ಡಿಜಿಟಲ್ ಐಡಿ ಕಾರ್ಡ್ ಹೀಗಿರಲಿದೆ..
ಎಐಸಿಸಿಐ ಮತದಾರನ ಹೆಸರುಫೋಟೋಯಾವ ರಾಜ್ಯ ಘಟಕಹೊಣೆಗಾರಿಕೆಬಾರ್​ಕೋಡ್​
ಚುನಾವಣಾ ಸಮಿತಿಯಲ್ಲಿವವರು
ಮಧುಸೂದನ್ ಮಿಸ್ತ್ರಿ (ಅಧ್ಯಕ್ಷರು)ಕೃಷ್ಣಬೈರೇ ಗೌಡಅರವಿಂದರ್ ಸಿಂಗ್ ಲವ್ಲೀರಾಜೇಶ್ ಮಿಶ್ರಾಜೋತಿಮಣಿ
ನವದೆಹಲಿ:ಸತತ ಸೋಲಿನ ಕಹಿ ಉಣ್ಣುತ್ತಲೇ ಇರುವ ಕಾಂಗ್ರೆಸ್ ಪಕ್ಷದ ನಾಯಕತ್ವದ ಬಗ್ಗೆ ಹಿರಿಯ ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುವುದನ್ನು ಮುಂದುವರಿಸಿದ್ದಾರೆ. ಈ ನಡುವೆ, ಹೊಸ ಅಧ್ಯಕ್ಷರ ಆಯ್ಕೆ ವಿಚಾರವೂ ಪದೇಪದೆ ಚರ್ಚೆಗೆ ಬರುತ್ತಿವೆ. ಹೊಸ ವಿಚಾರ ಅಂದರೆ ಕಾಂಗ್ರೆಸ್ ಪಕ್ಷದ ಹೊಸ ಅಧ್ಯಕ್ಷರ ಆಯ್ಕೆ ನಡೆಸುವುದಕ್ಕೆ ಡಿಜಿಟಲ್ ಸ್ಪರ್ಶ ನೀಡುವುದಕ್ಕೆ ಹೈಕಮಾಂಡ್ ತೀರ್ಮಾನಿಸಿದೆಯಂತೆ!
ಪಕ್ಷದ ಕೇಂದ್ರೀಯ ಚುನಾವಣಾ ತಂಡ 1,500ರಷ್ಟು ಎಐಸಿಸಿ ಪದಾಧಿಕಾರಿಗಳ ಮತದಾರರ ಯಾದಿಯನ್ನು ಸಿದ್ಧಪಡಿಸುತ್ತಿದೆ. ಅವರಿಗೆ ಡಿಜಿಟಲ್ ಐಡಿ ಕಾರ್ಡ್​ಗಳನ್ನು ಒದಗಿಸಲು ಕ್ರಮ ತೆಗೆದುಕೊಂಡಿದೆ. ಇದೇ ಮೊದಲ ಬಾರಿಗೆ ಪಕ್ಷದ ಚುನಾವಣೆಗೆ ಡಿಜಿಟಲ್ ಸ್ಪರ್ಶ ನೀಡಲು ಹೈಕಮಾಂಡ್ ತೀರ್ಮಾನಿಸಿರುವಂಥದ್ದು. ಇದಕ್ಕಾಗಿ ರಾಜ್ಯ ಘಟಕಗಳಿಗೆ ಎಐಸಿಸಿ ಪದಾಧಿಕಾರಿಗಳ ಡಿಜಿಟಲ್ ಫೋಟೋ ಸಂಗ್ರಹಿಸಿ ಕಳುಹಿಸಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ:‘ಸಪ್ತಪದಿ’ ತುಳಿಯದೆ ಮುಗಿದ ಮದುವೆ! – ನೋಂದಾಣಿದಾರರ ಸಂಸಾರ ಶುರು ಆದರೂ ಸಾಮೂಹಿಕ ವಿವಾಹಕ್ಕೆ ಕೂಡದ ಮುಹೂರ್ತ
ಮುಂದಿನ ಕೆಲವೇ ವಾರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ರಾಹುಲ್ ಗಾಂಧಿ ಅಧ್ಯಕ್ಷರಾಗಿ ಆಯ್ಕೆ ಆದಾಗ 2017ರಲ್ಲಿ ಇದ್ದ ಎಐಸಿಸಿ ಪದಾಧಿಕಾರಿಗಳ ಪಟ್ಟಿಯನ್ನೇ ಈ ಚುನಾವಣೆಗೆ ಪರಿಗಣಿಸಲಾಗಿದೆ. ಒಮ್ಮೆ ಪಕ್ಷದ ಎಲೆಕ್ಟೋರಲ್ ಕಾಲೇಜ್​ ಚುನಾವಣೆ ಸಿದ್ಧವಾದ ಕೂಡಲೇ ಈ ಬಗ್ಗೆ ಅಧಿಸೂಚನೆ ಪ್ರಕಟಿಸಲಾಗುವುದು. ಪಂಚ ರಾಜ್ಯ ಚುನಾವಣೆಗೂ ಮೊದಲೇ ಪಕ್ಷದ ಈ ಚುನಾವಣೆ ನಡೆಯಲಿದೆ. ಅಧ್ಯಕ್ಷರ ಅಧಿಕಾರಾವಧಿ 2 ವರ್ಷವಾಗಿದ್ದು, ಪ್ರತಿ ಎರಡು ವರ್ಷಕ್ಕೊಮ್ಮೆ ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಪ್ರತಾಪಗಢ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ- ಆರು ಮಕ್ಕಳು ಸೇರಿ 14 ಜನ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
