ಲಖನೌ:ಕರೊನಾ ವಿರುದ್ಧ ಹೋರಾಡಲು ಲಸಿಕೆ ಹಾಕಿಸಿಕೊಂಡರೂ ನನ್ನ ದೇಹದಲ್ಲಿ ಪ್ರತಿರೋಧಕ ಶಕ್ತಿ ಉತ್ಪಾದನೆ ಆಗಿಲ್ಲ ಎಂದು ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ.
ಲಸಿಕೆ ಹೆಸರಲ್ಲಿ ನನಗೆ ಮೋಸ ಮಾಡಲಾಗಿದೆ ಎಂದು ಉತ್ತರ ಪ್ರದೇಶದ ಏಷಿಯಾನಾ ಏರಿಯಾದ ಪ್ರತಾಪ್​ ಚಂದ್ರ ಪೊಲೀಸರಿಗೆ ದೂರು ನೀಡಿದ್ದಾನೆ.
ಏಪ್ರಿಲ್​ 8ರಂದು ಏಷಿಯಾನ ಆಸ್ಪತ್ರೆಯಲ್ಲಿ ಕೋವಿಶೀಲ್ಡ್​ ಮೊದಲ ಡೋಸ್​ ಲಸಿಕೆ ಪಡೆದುಕೊಂಡೆ. 28 ದಿನಗಳ ಬಳಿಕ ಎರಡನೇ ಡೋಸ್​ ಪಡೆದುಕೊಳ್ಳಬೇಕಿತ್ತು. ಆದರೆ, ಹೆಚ್ಚಿನ ಅಂತರದ ಸೂಚನೆಯಿಂದ ಇನ್ನು ಕಾಯುತ್ತಿದ್ದೇನೆ. ಮೊದಲ ಡೋಸ್​ ಪಡೆದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದೆ ಎಂದು ಪ್ರತಾಪ್​ ಚಂದ್ರ ಆರೋಪಿಸಿದ್ದಾನೆ.
ಕೋವಿಡ್​ಶೀಲ್ಡ್​ ಮೊದಲ ಡೋಸ್​ ಪಡೆದ ಬಳಿಕ ಪ್ರತಿರೋಧಕ ಶಕ್ತಿ ವೃದ್ಧಿಯಾಗಬೇಕಿತ್ತು. ಕೋವಿಡ್​-19 ಪ್ರತಿರೋಧಕ ಪರೀಕ್ಷೆಗೆ ಒಳಪಡಿಸಲು ನಿರ್ಧಾರ ಮಾಡಿದೆ. ಅದರಂತೆ ಐಸಿಎಂಆರ್​ ಅನುಮೋದಿತ ಖಾಸಗಿ ಲ್ಯಾಬ್​ನಲ್ಲಿ ಮೇ 25ರಂದು ಪರೀಕ್ಷೆಗೆ ಒಳಗಾದೆ ಎಂದು ತಿಳಿಸಿದ್ದಾನೆ.
ನನ್ನ ರಕ್ತದ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್​ಗೆ ಕಳುಹಿಸಿದರು. ಮೇ 27ರಂದು ನೆಗಿಟಿವ್​ ವರದಿ ಬಂದಿದೆ. ಕರೊನಾ ಲಸಿಕೆ ಪಡೆದರೂ ಯಾವುದೇ ರೋಗ ನಿರೋಧಕ ಶಕ್ತಿ ವೃದ್ಧಿ ಆಗಿರುವುದರಿಂದ ಪ್ರತಾಪ್​ ಚಂದ್ರ ಆಕ್ರೋಶ ಹೊರಹಾಕಿದ್ದು, ಬಿಳಿರಕ್ತಕಣಗಳ ಸಂಖ್ಯೆ 3 ಲಕ್ಷದಿಂದ 1.5 ಲಕ್ಷಕ್ಕೆ ಇಳಿದಿದೆ. ಲಸಿಕೆ ಹೆಸರಿನಲ್ಲಿ ನನಗೆ ತುಂಬಾ ಮೋಸ ಮಾಡಲಾಗಿದೆ. ನನ್ನ ಜೀವನ ಇದೀಗ ಅಪಾಯದಲ್ಲಿದೆ ಎಂದು ಗಂಭೀರ ಆರೋಪ ಮಾಡಿದ್ದಾನೆ.(ಏಜೆನ್ಸೀಸ್​)
ಮೈನಸ್ ಶೇ.7.3ಕ್ಕೆ ತಗ್ಗಿದ ಜಿಡಿಪಿ; ಕಡೆಯ ತ್ರೖೆಮಾಸಿಕದಲ್ಲಿ ಶೇ.1.6 ಬೆಳವಣಿಗೆ

ಮಗು ಕದ್ದವಳ ಪತ್ತೆಗೆ 35000 ಕಾಲ್ ಟ್ರೇಸ್, 800 ಮಂದಿ ವಿಚಾರಣೆ!; ವರ್ಷದ ಬಳಿಕ ಸಿಕ್ಕಿಬಿದ್ದ ಮನೋವೈದ್ಯೆ

ಶುರು ಹೊಸ ಜೀವನ: ಇಂದಿನಿಂದಲೇ ಹಲವು ಸೇವೆಗಳು ಹೊರೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − eleven =
Remember me
