ನವದೆಹಲಿ:ಬಾಬ್ರಿ ಮಸೀದಿ ಲಾಕ್​ ಓಪನ್​ ಮಾಡಿದ್ದು ಮಾಜಿ ಪ್ರಧಾನಿ ರಾಜೀವ್​ ಗಾಂಧಿಯವರು ಹೌದೋ..ಅಲ್ಲವೋ ಎಂಬ ವಿಷಯದ ಬಗ್ಗೆ ಕಾಂಗ್ರೆಸ್​​ಗೇ ಗೊಂದಲವಿದೆ ಎಂದು ರಾಜ್ಯಸಭಾ ಸಂಸದ, ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ವ್ಯಂಗ್ಯವಾಡಿದ್ದಾರೆ.
ಒಂದು ಕಡೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್​ ಹೇಳುತ್ತಾರೆ, ಬಾಬ್ರಿ ಮಸೀದಿಯ ಬೀಗ ತೆಗೆದಿದ್ದೇ ರಾಜೀವ್​ ಗಾಂಧಿಯವರು ಎಂದು. ಇನ್ನೊಂದು ಕಡೆ ಕಾಂಗ್ರೆಸ್​ ಮುಖಂಡ ಶಶಿ ತರೂರ್​ ಅವರು, ಬಾಬ್ರಿ ಮಸೀದಿ ಬೀಗಗಳನ್ನು ಒಡೆಸಿದ್ದು, ರಾಜೀವ್​ ಗಾಂಧಿ ಅಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. ತಮ್ಮ ನಾಯಕ ರಾಜೀವ್​ ಗಾಂಧಿ ಏನು ಮಾಡಿದ್ದರು ಎಂಬ ಬಗ್ಗೆ ಅವರದ್ದೇ ಪಕ್ಷದ ಈಗಿನ ಮುಖಂಡರಿಗೆ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ.ಇದನ್ನೂ ಓದಿ:ಸರ್ಕಾರ ನನಗೆ ಇನ್ನೂ ಪೊಲೀಸ್ ಭದ್ರತೆ ಕೊಟ್ಟಿಲ್ಲ; ಅಖಂಡ ಶ್ರೀನಿವಾಸ ಮೂರ್ತಿ
ಇನ್ನು ರಾಜ್ಯದಲ್ಲಿ ಕರೊನಾ ವೈರಸ್​ ಹೆಚ್ಚುತ್ತಿರುವ ಬಗ್ಗೆ ಮಾತನಾಡಿದ ಸಿಂಧಿಯಾ, ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಅವರು ಕರೊನಾ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸುತ್ತಿದ್ದಾರೆ. ದಿನಕ್ಕೆ 18-20 ತಾಸು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.ಸಿಂಧಿಯಾ ಅವರು ಬಿಜೆಪಿಗೆ ಸೇರಿದ ನಂತರ ಇಂದು ಮೊದಲ ಬಾರಿಗೆ ಇಂಧೋರ್​ಗೆ ಆಗಮಿಸಿದ್ದಾರೆ. ಇಲ್ಲಿನ ಸಚಿವ ತುಳಸಿ ಸಿಲಾವತ್​ ಮತ್ತು ಇತರ ಬಿಜೆಪಿ ಮುಖಂಡರು ಅವರನ್ನು ಸ್ವಾಗತಿಸಿದರು. (ಏಜೆನ್ಸೀಸ್​)
ಬಿಎಸ್​ಎಫ್​ ಡಿಜಿ ಆಗಿ ಸಿಬಿಐ ಮಾಜಿ ನಿರ್ದೇಶಕ ರಾಕೇಶ್​ ಆಸ್ತಾನಾ ನೇಮಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + three =
Remember me
