ಅಹಮದಾಬಾದ್ :ಗುಜರಾತಿನ ವಡೋದರ ಜಿಲ್ಲೆಯಲ್ಲಿ, ಕಳೆದ ಒಂದೂವರೆ ತಿಂಗಳಿಂದ ಕಾಣೆಯಾಗಿದ್ದ ಮಹಿಳೆಯ ಕೊಲೆ ಆರೋಪದ ಮೇಲೆ ಆಕೆಯ ಪೊಲೀಸ್​ ಪತಿಯನ್ನೇ ಬಂಧಿಸಲಾಗಿದೆ. ಸಂತ್ರಸ್ತಳ ಮೃತದೇಹವನ್ನು ಸುಟ್ಟುಹಾಕುವಲ್ಲಿ ಸಹಾಯ ಮಾಡಿದ್ದರೆನ್ನಲಾದ ಓರ್ವ ಕಾಂಗ್ರೆಸ್ ನಾಯಕನನ್ನು ಕೂಡ ಬಂಧಿಸಲಾಗಿದೆ.
ಜೂನ್​ 4 ರ ತಡರಾತ್ರಿ, ವಡೋದರ ಗ್ರಾಮಾಂತರ ಪೊಲೀಸ್​ ಇನ್ಸ್​ಪೆಕ್ಟರ್​​ ಅಜಯ್​ ದೇಸಾಯಿ, ಜಗಳದ ಹಿನ್ನೆಲೆಯಲ್ಲಿ ತಮ್ಮ ಪತ್ನಿ ಸ್ವೀಟಿ ಪಟೇಲ್​​ರನ್ನು ಕತ್ತು ಹಿಸುಕಿ ಸಾಯಿಸಿದರು. ಮಾರನೇ ಬೆಳಿಗ್ಗೆ ಕಾಂಗ್ರೆಸ್ ನಾಯಕ ಕಿರೀಟ್​ಸಿಂಹ್​ ಜಡೇಜ ಅವರ ಸಹಾಯ ಪಡೆದು, ದೇಹವನ್ನು ಸುಟ್ಟುಹಾಕಿದರು. ನಂತರ ಪತ್ನಿಯ ಸೋದರನಿಗೆ ಫೋನ್ ಮಾಡಿ, ರಾತ್ರಿ ಜಗಳ ನಡೆದ ನಂತರದಿಂದ ತಮ್ಮ ಪತ್ನಿ ಕಾಣಿಸುತ್ತಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ನಡುರಾತ್ರಿ ಪ್ರೇಯಸಿಯ ಮನೆಗೆ ಹೋಗಿ ಸಿಕ್ಕಿಬಿದ್ದ ಯುವಕ; ಮುಂದಾದದ್ದು ಭಾರಿ ದುರಂತ
ಜೂನ್ 5 ರ ಬೆಳಿಗ್ಗೆ ಮೃತದೇಹವನ್ನು ಬ್ಲಾಂಕೆಟ್​ನಲ್ಲಿ ಸುತ್ತಿ ಕಾರಿನಲ್ಲಿ ಸಾಗಿಸಿದ್ದ ದೇಸಾಯಿ, ಜಡೇಜಗೆ ಸೇರಿದ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಹೊಟೆಲ್​ ಹಿಂಭಾಗದಲ್ಲಿ, ಮೃತದೇಹವನ್ನು ಸುಟ್ಟುಹಾಕಿದ್ದರು ಎನ್ನಲಾಗಿದೆ. ದೇಸಾಯಿ ಮತ್ತು ಜಡೇಜ ಅವರ ವಿರುದ್ಧ ಕೊಲೆ ಮತ್ತು ಸಾಕ್ಷ್ಯನಾಶದ ಆರೋಪಗಳಡಿ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಅಹಮದಾಬಾದ್​ ಕ್ರೈಂ ಬ್ರಾಂಚ್​ ಇನ್ಸ್​ಪೆಕ್ಟರ್ ಡಿ.ಬಿ.ಬರದ್​ ಹೇಳಿದ್ದಾರೆ.
ಬಂಧನಕ್ಕೊಳಗಾಗಿರುವ ಕಿರೀಟ್​ಸಿಂಹ್​ ಜಡೇಜ, 2020 ರಲ್ಲಿ ವಡೋದರ ಜಿಲ್ಲೆಯ ಕರ್ಜನ್​​ ವಿಧಾನಸಭೆಯ ಬೈಎಲೆಕ್ಷನ್​ನಲ್ಲಿ ಕಾಂಗ್ರೆಸ್​ ಟಿಕೆಟ್​ ಮೇಲೆ ಸ್ಪರ್ಧಿಸಿ ಸೋಲನುಭವಿಸಿದ್ದರು ಎನ್ನಲಾಗಿದೆ. ಅಹಮದಾಬಾದ್​ ಅಪರಾಧ ವಿಭಾಗದ ಪೊಲೀಸರು ಮತ್ತು ರಾಜ್ಯದ ಆ್ಯಂಟಿ ಟೆರರಿಸಂ ಸ್ಕ್ವಾಡ್​ನ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿದ್ದರು.(ಏಜೆನ್ಸೀಸ್)
ಕಣ್ಣೀರು ಹಾಕುತ್ತಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ ಬಿಎಸ್​ವೈ

ತುಂಬಾ ಹೊತ್ತು ಕುಳಿತು ಬೆನ್ನು ನೋವೇ? ಈ ಯೋಗಾಸನ ಮಾಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − two =
Remember me
