ಕಟಕ್:ಸಲೂನ್​ನಲ್ಲಿ ಕೆಲಸ ಮಾಡುವ ಹುಡುಗನನ್ನು ಅನುಚಿತವಾಗಿ ಸ್ಪರ್ಶಿಸಿದರು ಎಂದು ಆರೋಪಿಸಿ ವಕೀಲರೊಬ್ಬರ ವಿರುದ್ಧ ದೂರು ದಾಖಲಿಸಿರುವ ಘಟನೆ ಒಡಿಶಾದ ಕಟಕ್​​ ನಗರದಲ್ಲಿ ಕಳೆದ ಬುಧವಾರ ನಡೆದಿದೆ.
ಲಾಯರ್​ ರಾಜೀವ್​​ ರಾಥ್​ ಎಂಬುವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಕಟಕ್​ ನಗರದ ಸಿಡಿಎ ಸೆಕ್ಟರ್​-9ರಲ್ಲಿ ಇರುವ ಸಲೂನ್​ನಲ್ಲಿ ಕೆಲಸ ಮಾಡುವ ಹುಡುಗನ ಸಹೋದರ ಲಾಯರ್​ ವಿರುದ್ಧ ಮರ್ಕತ್​ ನಗರ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದಾರೆ.
ಕೂದಲು ಕತ್ತರಿಸುವಾಗ ವಕೀಲರು, ಹುಡುಗನ ಮರ್ಮಾಂಗವನ್ನು ಸ್ಪರ್ಶಿಸಿದರು ಎಂದು ದೂರಿದ್ದಾರೆ. ಅಲ್ಲದೆ, ದೂರುದಾರನು ಈ ಕೃತ್ಯವನ್ನು ವಿರೋಧಿಸುತ್ತಿದ್ದಂತೆ, ವಕೀಲ ರಾಥ್ ನಿಂದಿಸಿದ್ದಲ್ಲದೆ, ಮುಂದಿನ ಭೀಕರ ಪರಿಣಾಮಗಳ ಬೆದರಿಕೆ ಸಹ ಹಾಕಿರುವ ಆರೋಪ ಇದೆ.
ಇದನ್ನೂ ಓದಿರಿ:ಕಸದ ತೊಟ್ಟಿ ಬಳಿ ಬೀದಿ ನಾಯಿ ಜತೆ ಕಾಣಿಸಿಕೊಂಡ ದಿಗ್ಗಜರು ಚಿತ್ರದ ಖಳನಾಯಕ: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!
ಇದಕ್ಕೂ ಮುನ್ನ ವಕೀಲರು ಹುಡುಗನಿಗೆ ವಾಟ್ಸ್ಆ್ಯಪ್​ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಂತೆ. ಇಷ್ಟೇ ಅಲ್ಲದೆ, ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಹುಡುಗನನ್ನು ಒತ್ತಾಯಿಸುತ್ತಿದ್ದರು ಎಂದು ದೂರುದಾರ ಗಂಭೀರ ಆರೋಪ ಮಾಡಿದ್ದಾರೆ.
ಇದ್ಯಾವುದಕ್ಕೂ ಸಹಕರಿಸಿದಿದ್ದರೆ ಕೊಲೆ ಮಾಡುವುದಾಗಿಯೂ ಲಾಯರ್​ ಬೆದರಿಕೆ ಹಾಕಿದ್ದಾರೆಂದು ಹುಡುಗನ ಸಹೋದರ ದೂರಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.(ಏಜೆನ್ಸೀಸ್​)
ಪ್ರತೀಕಾರ ತೀರಿಸಿಕೊಳ್ಳಲು ಕಾಂಗ್ರೆಸ್ ಮುಖಂಡನ ಕೊಲೆ, ಐವರ ಬಂಧನ

ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ಹಾಡಿ ಹೊಗಳಿದ ಗಾಯಕಿ ಶ್ರೇಯಾ ಘೋಶಾಲ್!

ಮನೆ-ಸೈಟು ಮಾರಾಟದ ಮೋಸಕ್ಕೆ ಬ್ರೇಕ್! 100 ವಾರ್ಡ್‌ಗಳಲ್ಲಿ ಇ-ಆಸ್ತಿ ಸಾಫ್ಟ್​​ವೇರ್​​ ಜಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + twenty =
Remember me
