ನವದೆಹಲಿ :ನಿನ್ನೆ ಕಾಂಗ್ರೆಸ್​ ಹಿರಿಯ ನಾಯಕ ಹಾಗೂ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಕರೊನಾ ಲಸಿಕೆಯನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ಸಲಹೆಗಳನ್ನು ನೀಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಇಂದು ಆ ಪತ್ರಕ್ಕೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಪ್ರತಿಕ್ರಿಯೆ ನೀಡಿದ್ದು, ಬಹಿರಂಗ ಪತ್ರವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಕರೊನಾ ವಿರುದ್ಧದ ಹೋರಾಟದಲ್ಲಿ ಪಕ್ಷಾತೀತವಾಗಿ ‘ರಚನಾತ್ಮಕ ಸಹಕಾರ’ ನೀಡುವ ದೆಸೆಯಲ್ಲಿ ಸಲಹೆಗಳನ್ನು ನೀಡುತ್ತಿರುವುದಾಗಿ ಸಿಂಗ್ ಪತ್ರದಲ್ಲಿ ಬರೆದಿದ್ದರು. ಅದಕ್ಕೆ ಉತ್ತರ ನೀಡಿರುವ ಹರ್ಷವರ್ಧನ್, “ನಿಮ್ಮ ‘ರಚನಾತ್ಮಕ ಸಹಕಾರ’ ಮತ್ತು ಅಮೂಲ್ಯವಾದ ಸಲಹೆಯನ್ನು ಈ ಅಸಾಧಾರಣ ಸಮಯದಲ್ಲಿ ನಿಮ್ಮ ಕಾಂಗ್ರೆಸ್ ನಾಯಕರು ಅನುಸರಿಸಿದರೆ ಇತಿಹಾಸ ನಿಮಗೆ ಧನ್ಯವಾದ ಹೇಳುತ್ತದೆ ಡಾ. ಮನಮೋಹನ್ ಸಿಂಗ್ ಜಿ” ಎಂದಿದ್ದಾರೆ.
ಇದನ್ನೂ ಓದಿ:‘ಎಷ್ಟು ಲಸಿಕೆ ಆರ್ಡರ್ ಮಾಡಿದ್ದೀರಿ ?’ – ಮೋದಿಗೆ ಮನಮೋಹನ್​ ಸಿಂಗ್ ಪ್ರಶ್ನೆ
“ಡಾ.ಸಿಂಗ್, ಕೋವಿಡ್ ವಿರುದ್ಧ ಹೋರಾಡುವ ಪ್ರಮುಖ ವಿಧಾನವಾಗಿ ವ್ಯಾಕ್ಸಿನೇಷನ್‌ನ ಮಹತ್ವವನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ. ಆದರೆ, ನಿಮ್ಮ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನರು ಮತ್ತು ನಿಮ್ಮ ಪಕ್ಷವು ರಚಿಸಿರುವ ರಾಜ್ಯ ಸರ್ಕಾರವು ನಿಮ್ಮ ಅಭಿಪ್ರಾಯವನ್ನು ಹಂಚಿಕೊಂಡಂತೆ ಕಾಣುತ್ತಿಲ್ಲ” ಎಂದಿರುವ ಆರೋಗ್ಯ ಸಚಿವರು, ಭಾರತದ ಲಸಿಕೆ ಪ್ರಯಾಣದ ಬಗ್ಗೆ ಕಾಂಗ್ರೆಸ್​ ನಾಯಕರಲ್ಲಿ “ಕೃತಜ್ಞತೆಯ ಅಭಾವ”ವಿದೆ ಎಂದಿದ್ದಾರೆ.
“ಸಂಕಷ್ಟದ ಸಂದರ್ಭಗಳಲ್ಲಿ ಜಗತ್ತನ್ನು ಲಸಿಕೆಗಳಿಂದ ಸಶಕ್ತಗೊಳಿಸಿದ್ದಕ್ಕಾಗಿ ನಮ್ಮ ವಿಜ್ಞಾನಿ ಸಮುದಾಯ ಮತ್ತು ಲಸಿಕೆ ತಯಾರಕರ ಬಗ್ಗೆ ಕೃತಜ್ಞತೆಯ ಒಂದೇ ಒಂದು ಮಾತನ್ನು ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರು ಇನ್ನೂ ಹೇಳದಿರುವುದು ಆಘಾತಕಾರಿ ಸಂಗತಿ. ಹೆಮ್ಮೆಯ ಭಾವವನ್ನು ತೋರಿಸುವ ಬದಲು, ಕಾಂಗ್ರೆಸ್ ಈ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಸುಳ್ಳನ್ನು ಹರಡಲು ಅಸಾಧಾರಣ ಆಸಕ್ತಿ ವಹಿಸಿದೆ” ಎಂದಿದ್ದಾರೆ.
History shall be kinder to you Dr Manmohan Singh ji if your offer of ‘constructive cooperation’ and valuable advice was followed by your@INCIndialeaders as well in such extraordinary times !Here’s my reply to your letter to Hon’ble PM Sh@narendramodiji 👍@PMOIndiapic.twitter.com/IJcz3aL2mo— Dr Harsh Vardhan (@drharshvardhan)April 19, 2021
History shall be kinder to you Dr Manmohan Singh ji if your offer of ‘constructive cooperation’ and valuable advice was followed by your@INCIndialeaders as well in such extraordinary times !Here’s my reply to your letter to Hon’ble PM Sh@narendramodiji 👍@PMOIndiapic.twitter.com/IJcz3aL2mo
ಕಾಂಗ್ರೆಸ್​ ಜನರಲ್ಲಿ “ಲಸಿಕೆ ಹಿಂಜರಿಕೆಯನ್ನು ಉತ್ತೇಜಿಸಿ, ದೇಶವಾಸಿಗಳ ಜೀವನದೊಂದಿಗೆ ಆಟವಾಡಿದೆ” ಎಂದು ಆರೋಪಿಸಿರುವ ಹರ್ಷವರ್ಧನ್, ಕಾಂಗ್ರೆಸ್​​ನ ಓರ್ವ ಮುಖ್ಯಮಂತ್ರಿಯೂ ಸೇರಿದಂತೆ ಉನ್ನತ ನಾಯಕರು ಲಸಿಕೆಯ ಬಗ್ಗೆ ಬಹಿರಂಗವಾಗಿ ನಕಾರಾತ್ಮಕ ಹೇಳಿಕೆಗಳನ್ನು ನೀಡಿ, ಖಾಸಗಿಯಾಗಿ ಹೋಗಿ ಲಸಿಕೆ ಪಡೆದಿದ್ದಾರೆ. ಕೆಲವು ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಹಿರಿಯ ನಾಗರೀಕರು ಮತ್ತು ಮುಂಚೂಣಿ ಕಾರ್ಮಿಕರಿಗೆ ನೀಡಲಾದ ಲಸಿಕೆ ಪ್ರಮಾಣ ತುಂಬಾ ಕಡಿಮೆ ಇದ್ದು, ಈ ರಾಜ್ಯಗಳೇ ಕರೊನಾ ಎರಡನೇ ಅಲೆಯಲ್ಲಿ ಹೆಚ್ಚಿನ ಕೊಡುಗೆ ನೀಡಿವೆ ಎಂದಿದ್ದಾರೆ.
ಇದನ್ನೂ ಓದಿ:ಮಗ ಚೇತರಿಸಿಕೊಳ್ಳಲಿಲ್ಲ ಅಂತ ಮಗಳಿಗೂ ವಿಷವುಣಿಸಿದಳು… ಮನ ಕಲಕುತ್ತೆ ಈ ಘಟನೆ
ಮನಮೋಹನ್​ಸಿಂಗ್ ಅವರು ವಿದೇಶೀ ಕರೊನಾ ಲಸಿಕೆಗಳಿಗೆ ಅನುಮತಿ ನೀಡಿ ಮತ್ತು ದೇಶೀಯ ಲಸಿಕೆ ಉತ್ಪಾದಕರಿಗೆ ಬೆಂಬಲ ನೀಡಿ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಹರ್ಷವರ್ಧನ್, ಈ ಕೆಲಸವನ್ನು ನಮ್ಮ ಸರ್ಕಾರ ಒಂದು ವಾರಕ್ಕೂ ಮುಂಚೆಯೇ ಮಾಡಿ ಆಗಿದೆ ಎಂದು ವಿವರಗಳನ್ನು ನೀಡಿದ್ದಾರೆ. ಆದಾಗ್ಯೂ ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೀವು ನೀಡಿರುವ ಸಲಹೆಗಳನ್ನು ನಾವು ಸ್ವಾಗತಿಸುತ್ತೇವೆ ಎಂದಿರುವ ಹರ್ಷವರ್ಧನ್, “ನಿಮ್ಮ ಅಮೂಲ್ಯ ಸಲಹೆಗಳನ್ನು ಮತ್ತು ಮಾರ್ಗದರ್ಶನವನ್ನು ನಿಮ್ಮ ಪಕ್ಷದವರಿಗೂ ಸ್ವಲ್ಪ ನೀಡಿ” ಎಂದೂ ಕುಟುಕಿದ್ದಾರೆ.
ಆದರೆ ಇಷ್ಟೆಲ್ಲಾ ಹೇಳಿರುವ ಸಚಿವ ಹರ್ಷವರ್ಧನ್ ಅವರು, ಮುಂದಿನ ಆರು ತಿಂಗಳಲ್ಲಿ ಕೇಂದ್ರ ಸರ್ಕಾರ ಎಷ್ಟು ಲಸಿಕೆಗಳ ಪೂರೈಕೆಗೆ ಆದೇಶ ನೀಡಿದೆ ? ಲಸಿಕಾ ಅಭಿಯಾನದ ತ್ವರಿತ ಸಾಧನೆಗೆ ಸಾಕಷ್ಟು ಲಸಿಕೆಗಳನ್ನು ಆರ್ಡರ್ ಮಾಡಿದ್ದೀರಾ ? ಎಂದು ಬಹಿರಂಗಪಡಿಸಿ ಎಂದು ಸಿಂಗ್ ಕೇಳಿರುವುದಕ್ಕೆ ಏನೂ ಉತ್ತರ ನೀಡಿಲ್ಲ.(ಏಜೆನ್ಸೀಸ್)
‘ದೆಹಲಿ ಪೊಲೀಸರು ಚಕ್ರವರ್ತಿಗಳಂತೆ ವರ್ತಿಸುತ್ತಿದ್ದಾರೆ’ ಎಂದ ದೀಪ್ ಸಿಧು ವಕೀಲ
ಪಂಚಾಯಿತಿ ಚುನಾವಣೆ : ಮುಂದೂಡುವ‌ ಬಗ್ಗೆ ಸಚಿವ ಈಶ್ವರಪ್ಪ ಹೇಳಿದ್ದೇನು?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + fourteen =
Remember me
