ನವದೆಹಲಿ:ಕಳೆದ 23 ದಿನಗಳ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 22 ಸಲ ಏರಿಕೆಯಾಗಿದ್ದು, ಕಾಂಗ್ರೆಸ್​ ನಾಯಕರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿ ಸೋಮವಾರ ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಿಗೆ, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೇನೂ ಪರಿಣಾಮ ಬೀರಿಲ್ಲ ಎಂದು ತಣ್ಣನೆಯ ಪ್ರತಿಕ್ರಿಯೆ ನೀಡಿದ್ದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಇದರಂತೆ, ಕರೊನಾ ವೈರಸ್ ಲಾಕ್​ಡೌನ್​ ಕಾರಣಕ್ಕೆ ಏಪ್ರಿಲ್​ ಮತ್ತು ಮೇ ತಿಂಗಳ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆ ಶೇಕಡ 70 ಕುಸಿದಿದೆ. ಆದಾಗ್ಯೂ, ಆರ್ಥಿಕ ಚಟುವಟಿಕೆ ನಿಧಾನವಾಗಿ ಶುರುವಾದಂತೆ ಇವುಗಳ ಬೇಡಿಕೆಯೂ ನಿಧಾನವಾಗಿ ಏರಿಕೆಯಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇಂತಹ ಸನ್ನಿವೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಾಮನ್​ ಮ್ಯಾನ್ ಮೇಲೆ ಪರಿಣಾಮವೇನೂ ಬೀರಿಲ್ಲ ಎಂದು ಸಚಿವ ಪ್ರಧಾನ್ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ:ಕೋವಾಕ್ಸಿನ್​​ಗೆ ಸಿಕ್ತು ಡಿಸಿಜಿಐ ಅನುಮತಿ: ಹ್ಯೂಮನ್ ಕ್ಲಿನಿಕಲ್ ಟ್ರಯಲ್​ ಶುರು
ಕುಟುಂಬವೊಂದು ಸಮಸ್ಯೆ ಬಂದಾಗ, ಅದನ್ನು ಮುನ್ನಡೆಸುವ ವ್ಯಕ್ತಿ ಬಹಳ ಜಾಗರೂಕತೆಯಿಂದ ಹಣಕಾಸಿನ ವ್ಯವಸ್ಥೆಯನ್ನು ಸರಿದೂಗಿಸುವುದಿಲ್ಲವೆ? ಭವಿಷ್ಯದ ಸವಾಲುಗಳನ್ನು ಎದುರಿಸುವುದಕ್ಕಾಗಿ ಇಂತಹ ಕ್ರಮಗಳು ಅನಿವಾರ್ಯ. ಇಂಧನ ದರ ಏರಿಕೆಯನ್ನೂ ಇದೇ ದೃಷ್ಟಿಯಿಂದ ನೋಡಬೇಕು. ಇಂಧನ ಮೇಲೆ ಹೇರಿದ ತೆರಿಗೆ ಹಣವನ್ನು ದೇಶದ ಜನರ ಆರೋಗ್ಯ, ಉದ್ಯೋಗ ಮತ್ತು ಆರ್ಥಿಕ ಸುರಕ್ಷತೆಗಾಗಿಯೇ ಬಳಸಲಾಗುತ್ತಿದೆ. ಎಂದು ಪ್ರಧಾನ್ ವಿವರಿಸಿದ್ದಾರೆ.
ಇದನ್ನೂ ಓದಿ:ಮನೆ, ಆಸ್ಪತ್ರೆ ಬಳಕೆಗೆ ಬರಲಿದೆ ಆಮ್ಲಜನಕ ಪುಷ್ಟೀಕರಣ ಘಟಕ
ಕೇಂದ್ರ ಸರ್ಕಾರ ಈಗಾಗಲೇ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಸ್ಕೀಮ್ ಅನ್ನು ಪರಿಚಯಿಸಿದ್ದು ಅದರ ಮೂಲಕ ದೇಶದ ಅರ್ಥವ್ಯವಸ್ಥೆಗೆ 1.7 ಲಕ್ಷ ಕೋಟಿ ರೂಪಾಯಿಯ ವಿವಿಧ ಯೋಜನೆಗಳನ್ನು ಬಡವರು ಮತ್ತು ಕೃಷಿಕರಿಗೆ ಒದಗಿಸಲಾಗುತ್ತಿದೆ. ಕಾಂಗ್ರೆಸ್​ನವರಿಗೆ ಇದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ಕೊಡುವ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಇತರರು ಬಡ ಜನರ ಏಳಿಗೆಗೆ ತೆಗೆದುಕೊಂಡ ಕ್ರಮವನ್ನು ಸಹಿಸುತ್ತಿಲ್ಲ ಎಂಬುದು ವೇದ್ಯವಾಗುತ್ತಿದೆ ಎಂದು ಪ್ರಧಾನ್ ಕುಟುಕಿದರು. (ಏಜೆನ್ಸೀಸ್​)
ಸರ್ಕಾರದ ಕ್ರಮಕ್ಕೆ ಟಿಕ್​ಟಾಕ್​ ಪ್ರತಿಕ್ರಿಯೆ ಇದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
