ನವದೆಹಲಿ:ದೇಶಾದ್ಯಂತ ಕರೊನಾ ಸೋಂಕಿತರ ಸಂಖ್ಯೆ ಇನ್ನಿಲ್ಲದ ವೇಗದಲ್ಲಿ ಹಬ್ಬುತ್ತಿದೆ. ನೂರು, ಸಾವಿರ ಲೆಕ್ಕದಲ್ಲಿರುತ್ತಿದ್ದ ಹೊಸ ಕೇಸ್​ಗಳ ಸಂಖ್ಯೆಯೀಗ ದಿನವೂ 10 ಸಾವಿರದ ಆಸುಪಾಸಿನಲ್ಲಿ ಹೆಚ್ಚಾಗುತ್ತಿದೆ.
ಪ್ರಸ್ತುತ ಕರೊನಾ ಪ್ರಕರಣಗಳ ಸಂಖ್ಯೆ 3 ಲಕ್ಷ ಸಮೀಪಿಸುತ್ತಿದೆ. ಹೀಗಾಗಿ ಇದನ್ನು ನಿಯಂತ್ರಿಸಲು ದೇಶಾದ್ಯಂತ ಜೂನ್​ 15ರಿಂದ ಮತ್ತೊಂದು ಸುತ್ತಿನ ಸಂಪೂರ್ಣ ಲಾಕ್​ಡೌನ್​ ವಿಧಿಸಲಾಗುತ್ತಿದೆ ಎಂಬ ಸುದ್ದಿ ಭಾರಿ ವೈರಲ್​ ಆಗಿದೆ.
ಇದನ್ನೂ ಓದಿ;80 ವರ್ಷಗಳಲ್ಲಿ ಆಗದ್ದು ಮೂರೇ ತಿಂಗಳಲ್ಲಿ ಸಾಧ್ಯವಾಯ್ತು; ಎಲ್ಲವೂ ಲಾಕ್​ಡೌನ್​ ಮಹಿಮೆ
ಆರ್ಥಿಕ ಚಟುವಟಿಕೆಗಳಿಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಿ ಜನ ಹಾಗೂ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹೀಗಿರುವಾಗ ಮತ್ತೊಂದು ಸುತ್ತಿನ ಲಾಕ್​​ಡೌನ್​ ಸುದ್ದಿ ಸಹಜವಾಗಿಯೇ ಜನಸಾಮಾನ್ಯರನ್ನು ಆತಂಕಕ್ಕೆ ತಳ್ಳಿದೆ.
ಜೂನ್​ 15ರಿಂದ ಮತ್ತೊಮ್ಮೆ ಲಾಕ್​ಡೌನ್​ ವಿಧಿಸುವ ಸಂಭವವಿದೆ. ಕೇಂದ್ರ ಗೃಹ ಸಚಿವಾಲಯವೇ ಇಂಥದ್ದೊಂದು ಸೂಚನೆ ನೀಡಿದೆ. ರೈಲು ಹಾಗೂ ವಿಮಾನಗಳ ಸಂಚಾರ ರದ್ದಾಗಲಿದೆ ಎಂದು ವೈರಲ್​ ಸುದ್ದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಫಾರ್ವಡ್​ ಆಗುತ್ತಿದ್ದು, ಗೂಗಲ್​ನಲ್ಲಿ ಭಾರಿ ಶೋಧಕ್ಕೊಳಗಾಗಿದೆ.
ಇದನ್ನೂ ಓದಿ;ಬಿಸಿಲಲ್ಲಿ ಒಣಗೋದಕ್ಕೂ ಕರೊನಾ ತಗಲೋದಕ್ಕೂ ಸಂಬಂಧ ಇದೆ….!
ಆದರೆ, ಇಂಥದ್ದೊಂದು ಸುದ್ದಿಯನ್ನು ಸುಳ್ಳು ಎಂದು ಪ್ರೆಸ್​ ಟ್ರಸ್ಟ್​ ಬ್ಯೂರೋದ ಫ್ಯಾಕ್ಟ್​ಚೆಕ್​ ತಿಳಿಸಿದೆ. ಸುದ್ದಿಸಂಸ್ಥೆಯೊಂದರಿಂದ ಹೊರಡಿಸಲಾಗಿದೆ ಎಂಬ ವರದಿಯು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದೆ.
दावा: सोशल मीडिया पर फैलाई जा रही एक फोटो में दावा किया जा रहा है कि गृह मंत्रालय द्वारा ट्रेन और हवाई यात्रा पर प्रतिबंध के साथ 15 जून से देश में फिर से पूर्ण लॉकडाउन लागू किया जा सकता है।#PIBFactcheck– यह#Fakeहै। फेक न्यूज़ फैलाने वाली ऐसी भ्रामक फोटो से सावधान रहें।pic.twitter.com/DqmrDrcvSz
— PIB Fact Check (@PIBFactCheck)June 10, 2020

ಖಾಲಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ ಐಪಿಎಲ್​; ರಾಜ್ಯ ಕ್ರಿಕೆಟ್​ ಮಂಡಳಿಗಳಿಗೆ ಗಂಗೂಲಿ ಪತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + one =
Remember me
