ಮುಂಬೈ:ಜಾಗತಿಕ ಸಾಂಕ್ರಾಮಿಕವಾದ ಕರೊನಾ ವೈರಸ್​ ಜನರಲ್ಲಿ ತೀವ್ರ ಭಯ ಹುಟ್ಟಿಸಿದೆ. ಭಾರತದಲ್ಲಿ ಬಹುತೇಕ ರಾಜ್ಯಗಳು ಲಾಕ್​ಡೌನ್​ ಆಗಿದೆ. ಅದೆಷ್ಟೋ ಮಂದಿ ವರ್ಕ್​ ಫ್ರಾಮ್​ ಹೋಂನಲ್ಲಿ ತೊಡಗಿಸಿಕೊಂಡಿದ್ದಾರೆ.ಹಾಗೇ, ಕರೊನಾ ವೈರಸ್​ ಬಹುಬೇಗನೇ ಹರಡಬಹುದಾದ ಜಿಮ್​, ಪಾರ್ಕ್​, ಥಿಯೇಟರ್​​ಗಳೆಲ್ಲ ಬಂದ್​ ಆಗಿವೆ. ಮಾ.31ರವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ.
ದಿನವಿಡೀ ಕೆಲಸ, ಅದೂಇದು ಮನರಂಜನೆ, ಪಾರ್ಟಿ ಎಂದುಕೊಂಡು ಮನೆಯಿಂದ ಹೊರಗೇ ಇರುತ್ತಿದ್ದ ಜನರೆಲ್ಲ ಈಗೀಗ ಇಡೀದಿನ ಮನೆಯಲ್ಲೇ ಇರುವ ಪರಿಸ್ಥಿತಿ ಬಂದಿದೆ. ಹಾಗಾಗಿ ಜನರು ಹೆಚ್ಚುಚ್ಚು ಆಹಾರ, ತಿನಿಸು, ಸ್ಯಾನಿಟೈಸರ್​ನಂತಹ ಸ್ವಚ್ಛತಾ ವಸ್ತುಗಳು ಸೇರಿ ಅಗತ್ಯವಾಗಿರುವುದನ್ನೆಲ್ಲ ಶೇಖರಣೆ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಒಂದು ವಿಚಿತ್ರ ಬೆಳವಣಿಗೆಯಾಗಿದೆ.
ಭಾರತದಲ್ಲಿ ಈ ಸಮಯದಲ್ಲಿ ಕಾಂಡೋಮ್​​ಗಳ ಮಾರಾಟ ಅಧಿಕವಾಗಿದೆ. ಕಳೆದ ಒಂದು ವಾರದಲ್ಲಿ ಕಾಂಡೋಮ್ ಮಾರಾಟ ಶೇ.25 ರಿಂದ ಶೇ.50ಕ್ಕೆ ಏರಿಕೆಯಾಗಿದೆ. ​ ಈ ಬಗ್ಗೆ ಹಲವು ಮೆಡಿಕಲ್​ ಶಾಪ್​ಗಳ ಮಾಲೀಕರೇ ತಿಳಿಸಿದ್ದಾರೆ.
ಜನರು ಈಗ ಮನೆಯಲ್ಲೇ ಇರುತ್ತಾರೆ. ಹೆಚ್ಚು ಸಮಯ ಕೂಡ ಇದೆ. ಅವರಿಗೆ ಬೋರ್​ ಬರುತ್ತಿದೆ. ಕಾಂಡೋಮ್​ ಮಾರಾಟ ಹೆಚ್ಚಾಗಲೂ ಇದೇ ಕಾರಣ ಎಂದು ದಕ್ಷಿಣ ಮುಂಬೈನ ಔಷಧಿ ಅಂಗಡಿ ಮಾಲೀಕ ಹರ್ಷಲ್​ ಶಾ ಹೇಳಿದ್ದಾರೆ. ಹಾಗೇ, ಸಾಮಾನ್ಯ ದಿನಗಳಲ್ಲಿ ಜನರು ಸಾಮಾನ್ಯವಾಗಿ ಮೂರು ಕಾಂಡೋಮ್​ಗಳಿರುವ ಚಿಕ್ಕ ಪ್ಯಾಕೆಟ್ ಕೊಂಡುಕೊಳ್ಳುತ್ತಾರೆ. ಆದರೆ ಈಗ 10ರಿಂದ20 ಕಾಂಡೋಮ್​ಗಳಿರುವ ದೊಡ್ಡ ಪ್ಯಾಕೆಟ್​ಗೆ ಆದ್ಯತೆ ನೀಡುತ್ತಿದ್ದಾರೆ ಎಂದೂ ತಿಳಿಸಿದ್ದಾರೆ.
ಇದು ನಿಜಕ್ಕೂ ಫನ್ನಿಯಾಗಿದೆ. ಜನರು ಸಾಮಾನ್ಯವಾಗಿ ನ್ಯೂ ಇಯರ್​ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಕಾಂಡೋಮ್​ನ್ನೂ ಹೆಚ್ಚಾಗಿ ಖರೀದಿಸುತ್ತಾರೆ. ಆದರೆ ಕರೊನಾ ಭೀತಿ ಎದುರಾಗಿ ಲಾಕ್​ಡೌನ್​ ಆದ ಸಂದರ್ಭದಲ್ಲಿ ಉಳಿದ ಅಗತ್ಯ ವಸ್ತುಗಳು, ಔಷಧಿಗಳ ಜತೆ ಕಾಂಡೋಮ್​ ಕೂಡ ಮಾರಾಟವಾಗುತ್ತಿದೆ. ನಮ್ಮ ಅಂಗಡಿಯಲ್ಲಿ ಕಾಂಡೋಮ್​ ಸ್ಟಾಕ್​ನ್ನು ಶೇ.25ರಷ್ಟು ಹೆಚ್ಚಿಸಿಕೊಂಡಿದ್ದೇನೆ ಎಂದು ಇನ್ನೋರ್ವ ಮೆಡಿಕಲ್​ ಶಾಪ್​ ಮಾಲೀಕರು ತಿಳಿಸಿದ್ದಾರೆ.
ಒಟ್ಟಾರೆ ಲಾಕ್​ ಡೌನ್​ ಪರಿಸ್ಥಿತಿ ಇರುವ ಕಳೆದ ಒಂದು ವಾರದಲ್ಲಿ ಗರ್ಭನಿರೋಧಕ ಮಾತ್ರೆಗಳು ಮತ್ತು ಕಾಂಡೋಮ್​ಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ ಎಂದು ಸಮೀಕ್ಷೆ ಹೇಳಿದೆ. ಅದರಲ್ಲೂ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಔಷಧಿ ಅಂಗಡಿಗಳಿಗೆ ಆಗಮಿಸಿ ಕಾಂಡೋಮ್​ ಕೊಳ್ಳುತ್ತಿದ್ದಾರೆ. ಇದೊಂದು ಅನಿರೀಕ್ಷಿತ ಬೆಳವಣಿಗೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)
ಕರೊನಾ ವೈರಸ್​ ಸೋಂಕು ಶಂಕಿತ ಮಾನಸಿಕ ಅಸ್ವಸ್ಥನಿಂದ ದಾದಿ ಮೇಲೆ ಹಲ್ಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
