ಕೋಲ್ಕತ:ಆನ್​ಲೈನ್​ಗಳಲ್ಲಿ ಏನನ್ನೋ ಆರ್ಡರ್​ ಮಾಡಿದರೆ ಇನ್ನಾವುದೋ ವಸ್ತು ಬರುವ ವಿಷಯ ಹೊಸತೇನಲ್ಲ.
ಅಂಥದ್ದೇ ಒಂದು ಪ್ರಕರಣ ಕೋಲ್ಕತದಲ್ಲಿಯೂ ನಡೆದಿದೆ. ಆದರೆ ಇದು ಸ್ವಲ್ಪ ಧರ್ಮ, ಸಿದ್ಧಾಂತಗಳ ವಿಷಯವಾಗಿರುವ ಕಾರಣ, ಈ ಸುದ್ದಿ ಸಖತ್​ ವೈರಲ್​ ಆಗುತ್ತಿದೆ.ಅಮೆಜಾನ್​ ವೆಬ್‌ಸೈಟ್‌ ಮೂಲಕ ‘ದಿ ಕಮ್ಯುನಿಷ್ಟ್‌ ಮ್ಯಾನಿಫೆಸ್ಟೊ’ ಎಂಬ ಪುಸ್ತಕವನ್ನು ಸುತಿರ್ಥೊ ದಾಸ್ ಆರ್ಡರ್​ ಮಾಡಿದ್ದರು. ಮನೆಗೆ ಪುಸ್ತಕದ ಬಾಕ್ಸ್​ ಬಂದಾಗ, ಆ ಪುಸ್ತಕದ ಬೆಲೆಯನ್ನೇ ಕೊಟ್ಟು, ಬಿಲ್ಲಿನಲ್ಲಿ ಕೂಡ ಆ ಪುಸ್ತಕದ ಹೆಸರನ್ನೇ ನೋಡಿ ಪಾರ್ಸೆಲ್​ ಪಡೆದಿದ್ದಾರೆ.
ಆದರೆ ಅದನ್ನು ತೆರೆದು ನೋಡಿದಾಗ ಅವರು ಶಾಕ್​ ಆಗಿದ್ದಾರೆ. ಕಾರಣ, ಅದರಲ್ಲಿ ‘ದಿ ಕಮ್ಯುನಿಷ್ಟ್‌ ಮ್ಯಾನಿಫೆಸ್ಟೊ’ ಬದಲು, ಭಗವದ್ಗೀತೆ ಪುಸ್ತಕ ಕಂಡಿದೆ. ಈ ಕುರಿತು ಅವರು ಕೂಡಲೇ  ಅಮೇಜಾನ್ ಕಚೇರಿಯ ದೂರವಾಣಿ ಸಂಖ್ಯೆ ಹುಡುಕಿ ಕರೆ ಮಾಡಿದರೂ ಅಲ್ಲಿ ಯಾರೂ ಕರೆ ಸ್ವೀಕರಿಸಲಿಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ:ಮೀನಿಗೆ ಗಾಳ ಹಾಕಿದಾಗ ಮಕ್ಕಳಿಗೆ ಸಿಕ್ತು ಚಿನ್ನದ ಮೂರ್ತಿ: ಮುಂದೇನಾಯ್ತು?
ಈ ಕುರಿತು, ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಸಹಿತ ಸುತಿರ್ಥೊ ದಾಸ್ ಪೋಸ್ಟ್‌ ಮಾಡಿದ್ದಾರೆ. ತಾವು ಖರೀದಿಸಿದ ಪುಸ್ತಕದ ಬದಲು ಪ್ಯಾಕೆಜ್‌ ಒಳಗೆ 120 ಪುಟಗಳ ಇಂಗ್ಲಿಷ್‌ ಅನುವಾದದ ಭಗವದ್ಗೀತೆಯಿತ್ತು. ಆದರೆ, ಪ್ಯಾಕೆಜ್‌ ಹೊರಭಾಗದಲ್ಲಿ ಇದ್ದ ಪುಸ್ತಕದ ಬಿಲ್‌ನಲ್ಲಿ ದಿ ಕಮ್ಯುನಿಷ್ಟ್‌ ಮ್ಯಾನಿಫೆಸ್ಟೊ ಪುಸ್ತಕದ ಹೆಸರಿತ್ತು ಎಂದು ಅವರು ಬರೆದುಕೊಂಡಿದ್ದಾರೆ.
“ನಾನು ಹಾಕಿರುವ ವಿಷಯವನ್ನು ಸಂಪೂರ್ಣವಾಗಿ ಓದಿ. ಕೇವಲ ಭಗವದ್ಗೀತೆ ಪುಸ್ತಕದ ಫೋಟೋ ನೋಡಿ ಮುಂದಕ್ಕೆ ಹೋಗಬೇಡಿ’ ಎಂದು ಬಂಗಾಳಿ ಭಾಷೆಯಲ್ಲಿ ಬರೆದುಕೊಂಡಿರುವ ಸತಿರ್ಥೋ ಅವರು, “ಜರ್ಮನ್ ಕ್ರಾಂತಿಕಾರಿಗಳಾದ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಏಂಜೆಲ್ಸ್ ಅವರು ಬರೆದಿರುವ, 1848ರ ರಾಜಕೀಯ ಇತಿಹಾಸವುಳ್ಳ ಪುಸ್ತಕವನ್ನು ಓದಲು ನಾನು ಬಯಸಿದ್ದೆ. ಇದು ಕಮ್ಯುನಿಸ್ಟ್ ಸಮಾಜದ ಕಲ್ಪನೆಯ ಆಧಾರದ ಮೇಲೆ ಬರೆಯಲಾದ ಪುಸ್ತಕ. ಅಮೆಜಾನ್​ನಲ್ಲಿ ಈ ಪುಸ್ತಕ ನೋಡಿ ತಕ್ಷಣ ಆರ್ಡರ್​ ಮಾಡಿದ್ದೆ. ಅದರ ಬೆಲೆ 50 ರೂ. ಇತ್ತು. ಪಾರ್ಸೆಲ್​ ಚಾರ್ಜ್​ ಸೇರಿ 140 ರೂ ನಾನು ಕೊಟ್ಟಿದ್ದೆ. ಮನೆಗೆ ಬಂದ ಪುಸ್ತಕ ತೆರೆದು ನೋಡಿದರೆ ಅದರಲ್ಲಿ ಭಗವದ್ಗೀತೆ ಇದ್ದದ್ದು ಕಂಡು ಶಾಕ್​ ಆಯಿತು ಎಂದಿದ್ದಾರೆ.(ಏಜೆನ್ಸೀಸ್​)
ಮನೆಮನೆಗಳಲ್ಲಿ ಗೋದಾಮು: ಗೋಮಾಂಸದ ರಾಶಿ! ಪೊಲೀಸರೇ ದಿಗಿಲು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + 20 =
Remember me
