ಗುರುಗ್ರಾಮ:ಕೆಲಸದ ವೇಳೆ ಅನುಮತಿಯಿಲ್ಲದೆ ಆಫೀಸ್​ನಿಂದ ಸಿಬ್ಬಂದಿ ಹೊರಹೋಗದಂತೆ ವಾಚ್​ಮ್ಯಾನ್​ ಒಬ್ಬರು ಕಂಪನಿಯ ಬಾಗಿಲಿಗೆ ಬೀಗ ಹಾಕುತ್ತಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿರುವ ಕೋಡಿಂಗ್​ ನಿನ್​ಜಾಸ್​ನಲ್ಲಿ ನಡೆದಿದೆ.
ಉದ್ಯಮಿ ರವಿ ಹಂಡಾ ಎಂಬುವವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು ಇಂಡಿಯನ್​ ಎಡ್​ಟೆಕ್​​ ಸಂಸ್ಥಾಪಕರು ಇದೀಗ ಉದ್ಯೋಗಿಗಳನ್ನು ಬೀಗ ಹಾಕಿ ಕೂಡಿ ಹಾಕುತ್ತಿದ್ದಾರೆ. ಈ ರೀತಿ ಮಾಡಲು ಯಾರು ಮುಂದೆ ಬರಬೇಡಿ ಎಂದು ಟ್ವೀಟ್​ ಮಾಡಿದ್ಧಾರೆ.
ವೈರಲ್​ ಆಗಿರುವ ವಿಡಿಯೋದಲ್ಲಿ ವಾಚ್​ಮ್ಯಾನ್​ ಓರ್ವ ಕಂಪನಿಯ ಮ್ಯಾನೇಜರ್​ ತನ್ನ ಒಪ್ಪಿಗೆಯಿಲ್ಲದೆ ಯಾರನ್ನು ಹೊರಬಿಡದಂತೆ ಸೂಚಿಸಲಾಗಿದೆ ಎಂದು ಹೇಳುತ್ತಾ ಬಾಗಿಲಿಗೆ ಬೀಗ ಹಾಕುತ್ತಿರುವುದು ಕಂಡು ಬರುತ್ತದೆ.
Indian edtech founders are now literally locking in their employees.Get the hell out of this country.Nowhere else would anyone dare to pull off something like this.pic.twitter.com/zTFuN6vDCm— Ravi Handa (@ravihanda)June 3, 2023

Indian edtech founders are now literally locking in their employees.Get the hell out of this country.Nowhere else would anyone dare to pull off something like this.pic.twitter.com/zTFuN6vDCm
ಇದನ್ನೂ ಓದಿ:ಅಪಾರ್ಟ್‌ಮೆಂಟ್‌ಗಾಗಿ ಕೆರೆ ಮಧ್ಯೆ ರಸ್ತೆ! ಈ ಐಡಿಯಾ ಕೊಟ್ಟವರು ಯಾರು? ಡಿಕೆಶಿ ಪ್ರಶ್ನೆ
ವಿಡಿಯೋ ವೈರಲ್​ ಆಗುತ್ತಿದ್ದಂತೆ ಕೋಡಿಂಗ್​ ನಿನ್​ಜಾಸ್​ ಕಂಪನಿ ಸ್ಪಷ್ಟನೆ ನೀಡಿದ್ದು ಇತ್ತೀಚಿಗೆ ನಮ್ಮ ಕಂಪನಿಯಲ್ಲಿ ನೌಕರ ಓರ್ವ ಮಾಡಿದ ಕೆಲಸದಿಂದಾಗಿ ನಾವು ಈ ರೀತಿಯ ಕ್ರಮ ಜರುಗಿಸಬೇಕಾಯಿತು. ವಿಚಾರ ಬೆಳಕಿಗೆ ಬರುತ್ತಿದ್ದಂತೆ ನಾವು ತಪ್ಪನ್ನು ಸರಿಪಡಿಸಿದ್ದೇವೆ ಅನಾನೂಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ.
ಘಟನೆ ಸಂಬಂಧ ಕಂಪನಿಯ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ಸದಸ್ಯರು ಉದ್ಯೋಗಿಗಳಿಗೆ ಕ್ಷಮೆಯಾಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕೋಡಿಂಗ್​ ನಿನ್​ಜಾಸ್​ ಕಂಪನಿ ಟ್ವೀಟ್​ ಮಾಡಿ ಸ್ಪಷ್ಟನೆ ನೀಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − three =
Remember me
