ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ 3.0 ಮೊದಲ ಬಜೆಟ್​ಅನ್ನು ಜುಲೈ 23ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಿದ್ದು, ಆಂಧ್ರಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯ ಹಾಗೂ ಕ್ಷೇತ್ರಗಳಿಗೆ ಬಂಪರ್​ ಅನುದಾನವನ್ನು ಘೋಷಿಸಿದ್ದಾರೆ. ಇನ್ನೂ ಈ ಬಜೆಟ್​ ಕುರಿತು ಅಸಮಾಧಾನ ಹೊರಹಾಕಿರುವ ಇಂಡಿಯಾ ಮೈತ್ರಿಕೂಟದ ಸಂಸದರು ಸಂಸತ್​ ಭವನದ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್​, ಆರ್​ಜೆಡಿ, ಟಿಎಂಸಿ, ಸಮಾಜವಾದಿ. ಆರ್​ಎಸ್​ಪಿ, ಶಿವಸೇನೆ (UBT) ಪಕ್ಷದ ಸಂಸದರು ಸಂಸತ್​ ಭವನದ ಎದುರು ಪ್ರತಿಭಟನೆ ನಡೆಸಿದರು. ನಮಗೆ ಭಾರತ ಬಜೆಟ್ ಬೇಕು ಎನ್‌ಡಿಎ ಬಜೆಟ್ ಅಲ್ಲ ಎಂದು ಘೋಷಣೆಗಳನ್ನು ಬಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಈ ವೇಳೆ ಮಾತನಾಡಿದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಈ ಬಜೆಟ್‌ ಜನ ವಿರೋಧಿಯಾಗಿದೆ, ಇದರಿಂದ ಯಾರಿಗೂ ನ್ಯಾಯ ದೊರೆತಿಲ್ಲ. ವಿಶೇಷ ಪ್ಯಾಕೇಜ್‌ ಬಗ್ಗೆ ಹೇಳಿದರೇ ಹೊರತು, ರಾಜ್ಯಗಳಿಗೆ ನೀಡುವ ವಿಶೇಷ ಸ್ಥಾನಮಾನದ ಬಗ್ಗೆ ಉಲ್ಲೇಖಿಸಲೇ ಇಲ್ಲ. ಇದೊಂದು ವಂಚನೆಯ ಬಜೆಟ್ ಆಗಿದ್ದು, ಜನರಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.
VIDEO | "This Budget is discriminatory and unfair. They (BJP) are saying that they allotted special package to Bihar to build roads but roads are built anyway. All of this is deceptive," says Congress chief Mallikarjun Kharge (@kharge) as INDIA bloc MPs protest over…pic.twitter.com/39290NfATm
ಪ್ರತಿಭಟನೆ ವೇಳೆ ಮಾತನಾಡಿದ ರಾಜ್ಯಸಭೆ ಸದಸ್ಯ ರಾಜೀವ್​ ಶುಕ್ಲಾ, ತಮ್ಮ ಮೈತ್ರಿಯನ್ನು ಉಳಿಸಿಕೊಳ್ಳಲು ಎರಡು ರಾಜ್ಯಗಳ ಮೇಲೆ ಹೆಚ್ಚು ಕೇಂದ್ರಿಕರಿಸಿದ್ದಾರೆ. ಆರ್ಥಿಕತೆಗೆ ದೀರ್ಘಾವಧಿಯ ಲಾಭವನ್ನು ನೀಡುವ ಯೋಜನೆಗಳು ಮತ್ತು ಸುಧಾರಣೆಗಳು ಅವರ ಬಜೆಟ್‌ನಲ್ಲಿ ಕಾಣೆಯಾಗಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕೆಲಸದ ನಿರ್ವಹಣೆ ಯಾರಿಗಾದರೂ ಇಷ್ಟ…; ಕೋಚ್​ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಗೌತಿ ಖಡಕ್ ಮಾತು
#WATCH| Delhi: On Union Budget, Congress MP Rajeev Shukla says, "They have left out all the states in the budget and focussed on only two states to save their alliance. Schemes and reforms which give long-term benefit to the economy were missing from he budget."pic.twitter.com/eljhv8cKZ5
ಸಂಸದೆ ಜಯ ಬಚ್ಚನ್​ ಮಾತನಾಡಿ, ಕೇಂದ್ರ ಸರ್ಕಾರ ಮೊದಲು ಜನರಿಗೆ ಸತ್ಯವನ್ನು ಹೇಳಬೇಕೆಂದು ನಾವು ಬಯಸುತ್ತೇವೆ. ಅವರು ದೇಶದ ಯುವಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯಾವ ರಾಜ್ಯಕ್ಕೆ ಏನನ್ನೂ ನೀಡದೆ ಸಂಪೂರ್ಣವಾಗಿ ದಾರಿ ತಪ್ಪಿಸಿದ್ದಾರೆ. ಹೀಗಿರುವಾಗ ಅವರು ಉದ್ಯೋಗಗಳನ್ನು ಹೇಗೆ ಸೃಷ್ಟಿಸುತ್ತಾರೆ ಎಂಬುದನ್ನು ಮೊದಲು ಹೇಳಬೇಕು ಎಂದು ಆಗ್ರಹಿಸಿದ್ದಾರೆ.
#WATCH| Delhi: On the Union Budget, Samajwadi Party MP Jaya Bachchan says, "We just want them (Centre) to say the truth and not mislead the youth of the country…How are they going to create jobs? They have misled the states as well. Even Bihar has been misled, nothing has been…pic.twitter.com/UcIEpSurGj
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 1 =
Remember me
