ನವದೆಹಲಿ/ವುಹಾನ್:ವಿಶ್ವದೆಲ್ಲೆಡೆ ತಲ್ಲಣ ಸೃಷ್ಟಿಸಿರುವ ಮಾರಕ ಕರೊನಾ ವೈರಸ್ ಸೋಂಕಿತರು ಉಪಯೋಗಿಸಿದ ನಾಣ್ಯ, ನೋಟು, ಡೆಬಿಟ್/ಕ್ರೆಡಿಟ್ ಕಾರ್ಡ್​ಗಳು ಇನ್ನಿತರ ವಸ್ತುಗಳನ್ನು ರ್ಸ³ಸುವುದರಿಂದಲೂ ಈ ಸೋಂಕು ಹರಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಎಚ್ಚರಿಕೆ ನೀಡಿದೆ.
ಸೀನುವಿಕೆ, ಕೆಮ್ಮುವಿಕೆ ಯಿಂದ ಉಗುಳು ಅಂಟಿದ ಕೈಗಳಿಂದ ನೋಟು, ನಾಣ್ಯ, ಡೆಬಿಟ್ ಕಾರ್ಡ್ ಮತ್ತು ಇನ್ನಿತರ ವಸ್ತುಗಳನ್ನು ಉಪಯೋಗಿಸಿದ್ದರೆ ಸೋಂಕು ಅವುಗಳ ಮೂಲಕ ವರ್ಗಾವಣೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್​ನಿಂದ ಕೈಗಳನ್ನು ಆಗಾಗ ಸ್ವಚ್ಛಗೊಳಿಸಿ ಅಥವಾ ಉತ್ತಮ ಸೋಪುಗಳಿಂದ ಆಗಾಗ ಕೈತೊಳೆಯಿರಿ ಎಂದು ಡಬ್ಲ್ಯುಎಚ್​ಒ ಸಲಹೆ ನೀಡಿದೆ. ಆದರೆ ಈ ರೀತಿಯಲ್ಲಿ ಸೋಂಕು ತಗುಲುವ ಪ್ರಮಾಣ ಅತ್ಯಂತ ಕಡಿಮೆ ಎಂದೂ ಸ್ಪಷ್ಟಪಡಿಸಿದೆ.
ಚೀನಾದಲ್ಲಿ ಬುಧವಾರ ಮತ್ತೆ 138ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಸಾವನ್ನಪ್ಪಿದವರ ಸಂಖ್ಯೆ 2,012ಕ್ಕೆ ಏರಿದೆ. ಜತೆಗೆ 1,752 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 75,303ಕ್ಕೆ ಏರಿಕೆಯಾಗಿದೆ. ಚೀನಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರೊನಾ ಸೋಂಕಿತರಲ್ಲಿ ಈವರೆಗೆ 15,126 ಜನರು ಗುಣಮುಖರಾಗಿದ್ದು, ಇನ್ನು 12,017 ಜನರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜತೆಗೆ ಜಪಾನ್, ಸಿಂಗಾಪುರ, ಹಾಂಕಾಂಗ್ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕರೊನಾ ಸೋಂಕು ತಗುಲಿರುವ ಸುಮಾರು 100ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಐಟಿಬಿಪಿ ಶಿಬಿರದಲ್ಲಿದ್ದವರು ಬಿಡುಗಡೆ
ಚೀನಾದ ವುಹಾನ್​ನಿಂದ ರಕ್ಷಿಸಲ್ಪಟ್ಟು ದೆಹಲಿ ಸಮೀಪ ಭಾರತ-ಟಿಬೆಟ್ ಗಡಿ ಪೊಲೀಸರ ಶಿಬಿರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 406 ಜನರ ಕಡೆಯ ತಂಡವನ್ನು ಬುಧವಾರ ಮನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ಬಳಿಕ ಚೀನಾದಿಂದ ಮರಳಿದವರಲ್ಲಿ ಸೋಂಕು ಇಲ್ಲವೆಂದು ಧೃಢಪಡಿಸಿಕೊಂಡು ಫೆ.17ರಿಂದ ಹಂತಹಂತವಾಗಿ ಜನರನ್ನು ಮನೆಗೆ ಕಳುಹಿಸಲಾಗುತ್ತಿದೆ.
ಸ್ವಚ್ಛವಾಗಿ ಕೈತೊಳೆದು ಕೊಳ್ಳದಿದ್ದರೆ ಸೋಂಕಿತರು ಸ್ಪರ್ಶಿಸಿರುವ ನಾಣ್ಯ, ನೋಟು, ಡೆಬಿಟ್ ಕಾರ್ಡ್​ಗಳು, ಸೇರಿದಂತೆ ಹಲವು ವಸ್ತುಗಳ ಮೂಲಕವೂ ಕರೊನಾ ವೈರಸ್ ಪಸರಿಸುವ ಸಂಭವ ಇದೆ
| ವಿಶ್ವ ಆರೋಗ್ಯ ಸಂಸ್ಥೆ
ಹಡಗಿನಿಂದ 500ಕ್ಕೂ ಹೆಚ್ಚು ಜನರ ಸ್ಥಳಾಂತರ
ಜಪಾನ್​ನಲ್ಲಿ ತಡೆಹಿಡಿಯಲ್ಪಟ್ಟಿರುವ ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿದ್ದವರಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಸುಮಾರು 500ಕ್ಕೂ ಹೆಚ್ಚು ಜನರನ್ನು ಬುಧವಾರ ಸ್ಥಳಾಂತರ ಮಾಡಲಾಗಿದೆ. ಇದರಲ್ಲಿ ಅನೇಕ ಭಾರತೀಯರೂ ಇದ್ದು, ಬಿಡುಗಡೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ತಂಡದಲ್ಲಿದ್ದ ಹಡಗಿನ ಸಿಬ್ಬಂದಿ ಬಿನಯ್ ಕುಮಾರ್ ಎಂಬುವವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ‘ಚಲೆ ಹಮ್ ಘರ್ ಚಲೆನಾ’ ಎಂಬ ಹಿಂದಿ ಹಾಡು ಹಾಡಿ ಖುಷಿ ವ್ಯಕ್ತಪಡಿಸಿದ್ದಾರೆ. ಹಡಗಿನಲ್ಲಿರುವವರಲ್ಲಿ ಒಟ್ಟು ಸೋಂಕಿತರ ಸಂಖ್ಯೆ 621ಕ್ಕೆ ಏರಿಕೆಯಾಗಿದೆ. ಈ ಪೈಕಿ ಭಾರತೀಯರು ಏಳು ಮಂದಿ ಇದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
