ನವದೆಹಲಿ:ತಮ್ಮ ಇಂಗ್ಲಿಷ್​ ಜ್ಞಾನಕ್ಕೆ ಹೆಸರಾದ ಕೇರಳದ ಕಾಂಗ್ರೆಸ್​ ಸಂಸದ ಶಶಿ ತರೂರ್​ ಇಂದು ಟ್ವಿಟರ್​ನಲ್ಲಿ ಬಳಸಿದ ಶಬ್ದಗಳಿಂದಾಗಿ ನೆಟ್ಟಿಗರಿಂದ ಟ್ರೋಲ್​ ಆಗುತ್ತಿದ್ದಾರೆ. ಸಂಸತ್ತಿನ ಚಳಿಗಾಲ ಅಧಿವೇಶನದ ಮೊದಲ ದಿನವಾದ ಇಂದು ಅವರು ಸಂಸದೆಯರೊಂದಿಗೆ ತೆಗೆಸಿಕೊಂಡಿರುವ ಸೆಲ್ಫಿಯ ಶೀರ್ಷಿಕೆ ಮಹಿಳೆಯರಿಗೆ ಅಗೌರವ ಸೂಚಿಸುವಂಥದ್ದು ಎಂದು ಜನ ಸಿಟ್ಟಾಗಿದ್ದಾರೆ.
ಲೋಕಸಭೆಯ ಇತರ ಸದಸ್ಯರೊಂದಿಗೆ ಸೆಲ್ಫಿ ತೆಗೆಸಿಕೊಂಡಿರುವುದೇನೋ ಸರಿ. ಆದರೆ, ಅವರೊಂದಿಗೆ ಕೇವಲ ಮಹಿಳಾ ಸದಸ್ಯರೇ ಇರುವ ಆ ಚಿತ್ರಕ್ಕೆ “ನನ್ನ ಆರು ಜನ ಸಹಸಂಸದರೊಂದಿಗೆ ಇಂದು ಬೆಳಿಗ್ಗೆ” ಎಂದು ಬರೆದು, “ಲೋಕಸಭೆಯು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ” ಎಂಬ ಪ್ರಶ್ನೆಯನ್ನು ತರೂರ್​ ಟ್ವೀಟಿಸಿದ್ದಾರೆ.
Who says the Lok Sabha isn’t an attractive place to work? With six of my fellow MPs this morning: ⁦@supriya_sule⁩ ⁦@preneet_kaur⁩ ⁦@ThamizhachiTh⁩ ⁦@mimichakraborty⁩ ⁦@nusratchirps⁩ ⁦⁦@JothimaniMP⁩pic.twitter.com/JNFRC2QIq1
— Shashi Tharoor (@ShashiTharoor)November 29, 2021

ಶಶಿ ತರೂರ್​ರೊಂದಿಗೆ ಸೆಲ್ಫಿ ತೆಗೆಸಿಕೊಂಡಿರುವ ಸಂಸದೆಯರೆಂದರೆ ಬಾರಾಮತಿಯ ಸುಪ್ರಿಯ ಸುಳೆ, ಪಟಿಯಾಲಾದ ಪ್ರೆಣೀತ್ ಕೌರ್​, ದಕ್ಷಿಣ ಚೆನ್ನೈನ ತಮಿಜಾಚಿ ತಂಗಪಾಡಿಯನ್​, ಜಾಧವ್​ಪುರದ ಮೀಮಿ ಚಕ್ರಬೋರ್ತಿ, ಬಸೀರ್ಹತ್​ನ ನುಶ್ರತ್​ ಜಹಾನ್ ಮತ್ತು ಕರೂರಿನ ಎಸ್​.ಜೋತಿಮಣಿ.
ತರೂರ್​ರ ಈ ವೈರಲ್​ ಟ್ವೀಟ್​ ಬಗ್ಗೆ ನೆಟ್ಟಿಗರ ವೈವಿಧ್ಯಮಯ ಕಾಮೆಂಟುಗಳು ಹರಿದಾಡಿವೆ. “ಆಕರ್ಷಕ? ಛೇ! ಬೇರೆ ಯಾವುದೇ ಕ್ಷೇತ್ರದಲ್ಲಿ ನಿಮ್ಮ ಮಹಿಳಾ ಸಹೋದ್ಯೋಗಿಗಳಿಗೆ ಈ ಶಬ್ದ ಬಳಸಿದ್ದರೆ ನಿಮ್ಮನ್ನು ವಜಾಗೊಳಿಸುತ್ತಿದ್ದರು” ಎಂದೊಬ್ಬರು ಹೇಳಿದ್ದಾರೆ. ಮತ್ತೊಬ್ಬರು, “ಮಹಿಳೆಯರನ್ನು ಈ ರೀತಿಯಾಗಿ ವರ್ಣಿಸುವುದು ಎಷ್ಟು ಸರಿ?” ಎಂದು ಕೇಳಿದ್ದರೆ, ಇನ್ನೊಬ್ಬರು “ಇದು ನಿಜಕ್ಕೂ ಅಸಮಂಜಸ” ಎಂದಿದ್ದಾರೆ.(ಏಜೆನ್ಸೀಸ್)
ಬಿಟ್​ಕಾಯಿನ್​ಗೆ ಭಾರತದಲ್ಲಿ ಸಿಗುವುದೇ ಮಾನ್ಯತೆ? ವಿತ್ತ ಸಚಿವಾಲಯ ಹೇಳಿದ್ದೇನು?

30 ರೂಪಾಂತರಗಳನ್ನು ಹೊಂದಿರುವ ಒಮಿಕ್ರಾನ್​! ಲಸಿಕೆಯನ್ನೂ ಬೈಪಾಸ್​ ಮಾಡುವುದೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + three =
Remember me
