ನವದೆಹಲಿ:ವಂಶ ರಾಜಕಾರಣದ ಸಂಪ್ರದಾಯ ವನ್ನು ಕಾಂಗ್ರೆಸ್ ಸದ್ಯವೇ ನಡೆಯಲಿರುವ ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಯಲ್ಲೂ ಮುಂದುವರಿಸಿದೆ. ಕುಟುಂಬ ರಾಜಕಾರಣ ಮಾತ್ರವಲ್ಲದೆ ಗಾಂಧಿ ಕುಟುಂಬಕ್ಕೆ ನಿಷ್ಠೆ ಕೂಡ ಅಭ್ಯರ್ಥಿಗಳ ಆಯ್ಕೆಯಲ್ಲಿ ಒಂದು ಪ್ರಮುಖ ಮಾನದಂಡವಾಗಿರುವುದು ಎದ್ದು ಕಾಣುತ್ತದೆ. ನೇರ ಚುನಾವಣೆಯಲ್ಲಿ ಆಯ್ಕೆಯಾಗುವ ಸಾಮರ್ಥ್ಯವಿಲ್ಲದವರು, ಚುನಾವಣೆಗಳಲ್ಲಿ ಸೋತವರು ಮಾತ್ರವಲ್ಲದೆ ದೇಶ ವಿರೋಧಿಗಳೊಂದಿಗೆ ಸಂಪರ್ಕ ಹೊಂದಿದವರಿಗೂ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್​ನಿಂದ ಒಟ್ಟು 12 ಹುರಿಯಾಳುಗಳು ಕಣದಲ್ಲಿದ್ದು ಬಹುತೇಕರು ಮೇಲಿನ ಅರ್ಹತೆ ಮೇಲೆಯೇ ಟಿಕೆಟ್ ಗಿಟ್ಟಿಸಿದವರಾಗಿದ್ದಾರೆ.
ಹರಿಯಾಣದಿಂದ ಕಣದಲ್ಲಿರುವ ದೀಪಿಂದರ್ ಸಿಂಗ್ ಹೂಡಾ, ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಪುತ್ರ. ಗುಜರಾತ್​ನಿಂದ ಉಮೇದುವಾರಿಕೆ ಮಾಡಿರುವ ಭರತ್​ಸಿಂಹ ಸೋಳಂಕಿ, ಮಾಧವಸಿಂಹ ಸೋಳಂಕಿಯ ಮಗ. ಮಹಾರಾಷ್ಟ್ರದಿಂದ ನಾಮಪತ್ರ ಸಲ್ಲಿಸಿರುವ ರಾಜೀವ್ ಸತಾವ್, ರಾಜ್ಯದ ಮಾಜಿ ಸಚಿವೆ ರಜನೀತಾಯಿ ಸತಾವ್​ರ ಪುತ್ರ. ಅರವಿಂದ ನೇತಂರ ಪುತ್ರಿ ಫೂಲೋದೇವಿ ನೇತಂ ಕೂಡ ಕಣದಲ್ಲಿ ದ್ದಾರೆ. ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ವಿರುದ್ಧದ ಮೊಕದ್ದಮೆಗಳಲ್ಲಿ ವಾದ ಮಾಡುವ ಹಾಗೂ ರಾಹುಲ್ ಗಾಂಧಿಗೆ ಆಪ್ತರಾದ ಕೆ.ಟಿ.ಎಸ್. ತುಳಸಿಗೆ ಛತ್ತೀಸ್​ಗಢದಿಂದ ಟಿಕೆಟ್ ನೀಡಲಾಗಿದೆ.
ಸದಾ ವಿವಾದಾತ್ಮಕ ಹೇಳಿಕೆ ನೀಡುವ ದಿಗ್ವಿಜಯ್ ಸಿಂಗ್ ಕೂಡ ಗಾಂಧಿ ಕುಟುಂಬಕ್ಕೆ ನಿಷ್ಠರು ಎನ್ನುವ ಕಾರಣಕ್ಕೆ ಸ್ಪರ್ಧೆಗೆ ಮತ್ತೆ ಅವಕಾಶ ನೀಡಲಾಗಿದೆ. ರಾಹುಲ್ ಗಾಂಧಿ ಸುತ್ತ ಪ್ರದಕ್ಷಿಣೆ ಹಾಕುವ ಕೆ.ಸಿ. ವೇಣುಗೋಪಾಲ್ ಕೂಡ ಉಮೇದುವಾರಿಕೆ ಮಾಡಿದ್ದಾರೆ. ಅಸ್ಸಾಂನಿಂದ ರಾಜ್ಯಸಭೆಗೆ ಜಂಟಿ ಅಭ್ಯರ್ಥಿ ಕಣಕ್ಕಿಳಿಸುವಲ್ಲಿ ಕಾಂಗ್ರೆಸ್ ಪಕ್ಷ ಬದ್ರುದ್ದಿನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ ಜತೆ ಕೈಜೋಡಿಸಿದೆ. ದೇಶ-ವಿರೋಧಿ ಶಕ್ತಿಗಳೊಂದಿಗೆ ಸೇರಲು ಹಿಂಜರಿಕೆಯಿಲ್ಲ ಎನ್ನುವುದನ್ನು ಈ ಮೂಲಕ ತೋರಿಸಿದೆ ಎಂಬ ಆಪಾದನೆಗೂ ಕಾಂಗ್ರೆಸ್ ಗುರಿಯಾಗಿದೆ.
ಏಪ್ರಿಲ್​ 1ರ ನಂತರ ದುಬಾರಿಯಾಗಲಿವೆ ಮೊಬೈಲ್​ ಫೋನ್​ಗಳು; ಬೇಕಿದ್ದರೆ ಈಗಲೇ ಖರೀದಿ ಮಾಡಿಬಿಡಿ…

ಐಟಿ ದಾಳಿ ಬಳಿಕ ಹೊರಬಿತ್ತು ಸ್ಪೋಟಕ ಮಾಹಿತಿ: ಬಿಗಿಲ್, ಮಾಸ್ಟರ್​ ಚಿತ್ರಕ್ಕೆ ವಿಜಯ್​ ಪಡೆದ ಸಂಭಾವನೆ ಕೇಳಿ ಶಾಕ್​!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − seven =
Remember me
