ಎರಡು ಪೊಲೀಸ್​ ಕಂಪ್ಲೇಂಟುಗಳೂ ದರ್ಜಾಗಿವೆ ಎನ್ನಲಾಗಿದೆ. ತಮ್ಮ ಭಾಷಣದ ಬಗೆಗಿನ ಕಾಮೆಂಟುಗಳಿಗೆ ಪ್ರತಿಕ್ರಿಯಿಸಿರುವ ದಾಸ್​​, ನನ್ನ ಭಾಷಣವು ಬೇರೆ ಬೇರೆ ಕೆಲಸ ಮಾಡುವ ಎರಡು ಪ್ರತ್ಯೇಕ ಭಾರತಗಳ ದ್ವಂದ್ವತೆಯ ಬಗೆಗಿನ ಒಂದು ವಿಡಂಬನೆಯಾಗಿದೆ… ಜಗತ್ತು ಭಾರತವನ್ನು ಗೌರವದಿಂದ ನೋಡುತ್ತದೆ ಹಾಗೂ ನಾನು ನನ್ನ ದೇಶದ ಬಗ್ಗೆ ಹೆಮ್ಮೆ ಹೊಂದಿದ್ದೇನೆ” ಎಂದು ಟ್ವಿಟರ್​ನಲ್ಲಿ ಸ್ಪಷ್ಟನೆ ನೀಡಿದ್ದಾರೆ.(ಏಜೆನ್ಸೀಸ್)
ದಾಖಲೆ ಯಶಸ್ಸಿನೊಂದಿಗೆ ವಿವಾದಕ್ಕೆ ಸಿಲುಕಿದ ಜೈಭೀಮ್​! ನಟ ಸೂರ್ಯ ಮನೆಗೆ ಪೊಲೀಸ್ ಭದ್ರತೆ

ಐಸಿಸಿ ಪುರುಷರ ಕ್ರಿಕೆಟ್​ ಸಮಿತಿ ಅಧ್ಯಕ್ಷರಾಗಿ ಸೌರವ್​ ಗಂಗೂಲಿ ನೇಮಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 13 =
Remember me
