ನವದೆಹಲಿ:ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ)ಗೆ ಸಂಬಂಧಿಸಿದ ಸಮಿತಿ ರಚನೆ ಮಾಡುವುದಕ್ಕೆ ಸರ್ಕಾರ ಬದ್ಧವಾಗಿದೆ. ಚುನಾವಣಾ ಆಯೋಗದ ಸಲಹೆಯಂತೆ ಈ ಕೆಲಸವನ್ನು ಪಂಚರಾಜ್ಯ ಚುನಾವಣೆ ಮುಗಿದ ಬಳಿಕ ಮಾಡಲಾಗುವುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರಾಜ್ಯಸಭೆಗೆ ಶುಕ್ರವಾರ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಪೂರಕ ಪ್ರಶ್ನೆಗೆ ಉತ್ತರ ನೀಡಿದ ಸಚಿವ ನರೇಂದ್ರ ಸಿಂಗ್, ಬೆಳೆ ವೈವಿಧಿ್ಯಕರಣ, ನೈಸರ್ಗಿಕ ಕೃಷಿ ಮತ್ತು ಎಂಎಸ್​ಪಿಯನ್ನು ಪರಿಣಾಮಕಾರಿ ಮತ್ತು ಪಾರದರ್ಶಕಗೊಳಿಸಲು ಸಮಿತಿ ರಚಿಸುವುದಾಗಿ ಪ್ರಧಾನಮಂತ್ರಿ ಘೋಷಿಸಿರುವುದು ಇಡೀ ದೇಶಕ್ಕೇ ಗೊತ್ತಿದೆ. ಪ್ರಧಾನಿಯವರ ಘೋಷಣೆಗೆ ಸರ್ಕಾರ ಬದ್ಧವಾಗಿದೆ. ಎಂಎಸ್​ಪಿ ಕುರಿತ ಸಮಿತಿ ರಚನೆಯ ವಿಚಾರ ಸಚಿವಾಲಯದ ಪರಿಗಣನೆಯಲ್ಲಿದೆ. ಈ ಕುರಿತು ಚುನಾವಣಾ ಅಯೋಗಕ್ಕೆ ಪತ್ರ ಬರೆದು ವಿಚಾರಿಸಿದ ವೇಳೆ, ಪಂಚರಾಜ್ಯ ಚುನಾವಣೆ ಮುಗಿದ ಬಳಿಕ ಮಾಡುವಂತೆ ಸಲಹೆ ನೀಡಿದೆ ಎಂದು ವಿವರಿಸಿದರು. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಬದ್ಧತೆ ಒದಗಿಸುವ ಕೆಲಸ ಆಗುವುದೇ ಎಂದು ಬಿಜೆಡಿ ಸದಸ್ಯ ಪ್ರಸನ್ನ ಆಚಾರ್ಯ ಕೇಳಿದ್ದರು.
ಎಸ್​ಕೆಎಂ ಟೀಕೆ ಹಿನ್ನೆಲೆ:ಎಂಎಸ್​ಪಿ ಸಮಿತಿ ರಚಿಸುವುದಾಗಿ ನೀಡಿದ್ದ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ. ಹೀಗಾಗಿ, ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಗುರುವಾರ ಕರೆ ನೀಡಿತ್ತು.
ಆಂಧ್ರಪ್ರದೇಶದಲ್ಲಿ ಕಡಿಮೆ ಎಂಎಸ್​ಪಿ ಮತ್ತು ಕೃಷಿ ಉತ್ಪನ್ನ ಖರೀದಿ ಪ್ರಮಾಣ ಕಡಿಮೆ ಆದ ಕಾರಣ ಕೃಷಿಕರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿವೆ. ಇದನ್ನು ತಡೆಯಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳುವುದೇ ಎಂದು ಟಿಡಿಪಿ ಸಂಸದ ಕನಕಮೇಡಲ್ ರವೀಂದ್ರ ಕುಮಾರ್ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ತೋಮರ್, ಕೃಷಿಕರು ತಮ್ಮ ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಪಡೆಯುವಂತೆ ಆಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತಿದೆ. ಅದನ್ನು ಖಾತರಿಪಡಿಸುವ ಕೆಲಸ ಪ್ರಗತಿಯಲ್ಲಿದೆ. ಪಿಎಂ ಕಿಸಾನ್ ಮುಂತಾದ ಯೋಜನೆಗಳ ಪ್ರಯೋಜನವನ್ನೂ ಕೃಷಿಕರು ಪಡೆಯಬೇಕು ಎಂದು ವಿವರಿಸಿದರು
ಕೃಷಿ ಮೂಲಸೌಕರ್ಯಕ್ಕೆ 6,540 ಕೋಟಿ ರೂ.: ಕೇಂದ್ರ ಸಕಾರ ಇದುವರೆಗೆ ಅಗ್ರಿಕಲ್ಚರ್ ಇನ್ಪ್ರಾ ಫಂಡ್​ಗೆ ಬೇಡಿಕೆ ಇರಿಸಿ ಬಂದ 16,026 ಅರ್ಜಿಗಳ ಒಟ್ಟು ಮೌಲ್ಯ 10,627 ಕೋಟಿ ರೂಪಾಯಿ. ಈ ಪೈಕಿ, 9000ಕ್ಕೂ ಹೆಚ್ಚು ಅರ್ಜಿಗಳನ್ನು ಅಂಗೀಕರಿಸಿ, 6,540 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ತೋಮರ್ ರಾಜ್ಯಸಭೆಗೆ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
