ಹೈದರಾಬಾದ್​: 175 ಸದಸ್ಯ ಬಲದ ವಿಧಾನಸಭೆ ಮತ್ತು 25 ಲೋಕಸಭಾ ಸ್ಥಾನಗಳಿಗೆ ಆಂಧ್ರಪ್ರದೇಶದ ಮತದಾರರು ಸೋಮವಾರ ಏಕಕಾಲದಲ್ಲಿ ಮತ ಚಲಾಯಿಸಿದರು. ಆಂಧ್ರಪ್ರದೇಶದ 25 ಲೋಕಸಭೆ ಮತ್ತು 175 ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಸಂಜೆ 5 ಗಂಟೆಯವರೆಗೆ ಅಂದಾಜು ಶೇಕಡಾ 68ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ರಾಜ್ಯಪಾಲ ಎಸ್.ಅಬ್ದುಲ್ ನಜೀರ್, ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ, ಅವರ ಸಹೋದರಿ ಹಾಗೂ ಎಪಿಸಿಸಿ ಅಧ್ಯಕ್ಷ ವೈ.ಎಸ್. ಶರ್ಮಿಳಾ, ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮತದಾನ ಮಾಡಿದರು.
ತೆಲುಗು ಚಿತ್ರರಂಗದ ಪ್ರಮುಖ ನಟರಾದ ಚಿರಂಜೀವಿ, ಎನ್‌ಟಿ ರಾಮರಾವ್, ಅಲ್ಲು ಅರ್ಜುನ್, ಬ್ರಹ್ಮಾನಂದಂ, ನಾನಿ, ಜೀವಿತಾ ರಾಜಶೇಖರ್, ರಾಜೇಂದ್ರ ಪ್ರಸಾದ್, ನಾಗ ಚೈತನ್ಯ, ಮಂಚು ಮನೋಜ್, ಶ್ರೀಕಾಂತ್ ಸೇರಿ ಹಲವರು ಮತ ಚಲಾಯಿಸಿದರು.
ಹಾಲಿ ಮುಖ್ಯಮಂತ್ರಿ ಮತ್ತು ವೈಎಸ್‌ಆರ್‌ಸಿಪಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಪುಲಿವೆಂದುಲಾದಿಂದ ಸ್ಪರ್ಧಿಸಿದ್ದಾರೆ. ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು (ಕುಪ್ಪಂ) ಮತ್ತು ಜನಸೇನಾ ಮುಖ್ಯಸ್ಥ ಮತ್ತು ನಟ ಪವನ್ ಕಲ್ಯಾಣ್ (ಪಿಠಾಪುರಂ) ಸೇರಿದಂತೆ ವಿಧಾನಸಭೆಯ ರೇಸ್‌ನಲ್ಲಿರುವ ಹಲವಾರು ಹೈ-ಪ್ರೊಫೈಲ್ ಅಭ್ಯರ್ಥಿಗಳಾಗಿದ್ದಾರೆ.
ವೈಎಸ್‌ಆರ್‌ಸಿಪಿ ಎಲ್ಲಾ 175 ವಿಧಾನಸಭೆ ಸ್ಥಾನಗಳು ಮತ್ತು 25 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುತ್ತಿವೆ. ಅವರ ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಟಿಡಿಪಿ 144 ವಿಧಾನಸಭೆ ಮತ್ತು 17 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ, ಬಿಜೆಪಿ 6 ಲೋಕಸಭೆ ಮತ್ತು 10 ವಿಧಾನಸಭೆ ಸ್ಥಾನಗಳಲ್ಲಿ ಮತ್ತು ಜೆಎಸ್‌ಪಿ 2 ಲೋಕಸಭೆ ಮತ್ತು 21 ವಿಧಾನಸಭೆ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.
ಎಪಿ ಕಾಂಗ್ರೆಸ್ ಅಧ್ಯಕ್ಷ ಮತ್ತು ಜಗನ್ ಸಹೋದರಿ ವೈ.ಎಸ್. ಶರ್ಮಿಳಾ (ಕಡಪ) ಮತ್ತು ಬಿಜೆಪಿ ರಾಜ್ಯಾಧ್ಯಕ್ಷೆ ಪುರಂದೇಶ್ವರಿ (ರಾಜಮಹೇಂದ್ರವರಂ) ಸೇರಿದಂತೆ ಇತರರು ಲೋಕಸಭೆ ಚುನಾವಣೆ ಕಣದಲ್ಲಿದ್ದಾರೆ.

ಹೂಡಿಕೆದಾರರಿಗೆ ಬಂಪರ್​ ಲಾಭ: 75 ರೂಪಾಯಿಯ ಐಪಿಒ ಷೇರು ಮೊದಲ ದಿನವೇ 270 ರೂಪಾಯಿಗೆ ಏರಿಕೆಯಾಗುವ ನಿರೀಕ್ಷೆ

ರುಚಿಕಟ್ಟಾದ ಹಣ್ಣು ಪಡೆಯಲು ಬಾಳೆಗೊನೆಯನ್ನು ಮಾಗಿಸುವ ನೈಸರ್ಗಿಕ ವಿಧಾನ: ಅಜ್ಜಿಯ ವಿಡಿಯೋ ವೈರಲ್​

ಚುನಾವಣೆ ಫಲಿತಾಂಶದ ನಂತರ ಷೇರು ಮಾರುಕಟ್ಟೆ ಏರಿಕೆಯಾಗಲಿದೆ; ಈಗ ಕುಸಿದಿರುವಾಗಲೇ ಖರೀದಿಸಿ: ಗೃಹ ಸಚಿವ ಅಮಿತ್ ಶಾ ಹೀಗೆ ಸಲಹೆ ನೀಡಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
