ನವದೆಹಲಿ:ಕಾಂಗ್ರೆಸ್​ಗೆ ಆದಾಯ ತೆರಿಗೆ ಇಲಾಖೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ತೆರಿಗೆ ಇಲಾಖೆಯು 3567 ಕೋಟಿ ರೂ.ಪಾವತಿಸುವಂತೆ ಹೊಸದಾಗಿ ನೋಟಿಸ್​ ನೀಡಿದೆ ಎಂದು ಭಾನುವಾರ ಕಾಂಗ್ರೆಸ್​ ತಿಳಿಸಿದೆ.
ಇದನ್ನೂ ಓದಿ:ಅಥಿಯಾ ಶೆಟ್ಟಿ ಪ್ರೆಗ್ನೆನ್ಸಿ ಬಗ್ಗೆ ಸುಳಿವು ಕೊಟ್ಟ ಸುನೀಲ್‌ ಶೆಟ್ಟಿ!: ರಾಹುಲ್​ ತಂದೆ ಆಗಲಿದ್ದಾರೆ?
2014-15 ರಿಂದ 2016-17ರವರೆಗಿನ ಆರ್ಥಿಕ ವರ್ಷಗಳಿಗೆ ಸಂಬಂಧಿಸಿದಂತೆ 1,745 ಕೋಟಿ ರೂಪಾಯಿ ತೆರಿಗೆ ಪಾವತಿಗೆ ನೋಟಿಸ್ ಬಂದಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ಇದರೊಂದಿಗೆ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷದಿಂದ ಒಟ್ಟು 3,567 ಕೋಟಿ ರೂ. ತೆರಿಗೆ ಪಾವತಿಸುವಂತೆ ಡಿಮ್ಯಾಂಡ್ ನೋಟಿಸ್​ ನೀಡಲಾಗಿದೆ.
2014-15ನೇ ವರ್ಷ 663 ಕೋಟಿ ರೂ., 2015-16ನೇ ವರ್ಷ 664 ಕೋಟಿ ರೂ., 2016-17ನೇ ವರ್ಷ 417 ಕೋಟಿ ರೂ. ತೆರಿಗೆ ಬಡ್ಡಿ ಹಾಗೂ ದಂಡಕ್ಕೆ ಸಂಬಂಧಿಸಿದಂತೆ ಹೊಸದಾಗಿ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಲಾಗಿದೆ ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಕಾಂಗ್ರೆಸ್ ನ ಕೆಲವು ನಾಯಕರಿಂದ ವಶಪಡಿಸಿಕೊಂಡ ಡೈರಿಗಳಲ್ಲಿ ಮಾಡಿದ “ಮೂರನೇ ವ್ಯಕ್ತಿ ನಮೂದು” ಗಳಿಗೂ ತೆರಿಗೆ ವಿಧಿಸಲಾಗಿದೆ ಎನ್ನಲಾಗಿದೆ. ಶುಕ್ರವಾರ ನೀಡಲಾದ ನೋಟಿಸ್ ನಲ್ಲಿ ಸುಮಾರು 1,823 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ಕಾಂಗ್ರೆಸ್ ಪಕ್ಷಕ್ಕೆ ಸೂಚಿಸಲಾಗಿತ್ತು
ತರಿಗೆ ನೋಟೀಸ್​ಗಳನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿತ್ತು. ಅದರ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ನೋಟೀಸ್ ನೀಡಿದೆ.
ಅಥಿಯಾ ಶೆಟ್ಟಿ ಪ್ರೆಗ್ನೆನ್ಸಿ ಬಗ್ಗೆ ಸುಳಿವು ಕೊಟ್ಟ ಸುನೀಲ್‌ ಶೆಟ್ಟಿ!: ರಾಹುಲ್​ ತಂದೆ ಆಗಲಿದ್ದಾರೆ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen + 2 =
Remember me
