ಉಡುಪಿ:ಸುಮಾರು 50 ಸಾವಿರ ವರ್ಷಗಳ ಕಕ್ಷಾವಧಿ ಹೊಂದಿರುವ ಹಸಿರು ಬಣ್ಣದ ಸಿ/2022 ಇ3 ಧೂಮಕೇತು ಫೆ.1ರಂದು ಭೂಮಿಯ ಅತಿ ಸಮೀಪಕ್ಕೆ ಬರಲಿದ್ದು, ಬರಿಗಣ್ಣಿನಿಂದ ನೋಡಬಹುದಾಗಿದೆ ಎಂದು ಖಗೋಳ ತಜ್ಞ ಅತುಲ್ ಭಟ್ ತಿಳಿಸಿದ್ದಾರೆ. ಧೂಮಕೇತುವು ಗ್ರಹದ ಹಾಗೆಯೇ ಸೂರ್ಯನ ಸುತ್ತ ಚಲಿಸುವ ಶಿಲೆಯ ತುಣುಕು. ಈ ಕಾಯಗಳು ಹಿಮದ ಶಿಲೆಗಳಾಗಿರುತ್ತವೆ. ಸಾಮಾನ್ಯವಾಗಿ ಇವುಗಳು ದೀರ್ಘ ವೃತ್ತಾಕಾರದ ಕಕ್ಷೆಗಳಾಗಿರುತ್ತವೆ. ಕಕ್ಷೆಯು ಯಾವ ರೀತಿಯಲ್ಲಿ ರೂಪುಗೊಂಡಿದೆ ಎಂಬುದರ ಮೇಲೆ ಅವಲಂಬಿತವಾಗಿ ಧೂಮಕೇತುವನ್ನು ಆವರ್ತನೀಯ ಅಥವಾ ಆವರ್ತಕವಲ್ಲದ ಧೂಮಕೇತು ಎಂದು ವರ್ಗೀಕರಿಸಬಹುದು.
ಆವರ್ತಕ ಧೂಮಕೇತುಗಳು ನಿರ್ದಿಷ್ಟ ಕಕ್ಷಾವಧಿಯೊಂದಿಗೆ ಸೂರ್ಯನ ಸುತ್ತ ಪುನರಾವರ್ತಿತವಾಗಿ ಸುತ್ತುತ್ತವೆ. ಪ್ರಸಿದ್ಧ ಹ್ಯಾಲಿ ಧೂಮಕೇತು ಆವರ್ತನೀಯ ಧೂಮಕೇತುವಾಗಿದ್ದು, ಪ್ರತಿ 76 ವರ್ಷಗಳಿಗೊಮ್ಮೆ ಸೂರ್ಯನ ಸುತ್ತ ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ. ಪ್ರಸ್ತುತ ಸಿ/2022 ಇ3 ಕೂಡ ಆವರ್ತಕ ಧೂಮಕೇತುವಾಗಿದ್ದು, ಸುದೀರ್ಘ 50,000 ವರ್ಷಗಳ ಕಕ್ಷಾವಧಿ ಹೊಂದಿರುವ ಧೂಮಕೇತುವಾಗಿದೆ.
ಧೂಮಕೇತುವು ಸೂರ್ಯನನ್ನು ಸಮೀಪಿಸುತ್ತಿದ್ದಂತೆ, ಅದರ ಹಿಮದ ಮೇಲ್ಮೈ ಕರಗಲು ಪ್ರಾರಂಭಿಸಿ, ‘ಕೊಮಾ’ ಎಂಬ ವಾತಾವರಣ ನಿರ್ವಣವಾಗುತ್ತದೆ ಹಾಗೂ ಅದರೊಂದಿಗೆ ಬಾಲವೂ ಸಹ ರೂಪುಗೊಳ್ಳುತ್ತದೆ. ಈ ರೀತಿಯ ರಚನೆಯಿಂದಾಗಿ ಧೂಮಕೇತು ಮತ್ತು ಕ್ಷುದ್ರಗ್ರಹಗಳನ್ನು ಪ್ರತ್ಯೇಕವಾಗಿ ವರ್ಗೀಕರಿಸಲಾಗಿದೆ. ಧೂಮಕೇತುವಿನ ಚಲನೆಯು ಯಾವುದೇ ದಿಕ್ಕಿನಲ್ಲಿರಲಿ, ಅದರ ಬಾಲವು ಯಾವಾಗಲೂ ಸೂರ್ಯನ ವಿರುದ್ಧ ದಿಕ್ಕಿನೆಡೆಗೆ ಇರುತ್ತದೆ.
ಸಿ/2022 ಇ3 ಧೂಮಕೇತುವು, 2023 ಜ.12ರಂದು ಪುರರವಿ ಬಿಂದುವನ್ನು ತಲುಪಿ, ಅಂದರೆ ಸೂರ್ಯನ ಸಮೀಪ ತನ್ನ ಚಲನೆಯನ್ನು ಪೂರ್ಣಗೊಳಿಸಿದೆ. ಅಂತೆಯೇ ತನ್ನ ಕಕ್ಷೆಯಲ್ಲಿ ಮರಳಿ ಹೋಗುವಾಗ ಭೂಮಿಯ ಸಮೀಪಕ್ಕೆ ಬರಲಿದ್ದು, ಇದೇ ಫೆ.1ರಂದು ಭೂಮಿಯಿಂದ 42.63 ಮಿಲಿಯನ್ ಕಿ.ಮೀ.ಗಳಷ್ಟು ಸಮೀಪದಿಂದ ಹಾದು ಹೋಗಲಿದೆ. ಧೂಮಕೇತುವು ಭೂಮಿಯ ಹತ್ತಿರಕ್ಕೆ ಬಂದಂತೆ 5.4 ಕಾಂತಿಮಾನದಲ್ಲಿ ಪ್ರಕಾಶಿಸಲಿದೆ. ಜನವರಿ ಕೊನೆಯ ಮತ್ತು ಫೆಬ್ರವರಿ ಪ್ರಾರಂಭದ ಕೆಲವು ದಿನಗಳಲ್ಲಿ ಪ್ರಕಾಶಮಾನವಾಗಿ ಗೋಚರಿಸುವ ಸಿ/2022 ಇ3 ಧೂಮಕೇತುವನ್ನು ಭೂಮಿಯಿಂದ ವೀಕ್ಷಿಸಬಹುದು.
ಪ್ರಸ್ತುತ ಧೂಮಕೇತುವು 7 ನಕ್ಷತ್ರಗಳಿಂದಾದ ಲಘು ಸರ್ಪ¤ಮಂಡಲ ನಕ್ಷತ್ರಪುಂಜದಲ್ಲಿದೆ. ಈ ಧೂಮಕೇತುವನ್ನು ಗುರುತಿಸಲು ಮೊದಲಿಗೆ ಸರ್ಪ¤ಮಂಡಲ ನಕ್ಷತ್ರಪುಂಜದ ಸಹಾಯದಿಂದ ಧ್ರುವ ನಕ್ಷತ್ರವನ್ನು ಗುರುತಿಸಿ. ಸರ್ಪ¤ಮಂಡಲ ನಕ್ಷತ್ರಪುಂಜವು 7 ನಕ್ಷತ್ರಗಳಿಂದಾದ ಗಾಳಿಪಟದ ಆಕಾರವನ್ನು ಹೊಂದಿದ್ದು, ಮುಂಜಾನೆ 3 ಗಂಟೆಯ ನಂತರ ಗೋಚರಿಸುತ್ತದೆ. ಈ ನಕ್ಷತ್ರಪುಂಜದ ಎಡ ಭಾಗದಲ್ಲಿರುವ ಮೊದಲೆರಡು ನಕ್ಷತ್ರಗಳಾದ ಪುಲಹ (Merak) ಮತ್ತು ಕ್ರತು (Dhube)- ಇವುಗಳಿಂದ ಗೆರೆಯನ್ನು ಎಳೆದು ವೃದ್ಧಿಸಿದರೆ, ಈ ಗೆರೆಯು ದಿಗಂತದ ಸಮೀಪ ಪ್ರಕಾಶಮಾನವಾಗಿ ಹೊಳೆಯುತ್ತಿರುವ ನಕ್ಷತ್ರವನ್ನು ಸಂಧಿಸುತ್ತದೆ. ಇದುವೇ, ಸಿ/2022 ಇ3 ಧೂಮಕೇತು ಎಂದು ಅತುಲ್ ಭಟ್ ಮಾಹಿತಿ ನೀಡಿದ್ದಾರೆ.
ಹೃದಯಾಘಾತಕ್ಕೆ ಮತ್ತೊಂದು ಬಲಿ; ತಂದೆ-ತಾಯಿಯ ಏಕೈಕ ಪುತ್ರ, ಜೆಡಿಎಸ್​ ಯುವ ಮುಖಂಡ ನಿಧನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
