ಗುವಾಹಟಿ:ರೈತ ಹೋರಾಟದ ಟೂಲ್​ಕಿಟ್ ಪ್ರಕರಣದಲ್ಲಿ ಬಂಧಿತಳಾದ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಗ್ಗೆ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಮಾತನಾಡಿದ್ದಾರೆ. ಅಸ್ಸಾಂನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಅವರು ದಿಶಾ ಬಗ್ಗೆ ಮಾತನಾಡಿದ್ದಾರೆ.
ನಮ್ಮ ದೇಶದ ಪ್ರಧಾನಿಗೆ 22 ವರ್ಷದ ದಿಶಾ ರವಿಯ ಟ್ವೀಟ್​ ಬಗ್ಗೆ ಬೇಸರ ವ್ಯಕ್ತಪಡಿಸಲು ಆಗುತ್ತದೆ ಆದರೆ ಅವರಿಗೆ ಅಸ್ಸಾಂನಲ್ಲಾದ ಪ್ರವಾಹವಾಗಲೀ ಅಥವಾ ಸಿಎಎ ವಿಚಾರವಾಗಲಿ ಮಾತನಾಡಲು ಆಗುವುದಿಲ್ಲ ಎಂದು ಅವರು ದೂರಿದ್ದಾರೆ.
ಅಸ್ಸಾಂನಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ರಾಜ್ಯದಲ್ಲಿ ಚುನಾವಣೆ ಪ್ರಚಾರವನ್ನು ನಡೆಸುತ್ತಿದ್ದಾರೆ. ಜೋರ್ಹತ್​ನಲ್ಲಿ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿದ ಅವರು ಬಿಜೆಪಿಯನ್ನು ದೂರಿದ್ದಾರೆ. ಬಿಜೆಪಿ ಸರ್ಕಾರವು ನಮ್ಮ ದೇಶದ ಯುವ ಜನತೆಗೆ, ಕಾರ್ಮಿಕರಿಗೆ ಮತ್ತು ರೈತರಿಗೆ ಮೋಸ ಮಾಡುತ್ತಿದೆ. ಪ್ರಧಾನಿಯವರು ಯಾವತ್ತಾದರೂ ಅಸ್ಸಾಂನ ಟೀ ಎಸ್ಟೇಟ್​ಗೆ ಭೇಟಿ ನೀಡಿದ್ದಾರಾ? ಇಲ್ಲಿ ಕೆಲಸ ಮಾಡುವ ಮಹಿಳೆಯರ ಕಷ್ಟವನ್ನು ಆಲಿಸಿದ್ದಾರಾ? ಟೀ ಎಸ್ಟೇಟ್​ ಕೆಲಸಗಾರರಿಗೆ ದಿನಕ್ಕೆ 350 ರೂಪಾಯಿ ಕೂಲಿ ಕೊಡಿಸುವುದಾಗಿ ಹೇಳಿ ಅದನ್ನು ಮರೆತಿದ್ದಾರಲ್ಲಾ? ಅದರ ಬಗ್ಗೆ ಅವರಿಗೆ ಏನಾದರೂ ನೋವಿದೆಯೇ ಎಂದು ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. (ಏಜೆನ್ಸೀಸ್​)
ಮದ್ಯದ ಅಮಲಿನಲ್ಲಿ ದೇವಸ್ಥಾನದ ಸಾಧುವಿನ ಮೇಲೆ ಹಲ್ಲೆ; ಕೊಡಲಿಯಿಂದ ಹೊಡೆದು ಕೊಂದ ಪಾಪಿ!

ಅಮಿತ್​ ಷಾ ರಾಲಿಯಲ್ಲಿ ಹಿರಿಯ ಟಿಎಂಸಿ ಸಂಸದ ಸಿಸಿರ್ ಅಧಿಕಾರಿ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 2 =
Remember me
