ಔರಂಗಾಬಾದ್: ಮಹಾರಾಷ್ಟ್ರದ ಜಲಗಾವ್ ಸರಕಾರಿ ಆಸ್ಪತ್ರೆಯಲ್ಲಿ ಸರಿಯಾದ ಆರೈಕೆ ಸಿಗದೆ ಮರಣ ಹೊಂದಿದ ಕರೋನಾ ರೋಗಿಯ ಸಂಬಂಧಿಕರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಆರೈಕೆ ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಹೈಕೋರ್ಟ್​ನ ಔರಂಗಾಬಾದ್ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
2020ರ ಜೂನ್ ತಿಂಗಳಲ್ಲಿ 82 ವರ್ಷದ ಮಾಲತಿ ನೆಹೆತೆ ಎಂಬ ಕರೊನಾ ರೋಗಿಯ ಭಾಗಶಃ ಕೊಳೆತ ಶವವು ಜಲಗಾವಿನ ಸಿವಿಲ್ ಆಸ್ಪತ್ರೆಯ ಶೌಚಾಲಯದ ಆವರಣದಲ್ಲಿ ಸಿಕ್ಕಿತ್ತು. ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಶಿಂದೆ ಮತ್ತು ಜಲಗಾವ್ ಆಸ್ಪತ್ರೆಯಲ್ಲಿ ಸತ್ತ ಕರೋನಾ ರೋಗಿಗಳ ಇಬ್ಬರು ಸಂಬಂಧಿಕರು ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಮಾಲತಿ ನೆಹೆತೆ ಸಾವಿಗೆ ಪರಿಹಾರ ಕೋರುವುದಲ್ಲದೆ, ಜಲಗಾವ್ ಆಸ್ಪತ್ರೆಯ ಕೋವಿಡ್ ವಾರ್ಡ್​ನಲ್ಲಿ ಉಂಟಾದ ಹಲವು ಸಾವುಗಳ ಬಗ್ಗೆ ಉನ್ನತ ಮಟ್ಟದ ತನಿಖೆ ಕೋರಿದ್ದರು.
ಇದನ್ನೂ ಓದಿ:ಕರೊನೋತ್ತರ ಕಾಲದಲ್ಲಿ ಅಧಿಕಾರಿಗಳಿಂದ ಹೆಚ್ಚಿನ ನಿರೀಕ್ಷೆ
ಈ ಅರ್ಜಿಯನ್ನು ಇತ್ಯರ್ಥಗೊಳಿಸಿದ ನ್ಯಾಯಮೂರ್ತಿ ಸಂಜಯ ವಿ.ಗಂಗಾಪುರ್​ವಾಲ ಮತ್ತು ನ್ಯಾಯಮೂರ್ತಿ ಶ್ರೀಕಾಂತ್ ಡಿ.ಕುಲಕರ್ಣಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ಆಸ್ಪತ್ರೆಯ ವೈದ್ಯರು, ನರ್ಸ್​ಗಳು ಮತ್ತು ಇತರ ಸಿಬ್ಬಂದಿಯ ನಿರ್ಲಕ್ಷ್ಯದಿಂದ ರೋಗಿ ಸಾವಪ್ಪಿದ್ದಾರೆ ಎಂದು ತೀರ್ಮಾನಿಸಿತು. ನಾಲ್ಕು ತಿಂಗಳ ಒಳಗೆ ಮೃತರೋಗಿಯ ವಾರಸುದಾರರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶಿಸಿತು. ಸರ್ಕಾರಿ ವಕೀಲರು ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಈಗಾಗಲೇ ಸಸ್ಪೆಂಡ್​ ಮಾಡಲಾಗಿದ್ದು, ಇಲಾಖಾ ತನಿಖೆ ಕೂಡ ನಡೆಸುತ್ತಿರುವುದಾಗಿ ತಿಳಿಸಿದ್ದರಿಂದ, ತನಿಖಾ ಸಮಿತಿಯ ವರದಿ ಮತ್ತು ಜಲಗಾವ್ ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿಯ ಮೇಲೆ ಶೀಘ್ರವಾಗಿ ಸೂಕ್ತ ಕ್ರಮ ಜರುಗಿಸಬೇಕಾಗಿ ನ್ಯಾಯಾಲಯ ಆದೇಶಿಸಿತು.
ಈ ಬಗೆಗಿನ ಆದೇಶದಲ್ಲಿ “ಜನರಿಗೆ ಸಮರ್ಪಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ. ಮನುಷ್ಯರ ಜೀವ ಉಳಿಸುವುದು ಅತ್ಯಂತ ಮಹತ್ವದ ಕೆಲಸ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಸಕಾಲಿಕ ಆರೈಕೆ ನೀಡಲು ಸರ್ಕಾರ ಕರ್ತವ್ಯಬದ್ಧವಾಗಿದೆ” ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. “ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಸಾಮರ್ಥ್ಯ ಇಲ್ಲದ ಜನರು ಸರಕಾರಿ ಆಸ್ಪತ್ರೆಗಳಿಗೆ ಬರುತ್ತಾರೆ. ಅಂತಹ ಜನರಿಗೆ ತಕ್ಷಣ ವೈದ್ಯಕೀಯ ಆರೈಕೆ ನೀಡುವಲ್ಲಿ ಕೊರತೆಗಳು ಉಂಟಾದಲ್ಲಿ ಅದು ಸಂವಿಧಾನ ನೀಡುವ ಜೀವಿಸುವ ಹಕ್ಕಿನ ಉಲ್ಲಂಘನೆಯಾಗುತ್ತದೆ” ಎಂದು ಹೇಳಿದೆ.(ಏಜೆನ್ಸೀಸ್)
ರೈತ ಪ್ರತಿಭಟನೆಯಲ್ಲಿ ಭಾಗವಹಿಸದಿದ್ದರೆ ದಂಡ ಕಟ್ಟಬೇಕು..!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − 1 =
Remember me
