ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್​ ಸಾವಿನ ಪ್ರಕರಣದಲ್ಲಿ ಮಾದಕ ದ್ರವ್ಯ ಜಾಲದ ಆಯಾಮದ ತನಿಖೆ ನಡೆಸುತ್ತಿರುವ ಮಾದಕದ್ರವ್ಯ ನಿಯಂತ್ರಣ ದಳ (ಎನ್​ಸಿಬಿ) ಸುಶಾಂತ್​ ಗೆಳತಿ ರಿಯಾ ಚಕ್ರವರ್ತಿ ಸಹೋದರನನ್ನು ಬಂಧಿಸಿದ್ದು, ಇದನ್ನು ರಿಯಾ ತಂದೆ ಇಂದ್ರಜಿತ್​ ಚಕ್ರವರ್ತಿ ಖಂಡಿಸಿದ್ದಾರೆ.
ಭಾರತಕ್ಕೆ ಅಭಿನಂದನೆಗಳು, ನೀವು ನನ್ನ ಮಗನನ್ನು ಬಂಧಿಸಿದ್ದೀರಿ, ಮುಂದೆ ನನ್ನ ಮಗಳನ್ನು ಬಂಧಿಸುತ್ತೀರಿ ಎಂಬುದು ಖಾತ್ರಿಯಾಗಿದೆ ಮತ್ತು ಅದರ ನಂತರ ಯಾರು ಎಂಬುದರ ಬಗ್ಗೆ ನನಗೆ ತಿಳಿದಿಲ್ಲ ಎಂದು ಇಂದ್ರಜಿತ್​ ಮಗನ ಬಂಧನವನ್ನು ಟೀಕಿಸಿದ್ದಾರೆ.
ಮಧ್ಯಮ ವರ್ಗದ ಕುಟುಂಬವನ್ನು ನೀವು ಪರಿಣಾಮಕಾರಿಯಾಗಿ ನಿರ್ನಾಮ ಮಾಡಿದ್ದೀರಿ. ಆದರೆ ಸಹಜವಾಗಿ, ನ್ಯಾಯದ ಸಲುವಾಗಿ ಎಲ್ಲವೂ ಸಮರ್ಥನೆಯಾಗಿದೆ. ಜೈಹಿಂದ್​ ಎನ್ನವ ಮೂಲಕ ನಿವೃತ್ತ ಲೆಫ್ಟಿನೆಂಟ್​ ಕರ್ನಲ್​ ಆಗಿರುವ ರಿಯಾ ತಂದೆ ಇಂದ್ರಜಿತ್​ ಅಧಿಕಾರಿಗಳ ಕ್ರಮವನ್ನು ಖಂಡಿಸಿದ್ದಾರೆ.
ಇದನ್ನೂ ಓದಿ:ವಾರ ಭವಿಷ್ಯ: ರಾಹು-ಕೇತು ಸ್ಥಾನ ಬದಲಿಸುವುದರಿಂದ ಈ ರಾಶಿಯವರಿಗೆ ಶುಭಸೂಚನೆ ಸಿಗಲಿದೆ
ಅಂದಹಾಗೆ ಇಂದ್ರಜಿತ್​ ಅವರ ಮಗ ಶೋವಿಕ್​ ಚಕ್ರವರ್ತಿಯನ್ನು ಎನ್​ಸಿಬಿ ಶುಕ್ರವಾರ ಬಂಧಿಸಿದೆ. ಶೋವಿಕ್​ ಒಟ್ಟಿಗೆ ಸುಶಾಂತ್​ ಸಿಂಗ್​ ಹೌಸ್​ ಮ್ಯಾನೇಜರ್​ ಸಾಮ್ಯುಯೆಲ್​ ಮಿರಾಂಡನನ್ನು ಬಂಧಿಸಲಾಗಿದ್ದು, ಇಬ್ಬರ ವಿರುದ್ಧ ಮಾದಕ ದ್ರವ್ಯ ವಿರೋಧಿ ವಿವಿಧ ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ಬುಧವಾರದವರೆಗೂ ಇಬ್ಬರನ್ನು ಎನ್​ಸಿಬಿ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದುಕೊಂಡಿದೆ.
ಶೋವಿಕ್​ ಬಳಿ ಇದುವರೆಗೂ ಯಾವುದೇ ಡ್ರಗ್ಸ್​ ಪತ್ತೆಯಾಗಿಲ್ಲ ಮತ್ತು ಎನ್‌ಸಿಬಿಯು ಅಬ್ಬಾಸ್ ಲಖಾನಿ ಮತ್ತು ಕರಣ್ ಅರೋರಾ ಎಂಬ ಇಬ್ಬರು ವ್ಯಕ್ತಿಗಳಿಂದ 59 ಗ್ರಾಂ ಕ್ಯುರೇಟೆಡ್ ಗಾಂಜಾವನ್ನು ಪತ್ತೆಹಚ್ಚಿದ್ದು, ಸುಶಾಂತ್ ಸಿಂಗ್‌ಗೆ ಹತ್ತಿರ ಇರುವವರೊಂದಿಗೆ ಅವರು ಹೊಂದಿದ್ದ ಸಂಪರ್ಕದ ಬಗ್ಗೆ ಎನ್​ಸಿಬಿಗೆ ತಿಳಿದುಬಂದಿದೆ. ಹೀಗಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇದೇ ಪ್ರಕರಣದಲ್ಲಿ ರಿಯಾಗೂ ಎನ್​ಸಿಬಿ ಸಮನ್ಸ್​ ನೀಡುವ ಸಾಧ್ಯತೆಯು ಇದೆ.(ಏಜೆನ್ಸೀಸ್​)
ಲಕ್ಷ ಅಂಗಡಿಗಳು ಬಂದ್: ನಿರುದ್ಯೋಗ ಶೇ.228.2 ಹೆಚ್ಚಳ, ಕೈಹಿಡಿಯುವುದೇ ಸರ್ಕಾರ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + nineteen =
Remember me
