ಅಮೃತಸರ:ಆಘಾತಕಾರಿ ಘಟನಟಯೊಂದರಲ್ಲಿ ಸ್ಥಳೀಯ ಕಾಂಗ್ರೆಸ್​ ನಾಯಕರೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬಿನ ಮೊಗಾ ಜಿಲ್ಲೆಯಲ್ಲಿ ನಡೆದಿದೆ.
ಬಲ್ಜಿಂದರ್ ಸಿಂಗ್​ ಬಲ್ಲಿ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಇವರ ಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಖಲಿಸ್ತಾನಿ ಭಯೋತ್ಪಾದಕ ಹರ್ಷ್​ ದಲ್ಲಾ ಇವರ ಹತ್ಯೆಯ ಹೊಣೆಯನ್ನು ಹೊತ್ತಿದ್ದಾನೆ.
ವೈರಲ್​ ಆಗಿರುವ ವಿಡಿಯೋದಲ್ಲಿ ತಮ್ಮ ಮನೆಯಿಂದ ಹೊರಬರುವ ಬಲ್ಜಿಂದರ್​ ಅವರ ಮೇಲೆ ಗುಂಡು ಹಾರಿಸುವ ದುಷ್ಕರ್ಮಿಗಳು ಸ್ಥಳದಿಂದ ತಕ್ಷಣವೆ ಪಲಾಯನ ಮಾಡುತ್ತಾರೆ. ಗಂಭೀರವಾಗಿ ಗಾಯಗೊಂಡಿದ್ದ ಬಲ್ಜಿಂದರ್​ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Breaking: CCTV visuals show the murder of the Congress Block President of Ajitwal Block in Moga, who was shot dead by unidentified assailants inside his residence. According to information, he received a call from someone requesting document signing, and when he went out, the…pic.twitter.com/ktNESSIo9e
ಇದನ್ನೂ ಓದಿ:ಕಾವೇರಿ ಜಲವಿವಾದ; ರೈತರ ಹಿತಾಸಕ್ತಿಗೆ ಬದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್
ಬಲ್ಜಿಂದರ್​ ಅವರ ಹತ್ಯೆಯ ಹೊಣೆಯನ್ನು ಹೊತ್ತಿರುವ ಖಲಿಸ್ತಾನಿ ಭಯೋತ್ಪಾದಕ ಹರ್ಷ್​ ದಲ್ಲಾ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾನೆ. ಬಲ್ಜಿಂದರ್​ ಸಿಂಗ್​ ಬಲ್ಲಿ ನನ್ನ ಭವಿಷ್ಯವನ್ನು ಹಾಳು ಮಾಡಿ ನಾನು ಗ್ಯಾಂಗ್​ಸ್ಟಾರ್​ ಆಗಿ ಬೆಳೆಯಲು ಪ್ರಮುಖ ಕಾರಣ ಆಗಿದ್ದಾನೆ. ನನ್ನ ತಾಯಿಯನ್ನು ಪೊಲೀಸರು ವಶಕ್ಕೆ ಪಡೆಯುವುದರ ಹಿಂದೆ ಈತನ ಕೈವಾಡವಿದೆ. ಈತನ ವಿರುದ್ಧ ಸೇಡು ತೀರಿಸಿಕೊಳ್ಳಲು ನಗೆ ಪ್ರೇರೆಪಿಸಿತು ಎಂದು ಬರೆದುಕೊಂಡಿದ್ದಾನೆ.
ಇತ್ತ ಬಲ್ಜಿಂದರ್​ ಸಿಂಗ್ ಹತ್ಯೆಯನ್ನು ಖಂಡಿಸಿರುವ ಪಂಜಾಬ್​ ಕಾಂಗ್ರೆಸ್​ ಘಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ. 2022ರಲ್ಲಿ ಸಿಧು ಮೂಸೇವಾಲಾ ಅವರನ್ನು ಇದೇ ರೀತಿ ಹತ್ಯೆ ಮಾಡಲಾಗಿತ್ತು. ರಾಜ್ಯದಲ್ಲಿ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.
ರಾಷ್ಟ್ರೀಯ ತನಿಕಾ ದಳಕ್ಕೆ ಬೇಕಾಗಿರುವ ಹರ್ಷ್​ ದಲ್ಲಾ ಕೆನಡಾದಲ್ಲಿ ವಾಸವಿದ್ದಾನೆ. ಕಳೆದ ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ಪಂಜಾಬ್​ನಲ್ಲಿ ನಡೆದ ಹಲವು ಹತ್ಯೆಯ ಹೊಣೆಯನ್ನು ಈತ ಹೊತ್ತಿದ್ದಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 16 =
Remember me
