https://www.vijayavani.net/goldwoman-ias-officer-dismiss/ತಿರುವನಂತಪುರಂ:ಇಲ್ಲಿನ ವಿಮಾನ ನಿಲ್ದಾಣದಲ್ಲಿ, ರಾಜತಾಂತ್ರಿಕ ಡಿಪ್ಲೊಮೆಟಿಕ್ ಬ್ಯಾಗೇಜ್​ನಲ್ಲಿ ನಿನ್ನೆ ಸಿಕ್ಕಿರುವ 15 ಕೋಟಿ ರೂ.ಮೌಲ್ಯದ 30 ಕೆ.ಜಿ. ತೂಕದ ಚಿನ್ನದ ಪ್ರಕರಣ ಪ್ರತಿದಿನ ತಿರುವು ಪಡೆಯುತ್ತಿದೆ.
ತಿರುವನಂತಪುರದ ಯುನೈಟೆಡ್ ಅರಬ್ ಎಮಿರೇಟ್ಸ್ ಕಾನ್ಸುಲೇಟ್‌ನಲ್ಲಿ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿದ್ದ ಸ್ವಪ್ನಾ ಸುರೇಶ್​ ಅವರ ಹೆಸರು ಈ ಚಿನ್ನ ಕಳ್ಳಸಾಗಣೆಯಲ್ಲಿ ಕೇಳಿಬರುತ್ತಿದೆ. ಹಾಗೇ ಸ್ವಪ್ನಾ ಸುರೇಶ್​ ಜತೆ ಐಎಎಸ್‌ ಅಧಿಕಾರಿ ಎಂ.ಶಿವಶಂಕರ್ ಅವರನ್ನು ಅಮಾನತು ಕೂಡ ಮಾಡಲಾಗಿದೆ. ಎಂ.ಶಿವಶಂಕರ್ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರ ಆಪ್ತ ಕಾರ್ಯದರ್ಶಿಯೂ ಆಗಿದ್ದವರು. ಹೀಗಾಗಿ ಸಿಎಂ ಹೆಸರೂ ಕೂಡ ಇದರಲ್ಲಿ ಕೇಳಿಬರುತ್ತಿದೆ.
ಈ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಕಾಂಗ್ರೆಸ್​ ಮುಖಂಡ ರಮೇಶ್​ ಚೆನ್ನಿತಾಲ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಗಂಭೀರ ಸ್ವರೂಪ ಪಡೆಯುತ್ತಿರುವ ಚಿನ್ನದ ಕಳ್ಳ ಸಾಗಣೆ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದರಲ್ಲಿ ಮುಖ್ಯಮಂತ್ರಿ ಕಚೇರಿಯ ಪಾತ್ರವೂ ಇದೆ ಎಂಬ ಮಾತು ಕೇಳಿಬರುತ್ತಿದೆ. ಇದು ಎಷ್ಟರಮಟ್ಟಿಗೆ ಸತ್ಯ, ಮುಖ್ಯಮಂತ್ರಿ ಕಚೇರಿ ಪಾತ್ರ ಏನೆಂಬುದನ್ನು ತನಿಖೆ ನಡೆಯಬೇಕು ಎಂದಿದ್ದಾರೆ.
ರಾಷ್ಟ್ರದ ಭದ್ರತೆ, ನಮ್ಮ ದೇಶ ಹಾಗೂ ಯುಎಇ ನಡುವಿನ ಸ್ನೇಹ ಸಂಬಂಧವನ್ನು ಹಾಗೇ ಉಳಿಸಿಕೊಳ್ಳುವ ದೃಷ್ಟಿಯಿಂದ ಚಿನ್ನದ ಹಗರಣದ ತನಿಖೆಯನ್ನು ಸಿಬಿಐನಂತಹ ಸಂಸ್ಥೆಗೆ ವಹಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರು ಖುದ್ದಾಗಿ ಗಮನಹರಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಹಗರಣದಲ್ಲಿ ಎಲ್ಲ ದೊಡ್ಡ ಜನರ ಹೆಸರೇ ಕೇಳಿಬರುತ್ತಿದ್ದು, ಆದಷ್ಟು ಬೇಗ ವಾಸ್ತವ ಗೊತ್ತಾಗಬೇಕು ಎಂದಿದ್ದಾರೆ. (ಏಜೆನ್ಸೀಸ್​)
ಕುತೂಹಲ ಮೂಡಿಸುತ್ತಿದ್ದಾಳೆ ‘ಚಿನ್ನದ ರಾಣಿ’: ಐಎಎಸ್‌ ಅಧಿಕಾರಿ ತಲೆದಂಡ!

Video: ಇಸ್ಲಮಾಬಾದ್​ನಲ್ಲಿ ದೇಗುಲ ನಿರ್ಮಿಸಿದರೆ ಹಿಂದುಗಳೆಲ್ಲರನ್ನೂ ಹತ್ಯೆ ಮಾಡುತ್ತಾನಂತೆ 4ರ ಬಾಲಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 1 =
Remember me
