ನವದೆಹಲಿ:ಇಂದು ಬಿಜೆಪಿ ಸೇರ್ಪಡೆಯಾದ ಸಿಂಧಿಯಾ ರಾಜಮನೆತನದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ತುಂಬ ಹೊಗಳಿದರು.
ನಾಲ್ಕು ಬಾರಿ ಸಂಸದರಾಗಿ ಚುನಾಯಿತರಾಗಿದ್ದ, ಮಾಜಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಂದು ದೆಹಲಿಯ ಬಿಜೆಪಿ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಬಳಿಕ ಮಾತನಾಡಿ, ಈ ದೇಶದ ಭವಿಷ್ಯ ಪ್ರಧಾನಿ ನರೇಂದ್ರ ಮೋದಿಯವರ ಕೈಯಲ್ಲಿ ಸುರಕ್ಷಿತವಾಗಿ ಇದೆ ಎಂದು ಹೇಳಿದರು.
ನಾನು ಬಿಜೆಪಿ ಸೇರುವುದರೊಂದಿಗೆ ದೇಶಸೇವೆ ಸಲ್ಲಿಸಲೂ ಒಂದು ವೇದಿಕೆ ಸಿಕ್ಕಂತಾಗಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಷಾ ಹಾಗೂ ಜೆ.ಪಿ.ನಡ್ಡಾ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಸಿಕ್ಕಂತಹ ಜನಾದೇಶ ಈ ಹಿಂದೆ ಯಾವ ಸರ್ಕಾರಗಳಿಗೂ ಸಿಕ್ಕಿರಲಿಲ್ಲ. ಒಂದಲ್ಲ, ಎರಡು ಬಾರಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಕೇಂದ್ರ ಸರ್ಕಾರ ಅಧಿಕಾರ ಹಿಡಿದಿದೆ. ಜನಾದೇಶವನ್ನು ಸಮರ್ಥವಾಗಿ ಬಳಸಿಕೊಂಡು ಕೆಲಸ ಮಾಡುತ್ತಿರುವ ಪ್ರಧಾನಮಂತ್ರಿಯವರ ಸಾಮರ್ಥ್ಯ, ಅವರು ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒದಗಿಸಿಕೊಟ್ಟ ಗೌರವ, ಜನಪರವಾದ ಅದ್ಭುತ ಯೋಜನೆಗಳನ್ನು ಜಾರಿಗೊಳಿಸಿದ ರೀತಿಗಳನ್ನೆಲ್ಲ ನೋಡುತ್ತಿದ್ದರೆ, ಇಡೀ ದೇಶ ಪ್ರಧಾನಿ ನರೇಂದ್ರ ಮೋದಿಯವರ ಕೈಯಲ್ಲಿ ಸುರಕ್ಷಿತವಾಗಿ ಇದೆ ಎಂದು ನನಗೆ ಅನ್ನಿಸುತ್ತದೆ ಎಂದು ಸಿಂಧಿಯಾ ಹೇಳಿದರು.
ನನ್ನ ಜೀವನವನ್ನು ಬದಲಿಸಿದ ಎರಡು ಪ್ರಮುಖ ವಿಚಾರಗಳು ಇವೆ. 2001ರ ಸೆಪ್ಟೆಂಬರ್ 30ರಂದು ನಾನು ನನ್ನ ತಂದೆಯನ್ನು ಕಳೆದುಕೊಂಡ ದಿನ ಒಂದಾದರೆ ಮತ್ತೊಂದು 2020ರ ಮಾರ್ಚ್​ 10. ಈ 2020ರ ಮಾರ್ಚ್​ 10ರಂದು ಮೋದಿಯವರನ್ನು ಭೇಟಿಯಾಗಿ, ಕಾಂಗ್ರೆಸ್​ಗೆ ವಿದಾಯ ಹೇಳುವ ಮೂಲಕ ನನ್ನ ಬದುಕಿನ ದಾರಿ ಬದಲಾಯಿತು. ಹೊಸ ಮಾರ್ಗ ಸಿಕ್ಕಿತು ಎಂದು ಹೇಳಿದರು.
ಕಾಂಗ್ರೆಸ್​ ಮೊದಲು ಇದ್ದಂತೆ ಇಲ್ಲ. ಅಲ್ಲಿನ ಪರಿಸ್ಥಿತಿಗಳು ತುಂಬ ಬದಲಾಗಿವೆ. ಆ ಬಗ್ಗೆ ಬೇಸರವಾಗುತ್ತದೆ. ಈಗ ಕಾಂಗ್ರೆಸ್​ ಪತನಕ್ಕೆ ಮುಖ್ಯವಾಗಿ ಮೂರು ಕಾರಣಗಳು ಇವೆ. ಒಂದು ಅದು ವಾಸ್ತವ ಏನಿದೆಯೋ ಅದನ್ನು ಒಪ್ಪಿಕೊಳ್ಳುತ್ತಿಲ್ಲ, ಹೊಸ ಸಿದ್ಧಾಂತಕ್ಕೆ ಅಂಟಿಕೊಂಡಿದೆ ಹಾಗೂ ಮೂರನೇದಾಗಿ ನಾಯಕತ್ವವನ್ನು ಗುರುತಿಸಲು ಸೋಲುತ್ತಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ವರಿಷ್ಠರು ನೀಡಿದ್ದ ಭರವಸೆಯನ್ನು ಅವರು ಉಳಿಸಿಕೊಳ್ಳಲಿಲ್ಲ. ಸಾರ್ವಜನಿಕ ಸೇವೆಯ ಉದ್ದೇಶ ಇಟ್ಟುಕೊಂಡು ಆ ಪಕ್ಷಕ್ಕೆ ಸೇರುವುದು ವ್ಯರ್ಥ. ಅದು ನಮ್ಮ ಆಸೆಯನ್ನು ಯಾವ ಕಾರಣಕ್ಕೂ ಈಡೇರಿಸುವುದಿಲ್ಲ. ಅಲ್ಲಿನ ಪರಿಸ್ಥಿತಿ ತುಂಬ ಬದಲಾಗಿದೆ ಎಂದು ತಾವು 18 ವರ್ಷಗಳ ಕಾಲ ಇದ್ದ ಕಾಂಗ್ರೆಸ್ ಬಗ್ಗೆ ಸಿಂಧಿಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಧ್ಯಪ್ರದೇಶದಲ್ಲಂತೂ ವರ್ಗಾವಣೆ ದಂಧೆ ಹಾಗೂ ಮರಳು ಮಾಫಿಯಾಗಳು ತೀವ್ರವಾಗಿವೆ. ಚುನಾವಣೆ ವೇಳೆ ಕಾಂಗ್ರೆಸ್​ ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ 18 ತಿಂಗಳು ಕಳೆದರೂ ಆ ಕೆಲಸ ಆಗಲಿಲ್ಲ. ಇದೆನ್ನೆಲ್ಲ ನೋಡಿ ಬೇಸತ್ತುಬಿಟ್ಟಿದ್ದೆ ಎಂದು ತಿಳಿಸಿದರು.ತಮ್ಮ ರಾಜೀನಾಮೆ ಪತ್ರದಲ್ಲೂ ಕೂಡ ಕಾಂಗ್ರೆಸ್ ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಬಿಡುತ್ತಿಲ್ಲ ಎಂದೇ ನಮೂದಿಸಿದ್ದರು. (ಏಜೆನ್ಸೀಸ್​)
‘ಕೈ’ ಬಿಡಿಸಿಕೊಂಡು ಹೋಗಿ ‘ಕಮಲ’ ಹಿಡಿದ ಜ್ಯೋತಿರಾದಿತ್ಯ ಸಿಂಧಿಯಾ…ಅಂತೂ ಬಿಜೆಪಿಗೆ ಸೇರ್ಪಡೆಯಾಗಿಯೇ ಬಿಟ್ಟರು…

ಸಿಂಧಿಯಾ ಪಕ್ಷ ಬಿಟ್ಟು ಹೋದ ಬೆನ್ನಲ್ಲೇ ಆರ್ಥಿಕತೆ ವಿಚಾರವಿಟ್ಟುಕೊಂಡು ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ..

ಹುಲಿಯತ್ತ ವೃಷಭನ ಗಮನ: ರಾಜ್- ರಿಷಬ್ ಜೋಡಿಯ 2ನೇ ಪೋಸ್ಟರ್ ಬಂತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − eight =
Remember me
