ನವದೆಹಲಿ:ಅಮೆರಿಕದ ಸಂಶೋಧನೆ ಮತ್ತು ಹೂಡಿಕೆ ಕಂಪನಿ ಹಿಂಡೆನ್‌ಬರ್ಗ್ ಮಾಡಿರುವ ಆರೋಪಗಳ ಕುರಿತು ಸೆಬಿ(ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ) ಅಧ್ಯಕ್ಷೆ ಮಾಧಬಿ ಪುರಿ ಬುಚ್ ಅವರ ರಾಜೀನಾಮೆಗೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಆಗಸ್ಟ್​​ 22ರಂದು ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್​​ ಮಂಗಳವಾರ(ಆಗಸ್ಟ್​​​ 13) ಪ್ರಕಟಿಸಿದೆ.
ಇದನ್ನು ಓದಿ:ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್​ ಹಸೀನಾ ವಿರುದ್ಧ ಕೊಲೆ ಕೇಸ್​ ದಾಖಲು; ಕಾರಣ ಹೀಗಿದೆ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳು, ರಾಜ್ಯಾಧ್ಯಕ್ಷರು ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖರ ಸಭೆ ನಡೆಸಿದ್ದೇವೆ. ಸಭೆಯಲ್ಲಿ 56 ಮುಖಂಡರು ಭಾಗವಹಿಸಿದ್ದರು, ಅವರಲ್ಲಿ 38 ಮಂದಿ ಸಲಹೆಗಳನ್ನು ನೀಡಿದರು. ಸಭೆಯಲ್ಲಿ ಅದಾನಿ ಗ್ರೂಪ್​​ ಮತ್ತು ಸೆಬಿಗೆ ಸಂಬಂಧಿಸಿದ ಹಗರಣವನ್ನು ಚರ್ಚಿಸಿದ್ದೇವೆ ಎಂದು ಸಭೆಯ ಬಳಿಕ ಕೆ.ಸಿ.ವೇಣುಗೋಪಾಲ್​ ತಿಳಿಸಿದರು.

ಆಗಸ್ಟ್​​​ 22ರಂದು ದೇಶಾದ್ಯಂತ ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು. ಪ್ರತಿ ರಾಜ್ಯದ ರಾಜಧಾನಿಯಲ್ಲಿ ಜಾರಿ ನಿರ್ದೇಶನಾಲಯದ ಕಚೇರಿಯನ್ನು ಘೇರಾವ್ ಮಾಡುತ್ತೇವೆ. ಎರಡು ಬೇಡಿಕೆಗಳಿಗಾಗಿ ಈ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಮೊದಲನೆಯದಾಗಿ ಸೆಬಿ ಅಧ್ಯಕ್ಷೆ ಮಧಬಿ ಪುರಿ ಬುಚ್​ ರಾಜೀನಾಮೆ ನೀಡಬೇಕು. ಮತ್ತೊಂದು ಅದಾನಿ ಗ್ರೂಪ್​ ಹಗರಣದ ತನಿಖೆಗೆ ಜೆಪಿಸಿ ರಚಿಸಬೇಕು. ನಾವು ಈ ಎರಡು ವಿಷಯಗಳಿಗೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಆಂದೋಲನವನ್ನು ನಡೆಸಲು ಸರ್ವಾನುಮತದಿಂದ ನಿರ್ಧರಿಸಿದ್ದೇವೆ ಎಂದು ಹೇಳಿದರು.
Today, Congress President Shri@Khargeconvened a meeting of the Congress party's top leaders, including general secretaries, state in-charges, and state presidents. Fifty-six leaders attended the meeting, and 38 of them offered valuable suggestions. We discussed the latest scam…pic.twitter.com/sqZzrkRYkl
ಇತ್ತೀಚೆಗೆ ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ ಸೆಬಿ ಅಧ್ಯಕ್ಷೆ ಮಾಧಬಿ ಬುಚ್ ಮತ್ತು ಅವರ ಪತಿ ಧವಲ್​ ಬುಚ್​​​ ಕಡಲಾಚೆಯ ಅದಾನಿ ಸಂಸ್ಥೆಗಳಲ್ಲಿ ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಿತ್ತು. (ಏಜೆನ್ಸೀಸ್​​)
ಕಮಲಾ ಹ್ಯಾರಿಸ್​ ಸಂದರ್ಶನಕ್ಕೆ ಎಲಾನ್​​​ ಮಸ್ಕ್​ ಆಹ್ವಾನ; ಪೋಸ್ಟ್​ ನೋಡಿ ನೆಟ್ಟಿಗರು ಏನಂದ್ರು ಗೊತ್ತಾ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 4 =
Remember me
