ನವದೆಹಲಿ:ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಕಡ್ಡಾಯ ಗೊಳಿಸುವುದರಿಂದ ಅವರನ್ನು ಉದ್ಯೋಗಗಳಿಂದಲೇ ದೂರವಿಡುವ ಸನ್ನಿವೇಶ ನಿರ್ವಣವಾಗಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಮುಟ್ಟಿನ ರಜೆಗಾಗಿ ನೀತಿಗಳನ್ನು ರೂಪಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನಗಳನ್ನು ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ಮಹಿಳೆಯರಿಗೆ ಉದ್ಯೋಗ ಸಮಸ್ಯೆ ಉಂಟಾಗುವುದನ್ನು ನಾವು ಬಯಸುವುದಿಲ್ಲ. ಮಹಿಳೆಯರನ್ನು ರಕ್ಷಿಸಲು ನಾವು ಪ್ರಯತ್ನಿಸುತ್ತೇವೆ. ಇದು ಸರ್ಕಾರದ ನೀತಿಗೆ ಸಂಬಂಧಿಸಿದ ವಿಷಯ. ನ್ಯಾಯಾಲಯಗಳು ಪರಿಶೀಲಿಸುವ ಸಂಗತಿ ಅಲ್ಲ ಎಂದು ಸ್ಪಷ್ಟಪಡಿಸಿತು.
ಇದು ಸರ್ಕಾರಿ ನೀತಿಯ ಬಹು ಅಂಶಗಳಿಗೆ ಸಂಬಂಧಿಸಿದೆ. ನ್ಯಾಯಾಲಯವು ಮಧ್ಯಪ್ರವೇಶಿಸುವುದರಲ್ಲಿ ಯಾವುದೇ ಸಕಾರಣವಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಲ್ಲಿನ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರನ್ನು ಅರ್ಜಿದಾರರು ಭೇಟಿಯಾಗಲು ಅನುಮತಿ ನೀಡುತ್ತೇವೆ. ಈ ವಿಷಯವನ್ನು ಸರ್ಕಾರಿ ನೀತಿಗಳ ಮಟ್ಟದಲ್ಲಿ ಪರಿಶೀಲಿಸಲು ಮತ್ತು ಎಲ್ಲಾ ಮಧ್ಯಸ್ಥಗಾರರನ್ನು ಸಂರ್ಪಸಿ, ನಂತರ ನಿರ್ಧಾರ ತೆಗೆದುಕೊಳ್ಳುವಂತೆ ಕಾರ್ಯದರ್ಶಿಯಲ್ಲಿ ವಿನಂತಿಸುತ್ತೇವೆ. ಮಾದರಿ ನೀತಿಯೊಂದನ್ನು ರೂಪಿಸಬಹುದು ಎಂದು ಕೋರ್ಟ್ ತಿಳಿಸಬಹುದು. ನಮ್ಮ ಆದೇಶದಿಂದ ಯಾವುದೇ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಅಡ್ಡಿಯಾಗುವುದಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿತು. ವಿದ್ಯಾರ್ಥಿನಿಯರು ಮತ್ತು ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ನೋವಿನ ರಜೆಗೆ ನಿಯಮಗಳನ್ನು ರೂಪಿಸಲು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದಾಗ ಈ ವರ್ಷದ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ಇದೇ ರೀತಿಯ ನಿಲುವನ್ನು ತೆಗೆದುಕೊಂಡಿತ್ತು. ಪ್ರಸ್ತುತ, ಬಿಹಾರ ಮತ್ತು ಕೇರಳ ಋತುಚಕ್ರದ ರಜೆಗೆ ಅವಕಾಶ ನೀಡುತ್ತಿರುವ ಎರಡು ರಾಜ್ಯಗಳಾಗಿವೆ. ಬಿಹಾರದಲ್ಲಿ ಮಹಿಳಾ ಉದ್ಯೋಗಿಗಳಿಗೆ ಎರಡು ದಿನಗಳ ರಜೆಯಿದ್ದು, ಕೇರಳದಲ್ಲಿ ವಿದ್ಯಾರ್ಥಿನಿಯರಿಗೆ ಮೂರು ದಿನಗಳ ರಜೆಗೆ ಅವಕಾಶವಿದೆ.
ನವದೆಹಲಿ:ಸಂದೇಶಖಾಲಿ ಹಿಂಸಾಚಾರ ಪ್ರಕರಣದ ಆರೋಪಿ ಶಹಜಹಾನ್ ಶೇಖ್ ಮತ್ತು ಆತನ ಸಹಾಯಕರ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆ ಆರೋಪಗಳ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸುತ್ತಿರುವುದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಈ ಮೂಲಕ ಸಿಬಿಐ ತನಿಖೆ ಮುಂದುವರಿಸಲು ಅನುಮತಿಸಿದೆ. ಬಂಗಾಳ ಸರ್ಕಾರದ ನಡವಳಿಕೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ನ್ಯಾ. ಬಿ.ಆರ್. ಗವಾಯಿ ಮತ್ತು ನ್ಯಾ. ಕೆ.ವಿ. ವಿಶ್ವನಾಥನ್, ಒಬ್ಬ ವ್ಯಕ್ತಿಯನ್ನು ರಕ್ಷಿಸಲು ರಾಜ್ಯ ಸರ್ಕಾರ ಇಷ್ಟೊಂದು ಆಸಕ್ತಿ ಹೊಂದಿರುವುದು ಏಕೆ ಎಂದು ಪ್ರಶ್ನಿಸಿತು. ಸಂದೇಶಖಾಲಿ ಸಂಘರ್ಷ ಜೋರಾಗುತ್ತಿದ್ದಂತೆ ಬಂಗಾಳ ಪೊಲೀಸರ ಅಸಹಕಾರದ ನಡುವೆಯೇ ಸಿಬಿಐ ಶಹಜಹಾನ್​ರನ್ನು ಬಂಧಿಸಿತ್ತು. ನಂತರ ಟಿಎಂಸಿ ಶಹಜಹಾನ್​ರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಿತು. ಎಪ್ರಿಲ್​ನಲ್ಲಿ ಕಲ್ಕತ್ತಾ ಹೈಕೋರ್ಟ್ ಶಹಜಹಾನ್ ಮತ್ತವರ ಸಹಚರರ ವಿರುದ್ಧದ 42 ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಆದೇಶಿಸಿತ್ತು. ಆರೋಪಗಳ ವಿಷಯ ಸಂಕೀರ್ಣವಾಗಿದ್ದು, ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಹೇಳಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − one =
Remember me
