ಚಂಡೀಗಢ:ರಾಷ್ಟ್ರ ರಾಜಧಾನಿ ನವದೆಹಲಿಯ ಗಡಿ ಭಾಗಗಳಲ್ಲಿ ರೈತ ಹೋರಾಟ ಇನ್ನೂ ಮುಂದುವರಿದಿದೆ. ಅನೇಕರು ನೀರು, ಊಟ, ಹಾಸಿಗೆ ಹೀಗೆ ನಾನಾ ರೀತಿಯ ಸಹಾಯವನ್ನು ಹೋರಾಟಗಾರರಿಗೆ ಮಾಡುತ್ತಿದ್ದಾರೆ. ಇದೀಗ ಕಾಂಗ್ರೆಸ್​ ನಾಯಕಿಯೊಬ್ಬರು ಹೋರಾಟಗಾರರಿಗೆ ಕುಡಿಯಲು ಮದ್ಯವನ್ನೂ ನೀಡುವುದಕ್ಕೆ ಮುಂದಾಗಿದ್ದಾರೆ.
ಹರಿಯಾಣದ ಕಾಂಗ್ರೆಸ್​ ಮುಖಂಡೆ ವಿದ್ಯಾ ರಾಣಿ ಈ ರೀತಿ ವಿಶೇಷ ಸಹಾಯಕ್ಕೆ ಮುಂದಾಗಿದ್ದಾರೆ. ಅವರ ಮಾತಿನ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ರೈತರಿಗಾಗಿ ನಾವು ಪಾದಯಾತ್ರೆ ಮಾಡೋಣ. ಅದು ನಮ್ಮ ಪಕ್ಷಕ್ಕೆ ಹೊಸ ಹುರುಪು ನೀಡಲಿದೆ. ಈ ಬಾರಿ ನಾವು ಚುನಾವಣೆಯಲ್ಲಿ ಸೋತಿದ್ದೇವೆ. ಅದರಿಂದ ನಮ್ಮ ಉತ್ಸಾಹ ಕಡಿಮೆಯಾಗಿದೆ. ಆದರೆ ಈಗ ಹೋರಾಟದಲ್ಲಿ ಪಾಲ್ಗೊಳ್ಳೋಣ. ರೈತರಿಗೆ ಏನು ಬೇಕೋ ಅದನ್ನು ಕೊಡೋಣ. ಅದು ತರಕಾರಿಯೇ ಆಗಿರಬಹುದು ಕುಡಿಯಲು ಮದ್ಯವೇ ಆಗಿರಬಹುದು. ಅದನ್ನು ಅವರಿಗೆ ಕೊಟ್ಟು ಬೆಂಬಲಿಸೋಣ ಎಂದು ವಿದ್ಯಾ ರಾಣಿ ಹೇಳಿದ್ದಾರೆ.
ನಮ್ಮ ಪ್ರತಿಯೊಬ್ಬ ಕಾರ್ಯಕರ್ತರೂ ರೈತರ ಬೆಂಬಲಕ್ಕೆ ನಿಲ್ಲೋಣ. ಅವರಿಗೆ ಎಷ್ಟು ತಿನ್ನುವುದಕ್ಕೆ, ಕುಡಿಯುವುದಕ್ಕೆ ಬೇಕೋ ಅಷ್ಟು ಕೊಡೋಣ. ಅವರಿಗೆ ಹಣ ನೀಡುವ ಸಾಮರ್ಥ್ಯ ನಮ್ಮಲ್ಲಿದ್ದೇ ಇದೆ ಎಂದು ಅವರು ಹೇಳಿದ್ದಾರೆ. ವಿದ್ಯಾ ಪಕ್ಕದಲ್ಲಿ ಅನೇಕರು ಕುಳಿತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. (ಏಜೆನ್ಸೀಸ್​)
#WATCH: Haryana Congress leader Vidya Rani says, "…We'll take out a 'padyatra' in Jind. It'll give new direction & strength to Congress. It'll be reborn. Agitation has risen again as farmers are firm. Be it money, vegetables, liquor-we can contribute to them as we like.."(14.2)pic.twitter.com/FwX7aGNHo9
— ANI (@ANI)February 15, 2021

ಪೊಲೀಸ್​ ಠಾಣೆಯ ಎದುರಿನ ಮೋರಿಯಲ್ಲಿ ಡೆಡ್ ಬಾಡಿ​! ದೃಶ್ಯ ಸಿನಿಮಾವನ್ನು ನಿಜ ಮಾಡಿದ ಖದೀಮರು!

ದಿಶಾ ರವಿ ಬಂಧನದಿಂದಾಗಿ ಕೆರಳಿದ ಪಾಕ್​! ಬಾಯಿ ಮುಚ್ಚಿಸುವ ಕೆಲಸ ನಿಮ್ಮದು ಎಂದ ಇಮ್ರಾನ್​ ಖಾನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 11 =
Remember me
