ವಾರಣಾಸಿ:ಸದಾ ಒಂದಿಲ್ಲೊಂದು ವಿವಾದಾತ್ಮಕ ಕೆಲಸಗಳಿಂದಲೇ ಸುದ್ದಿಯಲ್ಲಿರುವ ಖ್ಯಾತ ಯೂಟ್ಯೂಬರ್​, ಬಿಗ್​ಬಾಸ್​ ಒಟಿಟಿ-2 ವಿನ್ನರ್​ ಎಲ್ವಿಶ್​ ಯಾದವ್​ ವಿವಾದದ ಕೇಂದ್ರಬಿಂದು ಎಂದರೆ ತಪ್ಪಾಗಲಾರದು. ಇದೀಗ ಪುರಾಣ ಪ್ರಸಿದ್ಧ ಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ಫೋಟೋ ತೆಗೆದಿರುವ ಆರೋಪ ಕೇಳಿ ಬಂದಿದ್ದು, ಎಲ್ವಿಶ್​ ಯಾದವ್​ ವಿರುದ್ಧ ದೂರು ದಾಖಲಾಗಿದೆ.
ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಮೊಬೈಲ್​ ಬಳಕೆ ನಿಷೇಧಿಸಲಾಗಿದ್ದು, ಒಂದು ವೇಳೆ ಮೊಬೈಲ್​ ಬಳಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ. ಇದೀಗ ಎಲ್ವಿಶ್​ ದೇವಾಲಯದ ಒಳಗೆ ಫೋಟೋ ತೆಗೆಸಿಕೊಂಡಿರುವುದು ಹೊಸ ವಿವಾದವನ್ನು ಹುಟ್ಟು ಹಾಕಿದ್ದು, ಕ್ರಮಕ್ಕೆ ಆಗ್ರಹಿಸಿ ದೂರು ದಾಖಲಿಸಲಾಗಿದೆ.
#BiggBossOTT2winner#ElvishYadavunder fire for allegedly taking photos inside#KashiVishwanathTempledespite no-camera policy.Advocate#PrateekKumarSinghhas filed a police complaint, questioning the authorities' enforcement of the rules. What’s your take on this? 📸🚫pic.twitter.com/Wk14LTxXMm
ಇದನ್ನೂ ಓದಿ:ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ; ಆರೆಂಜ್ ಅಲರ್ಟ್​ ಘೋಷಣೆ
ವಾರಣಾಸಿ ಮೂಲದ ವಕೀಲರಾದ ಪ್ರತೀಕ್​ ಕುಮಾರ್​ ಸಿಂಗ್​ ಎಂಬುವವರು ಎಲ್ವಿಶ್​ ಯಾದವ್​ ವಿರುದ್ಧ ದೂರು ದಾಖಲಿಸಿದ್ದು, ದೇವಾಲಯದ ಆವರಣದಲ್ಲಿ ಮೊಬೈಲ್​ ಹಾಗೂ ಕ್ಯಾಮರಾ ಬಳಕೆಯನ್ನು ಸರ್ಕಾರ ನಿಷೇಧಿಸಿದೆ. ಇದರ ಹೊರತಾಗಿಯೂ ಎಲ್ವಿಶ್​ ಫೋಟೋ ತೆಗೆಸಿಕೊಂಡಿರುವುದು ನಿಯಮಗಳಿಗೆ ವಿರುದ್ಧವಾಗಿದ್ದು, ಆತನ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ವಕೀಲ ಪ್ರತೀಕ್​ ಕುಮಾರ್​ ಸಿಂಗ್​ ದೂರು ದಾಖಲಿಸಿದ್ದಾರೆ.
ಕೆಲ ತಿಂಗಳ ಹಿಂದೆ ನೋಯ್ಡಾದಲ್ಲಿ ನಡೆದ ರೇವ್​ಪಾರ್ಟಿಗೆ ಹಾವಿನ ವಿಷ ಸರಬರಾಜು ಮಾಡಿದ ಆರೋಪದ ಮೇಲೆ ಪೊಲೀಸರು ಎಲ್ವಿಶ್​ ಯಾದವ್​ನನ್ನು ವಶಕ್ಕೆ ಪಡೆದಿದ್ದರು. ಇದಲ್ಲದೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಎಲ್ವಿಶ್​ ಯಾದವ್​ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
