ತಿರುವನಂತಪುರಂ:ಹೀರೋ ಮಾಡುವುದಾಗಿ ನಂಬಿಸಿ ಅಶ್ಲೀಲ ವೆಬ್​ ಸರಣಿಗೆ ಬಳಸಿಕೊಂಡರು ಎಂದು ಆರೋಪಿಸಿ ಯುವಕನೊಬ್ಬ ನೀಡಿದ ದೂರಿನ ಆಧಾರದ ಮೇಲೆ ಮಲಯಾಳಂ ನಿರ್ದೇಶಕಿ ಲಕ್ಷ್ಮೀ ದೀಪ್ತಾರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ತಿರುವನಂತಪುರಂ ಮೂಲದ ಯುವಕ ನೀಡಿದ ದೂರಿನ ಆಧಾರದ ಮೇಲೆ ಅರುವಿಕ್ಕರ ಪೊಲೀಸರು ಲಕ್ಷ್ಮೀ ದೀಪ್ತಾರನ್ನು ಬಂಧಿಸಿದ್ದಾರೆ. ಬಳಿಕ ನೆಡುಮಂಗಡ್​ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಸದ್ಯ ಆಕೆ ಜಾಮೀನಿನ ಮೇಲೆ ಹೊರಬಂದಿದ್ದಾರೆ.
ವೆಂಗನೂರ್​ ಮೂಲದ ಯುವಕನಿಂದ ದೂರು ದಾಖಲಾಗಿದೆ. ವೆಬ್​ ಸರಣಿಯಲ್ಲಿ ನಾಯಕನ ಪಾತ್ರ ನೀಡುವುದಾಗಿ ಭರವಸೆ ನೀಡಿದರು. ನಂಬಿಕೆ ಬರುವಂತೆ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದರು. ಬಳಿಕ ನನ್ನನ್ನು ಒಪ್ಪಂದದಲ್ಲಿ ಸಿಲುಕಿಸಿ, ಬಲವಂತವಾಗಿ ಅಶ್ಲೀಲ ವೆಬ್​ ಸರಣಿಯಲ್ಲಿ ನಟಿಸುವಂತೆ ಮಾಡಿದರು. ಕಳೆದ ವರ್ಷ ಜೂನ್​ 5 ಮತ್ತು 7ರಂದು ಅರುವಿಕ್ಕರದ ಖಾಲಿ ಫ್ಲ್ಯಾಟ್​ನಲ್ಲಿ ಶೂಟಿಂಗ್​ ನಡೆಯಿತು. ವೆಬ್​ ಸರಣಿಯಿಂದ ಹೊರ ಬರುವ ಪ್ರಯತ್ನ ಮಾಡಿದರೆ ಒಪ್ಪಂದದ ಪತ್ರ ತೋರಿಸಿ ಬೆದರಿಸುತ್ತಿದ್ದರು ಎಂದು ಯುವಕ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಇದನ್ನೂ ಓದಿ:ಸಾಕುನಾಯಿ ಕಾಪಾಡಲು ಹೋಗಿ ದುರಂತ ಅಂತ್ಯ ಕಂಡ ಮಹಿಳೆ! ಭಯಾನಕ ವಿಡಿಯೋ ವೈರಲ್​
ವೆಬ್​ ಸರಣಿಯ ಟ್ರೈಲರ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆದ ಬಳಿಕ ತಿರುವನಂತಪುರಂನ ವಿಝಿಂಜಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪೊಲೀಸರು ಕ್ರಮ ತೆಗೆದುಕೊಳ್ಳದಿದ್ದಾಗ ಯುವಕ ಹೈಕೋರ್ಟ್​ ಮೆಟ್ಟಿಲೇರಿದನು. ಆದರೆ, ಲಕ್ಷ್ಮೀ ಹೈಕೋರ್ಟ್​ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಆರೋಪಿಯನ್ನು ಪೊಲೀಸರ ಮುಂದೆ ಹಾಜರುಪಡಿಸಿದರೆ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ ಲಕ್ಷ್ಮಿಗೆ ಜಾಮೀನು ಮಂಜೂರಾಗಿದೆ.(ಏಜೆನ್ಸೀಸ್​)
ಸಲಿಂಗ ಕಾಮದ ಅನುಭವವಿದೆಯೇ? ನೆಟ್ಟಿಗನ ಪ್ರಶ್ನೆಗೆ ಅನಸೂಯ ಕೊಟ್ಟ ಬೋಲ್ಡ್​ ಉತ್ತರ ವೈರಲ್​

ಉತ್ತರ ಕನ್ನಡದಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳು ವಶಕ್ಕೆ, ಇನ್ನಿಬ್ಬರಿಗೆ ತೀವ್ರ ಶೋಧ

ಸಾಕುನಾಯಿ ಕಾಪಾಡಲು ಹೋಗಿ ದುರಂತ ಅಂತ್ಯ ಕಂಡ ಮಹಿಳೆ! ಭಯಾನಕ ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + four =
Remember me
