ನವದೆಹಲಿ:ಹೊಸ ಸಂಸತ್​ ಭವನವನ್ನು “ಮೋದಿ ಮಲ್ಟಿಪ್ಲೆಕ್ಸ್ ಅಥವಾ ಮೋದಿ ಮ್ಯಾರಿಯೆಟ್” ಎಂದು ಕರೆಯಬೇಕು, ಏಕೆಂದರೆ ಅದು ಪ್ರಧಾನಿ ಅವರ ಉದ್ದೇಶಗಳನ್ನು ಚೆನ್ನಾಗಿ ಅರಿತುಕೊಂಡಿದೆ ಎಂದು ಕಾಂಗ್ರೆಸ್​ ನಾಯಕ ಜೈರಾಮ್​ ರಮೇಶ್​ ಟೀಕಿಸಿದರು.
ಹಳೆಯ ಸಂಸತ್​ ಭವನನ್ನು ಮಿಸ್​ ಮಾಡಿಕೊಳ್ಳುತ್ತಿರುವ ಜೈರಾಮ್​ ರಮೇಶ್​, ಹೊಸ ಕಟ್ಟಡವನ್ನು ಇಕ್ಕಟ್ಟಿನ ಮತ್ತು ಜಟಿಲತೆ ಎಂದಿದ್ದಾರೆ. ಹೊಸ ಸಂಸತ್ತಿನ ಕಟ್ಟಡವನ್ನು ತುಂಬಾ ಪ್ರಚಾರದೊಂದಿಗೆ ಪ್ರಾರಂಭಿಸಲಾಗಿದೆ ಮತ್ತು ವಾಸ್ತವವಾಗಿ ಪ್ರಧಾನಿಯವರ ಉದ್ದೇಶಗಳನ್ನು ಹೊಸ ಕಟ್ಟಡ ಚೆನ್ನಾಗಿ ಅರಿತುಕೊಂಡಿದೆ. ಹೀಗಾಗಿ ಇದನ್ನು ಮೋದಿ ಮಲ್ಟಿಪ್ಲೆಕ್ಸ್ ಅಥವಾ ಮೋದಿ ಮ್ಯಾರಿಯೆಟ್ ಎಂದು ಕರೆಯಬೇಕು. ಹೊಸ ಸಂಸತ್ತಿಗೆ ಕಾಲಿಟ್ಟ ನಾಲ್ಕು ದಿನಗಳ ನಂತರ ನಾನು ಕಂಡುಕೊಂಡಿದ್ದೇನೆಂದರೆ ಎರಡು ಸದನಗಳ ಒಳಗೆ ಮತ್ತು ಲಾಬಿಗಳಲ್ಲಿ ತುಂಬಿದ್ದ ಗೊಂದಲಗಳು ಮತ್ತು ಸಂಭಾಷಣೆಗಳ ಸಾವು. ವಾಸ್ತುಶಿಲ್ಪವು ಪ್ರಜಾಪ್ರಭುತ್ವವನ್ನು ಕೊಲ್ಲಬಹುದಾದರೆ, ಸಂವಿಧಾನವನ್ನು ಮರು ಬರೆಯದೆಯೂ ಪ್ರಧಾನಿ ಈಗಾಗಲೇ ಯಶಸ್ವಿಯಾಗಿದ್ದಾರೆ ಎಂದು ಜೈರಾಮ್​ ರಮೇಶ್​ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಹೊಸ ಮತ್ತು ಹಳೆಯ ಸಂಸತ್ತಿನ ಕಟ್ಟಡಗಳ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಹೊಸ ಕಟ್ಟಡದ ಸಭಾಂಗಣಗಳು ಸರಳವಾಗಿ, ಸ್ನೇಹಶೀಲ ಹಾಗೂ ಆರಾಮದಾಯಕವಾಗಿಲ್ಲ ಮತ್ತು ಪರಸ್ಪರ ನೋಡಲು ಬೈನಾಕ್ಯುಲರ್​ ಅಗತ್ಯವಿದೆ ಎಂದು ಹೇಳಿದರು.
ಹಳೆಯ ಸಂಸತ್ತಿನ ಕಟ್ಟಡವು ಒಂದು ನಿರ್ದಿಷ್ಟ ಸೆಳವು ಹೊಂದಿತ್ತು ಮತ್ತು ಸಂಭಾಷಣೆಗಳನ್ನು ಸುಗಮಗೊಳಿಸಿತು. ಸೆಂಟ್ರಲ್ ಹಾಲ್ ಮತ್ತು ಕಾರಿಡಾರ್‌ಗಳ ನಡುವೆ ನಡೆಯಲು ಸುಲಭವಾಗಿತ್ತು. ಈ ಹೊಸ ಭವನ ಸಂಸತ್ತಿನ ಕಲಾಪವನ್ನು ಯಶಸ್ವಿಗೊಳಿಸಲು ಅಗತ್ಯವಾದ ಬಂಧವನ್ನು ದುರ್ಬಲಗೊಳಿಸುತ್ತದೆ ಎಂದ ವಿವರಿಸಿದ್ದಾರೆ.
ಇದನ್ನೂ ಓದಿ:ಸಿಲ್ಕ್​ ಸ್ಮಿತಾ ಶವದೊಂದಿಗೆ ಲೈಂಗಿಕ ಕ್ರಿಯೆ! ಕಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸಿದ ನಟನ ಹೇಳಿಕೆ
ಎರಡು ಸದನಗಳ ನಡುವಿನ ತ್ವರಿತ ಸಮನ್ವಯವು ಈಗ ಹೆಚ್ಚು ತೊಡಕಾಗಿದೆ. ಹಳೆಯ ಕಟ್ಟಡದಲ್ಲಿ, ನೀವು ಕಳೆದುಹೋದರೆ, ಅದು ವೃತ್ತಾಕಾರವಾಗಿರುವುದರಿಂದ ನೀವು ಮತ್ತೆ ನಿಮ್ಮ ದಾರಿಯನ್ನು ಕಂಡುಕೊಳ್ಳುತ್ತೀರಿ. ಆದರೆ, ಹೊಸ ಕಟ್ಟಡದಲ್ಲಿ ನೀವು ದಾರಿ ತಪ್ಪಿದರೆ ನೀವು ಜಟಿಲದಲ್ಲಿ ಕಳೆದುಹೋಗುತ್ತೀರಿ. ಹಳೆಯ ಕಟ್ಟಡವು ನಿಮಗೆ ಸ್ಥಳಾವಕಾಶ ಮತ್ತು ಮುಕ್ತತೆಯ ಪ್ರಜ್ಞೆಯನ್ನು ನೀಡಿತು ಆದರೆ, ಹೊಸದು ಬಹುತೇಕ ಇಕ್ಕಟ್ಟಿನಿಂದ ಕೂಡಿದೆ ಎಂದಿದ್ದಾರೆ.
ನೂತನ ಸಂಸತ್ ಭವನ ನೋವಿನಿಂದ ಕೂಡಿದ್ದು, ಯಾತನಾಮಯವಾಗಿದೆ ಎಂದು ಕರೆದಿರುವ ಕಾಂಗ್ರೆಸ್ ನಾಯಕ, ಸಂಸತ್ತಿನಲ್ಲಿ ಸುತ್ತಾಡುವ ಖುಷಿಯೇ ಹೋಗಿದೆ ಎಂದಿದ್ದಾರೆ.
ಸಂಸತ್‌ನಲ್ಲಿ ಸುಮ್ಮನೆ ಸುತ್ತಾಡುವ ಆನಂದ ಮಾಯವಾಗಿದೆ. ನಾನು ಹಳೆಯ ಕಟ್ಟಡಕ್ಕೆ ಹೋಗಲು ಎದುರು ನೋಡುತ್ತಿದ್ದೆ. ಹೊಸ ಕಟ್ಟಡವು ನೋವಿನಿಂದ ಕೂಡಿದೆ. ಅನೇಕ ಸಹೋದ್ಯೋಗಿಗಳು ಅದೇ ರೀತಿ ಭಾವಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಹೊಸ ಕಟ್ಟಡದ ವಿನ್ಯಾಸವು ಅವರ ಕೆಲಸ ಮಾಡಲು ನೆರವಾಗುವ ವಿವಿಧ ಅಂಶಗಳನ್ನು ಪರಿಗಣಿಸಿಲ್ಲ ಎಂದು ನಾನು ಸೆಕ್ರೆಟರಿಯೇಟ್‌ನಲ್ಲಿರುವ ಸಿಬ್ಬಂದಿಯಿಂದ ಕೇಳಿದ್ದೇನೆ. ಬಹುಶಃ 2024ರಲ್ಲಿ ಆಡಳಿತ ಬದಲಾವಣೆಯ ನಂತರ ಹೊಸ ಸಂಸತ್ತಿನ ಕಟ್ಟಡಕ್ಕೆ ಉತ್ತಮ ಬಳಕೆಯನ್ನು ಕಾಣಬಹುದು ಎಂದು ಜೈರಾಮ್​ ರಮೇಶ್​ ಹೇಳಿದ್ದಾರೆ.
ಹೊಸ ಸಂಸತ್ ಕಟ್ಟಡವನ್ನು ಮೇ 28 ರಂದು ಉದ್ಘಾಟಿಸಲಾಯಿತು. ಆದರೆ, ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಸಂಸತ್ತಿಗೆ ಅಧಿಕೃತ ಪ್ರವೇಶವಾಗಿತ್ತು.(ಏಜೆನ್ಸೀಸ್​)
ಸಿಂಗಂನಂತಹ ಸಿನಿಮಾಗಳು ಸಮಾಜಕ್ಕೆ ಮಾರಕ ಸಂದೇಶ ನೀಡುತ್ತವೆ: ಬಾಂಬೆ ಹೈಕೋರ್ಟ್ ಜಡ್ಜ್

VIDEO| ಮಗನಿಗೆ ಶಿಕ್ಷೆ ನೀಡಿದ ಎಂಬ ಕಾರಣಕ್ಕೆ ಶಿಕ್ಷಕನನ್ನು ಅಮಾನುಷವಾಗಿ ಥಳಿಸಿದ ಪಾಲಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + seven =
Remember me
