ನವದೆಹಲಿ:ಕಾಂಗ್ರೆಸ್​ ಪಕ್ಷ ತನ್ನ ನಾಯಕನ ಆಯ್ಕೆಗೆ ಮೊದಲ ಆದ್ಯತೆ ನೀಡಬೇಕು. ​ಅನಿಶ್ಚಿತತೆಯನ್ನು ಆದಷ್ಟು ಬೇಗ ನಿವಾರಿಸಬೇಕು. ಇಲ್ಲದಿದ್ದಲ್ಲಿ ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಹಿರಿಯ ಮುಖಂಡ ಶಶಿ ತರೂರ್​ ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಬರುವುದು ಬಿಡುವುದು ರಾಹುಲ್​ ಗಾಂಧಿ ಅವರಿಗೆ ಬಿಟ್ಟ ವಿಚಾರ. ಅವರು ತಮ್ಮ ನಿಲುವನ್ನು ಬದಲಾಯಿಸದಿದ್ದರೆ, ಪಕ್ಷ ಪರ್ಯಾಯವಾಗಿ ಯೋಚಿಸಬೇಕು. ರಾಷ್ಟ್ರದ ನಿರೀಕ್ಷೆಯಂತೆ ಕಾಂಗ್ರೆಸ್​ ಮುಂದುವರಿಯಲು ಸಕ್ರಿಯ ಮತ್ತು ಪೂರ್ಣ ಪ್ರಮಾಣದ ನಾಯಕತ್ವ ಇಂದಿನ ಅವಶ್ಯಕತೆ ಎಂದರು.
ಪಕ್ಷದ ಅನಿಶ್ಚಿತತೆಯಿಂದ ಮತದಾರರು ಬೇರೆ ಪಕ್ಷಗಳತ್ತ ವಾಲುವ ಸಾಧ್ಯತೆ ಹೆಚ್ಚಿವೆ. ಇದಕ್ಕೆ ಬಲವಾದ ಉದಾಹರಣೆ ಎಂದರೆ ಇತ್ತೀಚೆಗೆ ಬಂದ ದೆಹಲಿ ವಿಧಾನಸಭಾ ಫಲಿತಾಂಶ. ಅಲ್ಲಿ ಆಪ್​ ಪಕ್ಷಕ್ಕೆ ಮತದಾರ ಒಲಿದರೆ, ಬಿಜೆಪಿಗೂ ಶೇಕಡವಾರು ಮತಗಳು ಹೆಚ್ಚಿದವು ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬವೋ ಅಥವಾ ಗಾಂಧಿಯೇತರರೋ ಎನ್ನುವ ಮತ್ತೆ ಅದೇ ಎಂದಿನ ಪ್ರಶ್ನೆಗೆ ಮಾರ್ಮಿಕವಾಗಿ “ಮರಗಳಿಗಾಗಿ ಮರಗಳ ಕಳೆದುಕೊಂಡಂತೆ” ಎಂದು ಉತ್ತರಿಸಿದರು.
ರಾಹುಲ್​ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ಮರಳದಿದ್ದರೆ, ಪ್ರಿಯಾಂಕಾ ಗಾಂಧಿ ಆ ಸ್ಥಾನ ತುಂಬಬೇಕು. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾದರೆ, ಅವರು ಅಖಾಡಕ್ಕಿಳಿಯುತ್ತಾರೆ ಎಂದು ನಾನು ಭಾವಿಸಿದ್ದೇನೆ. ಅವರಿಗೆ ಆ ಚರಿಷ್ಮಾ ಹಾಗೂ ನಾಯಕತ್ವದ ಗುಣವೂ ಇದೆ. ಆದರೆ ಅಂತಿಮ ತೀರ್ಮಾನ ಅವರಿಗೇ ಬಿಟ್ಟದ್ದು ಎಂದು ತರೂರ್​ ಹೇಳಿದರು.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine − seven =
Remember me
