ನವದೆಹಲಿ:ದೇಶದಲ್ಲಿ ಕರೊನಾ ವೈರಸ್​ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು ಸೋಂಕಿನ ನಿಯಂತ್ರಣಕ್ಕೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ವೆಂಟಿಲೇಟರ್​ಗಳ ಸಮಸ್ಯೆ ಉಂಟಾಗಬಹುದು ಎಂದು ಪರಿಣತರು ಹೇಳಿದ್ದು ಈ ಕುರಿತಾಗಿ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಪ್ರಧಾನಿ ಮೋದಿಗೆ ಪ್ರಶ್ನಿಸಿದ್ದಾರೆ.
ಗೌರವಯುತ ಪ್ರಧಾನಿಯವರೇ, ದೇಶದಲ್ಲಿ ವೆಂಟಿಲೇಟರ್​ಗಳನ್ನು ಸಮರ್ಪಕವಾಗಿಟ್ಟುಕೊಳ್ಳಬೇಕು ಎಂದು ಗೊತ್ತಿದ್ದ ಮೇಲೂ ಕೇಂದ್ರ ಸರ್ಕಾರ ಮಾರ್ಚ್​ 19ರವರೆಗೆ ವೆಂಟಿಲೇಟರ್​ ಮತ್ತು ಮಾಸ್ಕ್​ಗಳನ್ನು ರಫ್ತು ಮಾಡುವುದಕ್ಕೆ ಅವಕಾಶವನ್ನೇಕೆ ನೀಡಿತು. ಇದು ಯಾರು ಮಾಡಿರುವ ಅವ್ಯವಸ್ಥೆ. ಇದರ ಹಿಂದೆ ಕ್ರಿಮಿನಲ್​ ಪಿತೂರಿ ಇದೆಯಲ್ಲವೇ ಎಂದು ಪ್ರಶ್ನಿಸಿ ಟ್ವೀಟ್​ ಮಾಡಿದ್ದಾರೆ.
ದೇಶದಲ್ಲಿ ಒಂದು ವೇಳೆ ಕರೊನಾ ವೈರಸ್​ ಸಮಸ್ಯೆ ಕಡಿಮೆಯಾಗದೆ ಹೆಚ್ಚಾದರೆ, ದೇಶದಲ್ಲಿರುವ 40,000 ವೆಂಟಿಲೇಟರ್​ಗಳು ಸಾಲದಾಗುತ್ತದೆ ಎಂದು ಪರಿಣತರು ತಿಳಿಸಿದ್ದಾರೆ. ಕರೊನಾ ವೈರಸ್​ ಸೋಂಕಿತರಲ್ಲಿ ಶೇ.5 ಜನರಿಗೆ ಉಸಿರಾಟದ ತೊಂದರೆ ಹೆಚ್ಚಾಗುವ ಕಾರಣ ಅವರನ್ನು ವೆಂಟಿಲೇಟರ್​ ಮೂಲಕ ಉಸಿರಾಡುವಂತೆ ಮಾಡುವ ಅವಶ್ಯಕತೆ ಇದೆ.
ಮಾರ್ಚ್​ 19ರ ನಂತರ ದೇಶದಲ್ಲಿ ವೆಂಟಿಲೇಟರ್​ಗಳ ರಫ್ತನ್ನು ನಿಷೇಧಿಸಲಾಗಿದೆ. ಕರೊನಾ ಸೋಂಕಿತರಿಗೆ ಐಸಿಯು ವ್ಯವಸ್ಥೆ ಮಾಡುವ ಸಲುವಾಗಿ ಕೆಲವು ಶಸ್ತ್ರಚಿಕಿತ್ಸೆಗಳನ್ನೂ ಸಹ ಮುಂದೂಡಲಾಗಿದೆ. ದೇಶದಾದ್ಯಂತ ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ಕೆಲ ರಾಜ್ಯಗಳನ್ನು ಸಂಪೂರ್ಣವಾಗಿ ಲಾಕ್​ ಡೌನ್​ ಮಾಡಲಾಗಿದೆ.(ಏಜೆನ್ಸೀಸ್​)
आदरणीय प्रधानमंत्री जी,
WHO की सलाह
1. वेंटिलेटर2. सर्जिकल मास्कका पर्याप्त स्टाक रखने के विपरीत भारत सरकार ने 19 मार्च तक इन सभी चीजों के निर्यात की अनुमति क्यों दीं?
ये खिलवाड़ किन ताक़तों की शह पर हुआ? क्या यह आपराधिक साजिश नहीं है?#Coronavirushttps://t.co/tNgkngZ936
— Rahul Gandhi (@RahulGandhi)March 23, 2020

ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಬಿಜೆಪಿಯ ಶಿವರಾಜ್​ ಸಿಂಗ್​ ಚೌಹಾಣ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + eighteen =
Remember me
