ಹೈದರಾಬಾದ್:ಕಿಟ್ಟಿ ಪಾರ್ಟಿ ಹೆಸರಿನಲ್ಲಿ ಜೂಜು ಮಸ್ತಿ ಮಾಡುತ್ತಾ ರಮ್ಮಿ ಆಡುತ್ತಿದ್ದ ಮನೆಯ ಮೇಲೆ ಶುಕ್ರವಾರ ರಾತ್ರಿ ಪೊಲೀಸರ ತಂಡವು ದಾಳಿ ನಡೆಸಿ, ಜೂಜಾಡುತ್ತಿದ್ದ 13 ಮಹಿಳೆಯರು ಹಾಗೂ ಅವರಿಂದ 1.12 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಹೈದರಾಬಾದ್‌ನ ಮಥುರಾ ನಗರದಲ್ಲಿ ಈ ಘಟನೆ ನಡೆದಿದೆ.
ಒಟ್ಟು 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ಟೇಬಲ್‌ನಲ್ಲಿ ಏಳು ಮಹಿಳೆಯರು ಆಡುತ್ತಿದ್ದರೆ ಇನ್ನೊಂದು ಟೇಬಲ್‌ನಲ್ಲಿ ಐದು ಮಹಿಳೆಯರು ಆಡುತ್ತಿದ್ದರು. ಈ 13 ಮಹಿಳೆಯರು 50 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಾಗಿದ್ದಾರೆ. ಇವರಿಂದ 1 ಲಕ್ಷಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್​ ಆಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜುಲೈ 27 ರಂದು ಮಥುರಾ ನಗರದ ಅಪಾರ್ಟ್‌ಮೆಂಟ್‌ನಲ್ಲಿ 13 ಮಹಿಳೆಯರು ಭೇಟಿಯಾಗಿದ್ದರು. ಆದರೆ, ರಾತ್ರಿ ಒಂದೇ ಸಮಯಕ್ಕೆ ಇಷ್ಟೊಂದು ಮಹಿಳೆಯರು ಬಂದಿದ್ದರಿಂದ ಸುತ್ತಮುತ್ತಲಿನ ಜನರು ಅನುಮಾನಗೊಂಡಿದ್ದರು. ಆ ಮನೆಯಲ್ಲಿದ್ದವರ ಚಲನವಲನವೂ ಅನುಮಾನಾಸ್ಪದವಾಗಿದ್ದರಿಂದ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರು ಒಳಗೆ ಹೋಗಿ ನೋಡಿದಾಗ, ಮಹಿಳೆಯರು ಎರಡು ಟೇಬಲ್‌ಗಳಲ್ಲಿ ಕುಳಿತು ಜೂಜಾಡುತ್ತಿದ್ದರು. ನಂತರ ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರಲ್ಲಿ ಐವರು ವ್ಯಾಪಾರಸ್ಥ ಮಹಿಳೆಯರು:ಒಟ್ಟು 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ಟೇಬಲ್‌ನಲ್ಲಿ ಏಳು ಮಹಿಳೆಯರು ಆಡುತ್ತಿದ್ದರೆ ಇನ್ನೊಂದು ಟೇಬಲ್‌ನಲ್ಲಿ ಐದು ಮಹಿಳೆಯರು ಆಡುತ್ತಿದ್ದರು. 13 ಮಹಿಳೆಯರು 50 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು. ಅವರಲ್ಲಿ ಏಳು ಮಂದಿ ಗೃಹಿಣಿಯರು ಮತ್ತು ಐವರು ಉದ್ಯಮಿಗಳು. ಆದರೆ ಇವರೆಲ್ಲ ಕಿಟ್ಟಿ ಪಾರ್ಟಿ ಹೆಸರಲ್ಲಿ ಇಲ್ಲಿಗೆ ಬಂದಿದ್ದಾರೆ. ಬಂಧಿತ ಮಹಿಳೆಯರನ್ನು ವಿಚಾರಣೆಗೆ ಒಳಪಡಿಸಿದಾಗ ಎರಡು ತಿಂಗಳಿನಿಂದ ಜೂಜಾಟ ನಡೆಸುತ್ತಿದ್ದುದನ್ನು ಒಪ್ಪಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ತಮ್ಮನ ಸಾವಿನಿಂದ ಮನನೊಂದ ಯುವತಿ ನೀರಿನ ಟ್ಯಾಂಕ್​ಗೆ ಹಾರಿ ಪ್ರಾಣ ಬಿಟ್ಟಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 20 =
Remember me
