ನವದೆಹಲಿ:ಲಡಾಖ್​ನ ಪೂರ್ವ ಭಾಗದಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಉಂಟಾಗಿರುವ ಘರ್ಷಣೆಯ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಅವಸರದಲ್ಲಿ ಕಾಂಗ್ರೆಸ್​ ಮುಖಂಡರು ಎಡವಟ್ಟು ಮಾಡಿಕೊಂಡಿದ್ದಾರೆ.
ಅಂದಾಜು ಐದು ತಿಂಗಳ ಹಿಂದೆ ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಲಾಗಿತ್ತು ಎನ್ನಲಾದ, ಭಾರತ ಮತ್ತು ಚೀನಾ ಯೋಧರು ನಿರಾಯುಧರಾಗಿ ಪರಸ್ಪರ ತಿಕ್ಕಾಟಕ್ಕಿಳಿದಿರುವ ದೃಶ್ಯ ಇದಾಗಿದೆ. ಆದರೆ, ಈ ದೃಶ್ಯಗಳು ಜೂ.15ರಂದು ನಡೆದ ಘರ್ಷಣೆಯ ದೃಶ್ಯ ಎಂಬಂತೆ ಬಿಂಬಿಸಿ, ಭಾರತೀಯ ಯೋಧರು ನಿರಾಯುಧರಾಗಿ ಚೀನಾ ಯೋಧರನ್ನು ಹಿಮ್ಮೆಟ್ಟಿಸಲು ಹೋಗಿದ್ದೇಕೆ ಎಂದು ಕಾಂಗ್ರೆಸ್​ನ ವಕ್ತಾರ ರಣದೀಪ್​ ಸಿಂಗ್​ ಸುರ್ಜೇವಾಲ ಟ್ವೀಟ್​ ಮಾಡಿದ್ದರು.
ಇದನ್ನೂ ಓದಿ:ಹಿಂದೆ ಸರಿಯುವಾಗ ಬೇಕೆಂದೇ ಟೆಂಟ್​ ಹಾಕಿ ಕಾಲುಕೆರೆದು ಚೀನಾ ಜಗಳ
ವಾಸ್ತವ ಸಂಗತಿಗಳನ್ನು ಮುಚ್ಚಿಡುವುದು ಬೇಡ @DrSJaishankar ಎಂದು ಟ್ವೀಟ್​ ಸಂದೇಶವನ್ನು ಪ್ರಾರಂಭಿಸಿರುವ ಸುರ್ಜೇವಾಲಾ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನು ನೋಡಿ ಮತ್ತು ನಮ್ಮ ಯೋಧರು ಶಸ್ತ್ರಾಸ್ತ್ರಗಳನ್ನು ಏಕೆ ಕೊಂಡೊಯ್ದಿರಲಿಲ್ಲ (ಗಲ್ವಾನ್​ ದೃಶ್ಯಕ್ಕಾಗಿ 34ನೇ ಸೆಕೆಂಡ್​ ದೃಶ್ಯ ವೀಕ್ಷಿಸಿ). ಜೀವ ಹೋಗುವಂತ ಪ್ರಸಂಗದಲ್ಲಿ ಕೂಡ ಯೋಧರನ್ನು ನಿರಾಯುಧರನ್ನಾಗಿ ಅಲ್ಲಿಗೆ ಕಳುಹಿಸಲು ಗಡಿ ನಿರ್ವಹಣೆಯ ಒಪ್ಪಂದ ಬಗ್ಗೆ ಪ್ರಸ್ತಾಪಿಸುವುದನ್ನು ನಿಲ್ಲಿಸಿ ಎಂದು ಸಂದೇಶವನ್ನು ಮುಗಿಸಿದ್ದರು.ಆದರೆ ಈ ಟ್ವೀಟ್​ ಅನ್ನು ಗಮನಿಸಿದ ನೆಟ್ಟಿಗರು, ಇದೊಂದು ಹಳೆಯ ವಿಡಿಯೋ ತುಣುಕು. ಹಲವು ತಿಂಗಳಿಂದ ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂಬುದನ್ನು ಕ್ಷಣಾರ್ಧದಲ್ಲಿ ಗ್ರಹಿಸಿದ್ದರು.
Let us not muddle facts@DrSJaishankarPl see the video on social media & tell why no firearms are being carried(see 34th sec for Galwan)
And Stop quoting Agreement on Border Management to justify sending Soldiers Unarmed in tactical military situation with lives at stakepic.twitter.com/MT1rjZYJ23
— Randeep Singh Surjewala (@rssurjewala)June 18, 2020

ಮಾಹಿತಿಗಾಗಿ ಗಂಭೀರವಾಗಿ ಇಂಟರ್​ನೆಟ್​ ಅನ್ನು ತಡಕಾಡಿದಾಗ ಈ ವಿಡಿಯೋ ತುಣುಕು 2020ರ ಜನವರಿಯಿಂದ ಯೂಟ್ಯೂಬ್​ನಲ್ಲಿ ಹರಿದಾಡುತ್ತಿರುವುದು ಖಚಿತಪಟ್ಟಿದೆ. ಆದರೆ, ಈ ತಿಕ್ಕಾಟ ವಾಸ್ತವ ಗಡಿರೇಖೆಯ ಯಾವ ಕಡೆ ಸಂಭವಿಸಿತ್ತು ಎಂಬುದು ಸ್ಪಷ್ಟವಾಗಿಲ್ಲ.
ಜೈಲಿಂದ ಬಿಡುಗಡೆಯಾದ ರೌಡಿ ಕೊರಂಗು ಕೃಷ್ಣನನ್ನು ಕರೆದೊಯ್ಯಲು ಬಂದದ್ದು 70 ಕಾರುಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 9 =
Remember me
