ನವದೆಹಲಿ:ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಸಿಆರ್​ಪಿಎಪ್​ ಯೋಧರ ಮೇಲೆ ದಾಳಿ ನಡೆದು ನಿನ್ನೆಗೆ ಒಂದು ವರ್ಷ ಕಳೆದಿದೆ. ಈ ದಾಳಿ ಯಾರು ಮಾಡಿದ್ದು, ಇದಕ್ಕೆ ಬೆಂಬಲಿಸಿದ್ದು ಯಾರು ಎನ್ನುವ ಕುರಿತಾಗಿ ಆಡಳಿತ ಮತ್ತು ವಿರೋಧ ಪಕ್ಷಗಳಿಂದ ಭಾರೀ ಪ್ರಮಾಣದ ಚರ್ಚೆಯಾಗುತ್ತಿದೆ. ಕಾಂಗ್ರೆಸ್​ನ ಮಾಜಿ ಸಚಿವರೊಬ್ಬರು ಮುಂದಿನ ಲೋಕಸಭಾ ಚುನಾವಣೆಯೊಳಗೆ ಬಿಜೆಪಿಯವರು ಮತ್ತೊಂದು ದಾಳಿ ನಡೆಸಿದರೂ ನಡೆಸಬಹುದು ಎಂದು ಹೇಳಿದ್ದಾರೆ.
ಪುಲ್ವಾಮಾ ದಾಳಿಯ ಕುರಿತಾಗಿ ಟ್ವೀಟ್​ ಮಾಡಿರುವ ಕಾಂಗ್ರೆಸ್​ನ ಮಾಜಿ ಸಂಸದ ಉದಿತ್​ ರಾಜ್​, “ಮುಂದಿನ ಲೋಕಸಭಾ ಚುನಾವಣೆ 2024 ಒಳಗೆ ಪುಲ್ವಾಮಾ ದಾಳಿಯಂತದ್ದು ಇನ್ನೊಂದು ದಾಳಿ ನಡೆದರೂ ನಡೆಯಬಹುದು” ಎಂದು ಹೇಳಿದ್ದಾರೆ. ಪುಲ್ವಾಮಾದಲ್ಲಿದ್ದ ಭದ್ರತೆಯನ್ನು ಪ್ರಶ್ನಿಸಿರುವ ಅವರು ಸಿಪಿಆರ್​ಎಫ್​ ಯೋಧರನ್ನು ರಸ್ತೆಯಲ್ಲಿ ಸ್ಥಳಾಂತರಿಸುವಂತಿಲ್ಲ, ಅವರನ್ನು ವಿಮಾನಗಳಲ್ಲಿ ಮಾತ್ರವೇ ಸ್ಥಳಾಂತರಿಸಬೇಕು ಎಂದು ಗೃಹ ಸಚಿವಾಲಯವು ಮೊದಲೇ ತಿಳಿಸಿದ್ದರು ರಸ್ತೆಯಲ್ಲಿಯೇ ಅವರನ್ನು ಸ್ಥಳಾಂತರಿಸುತ್ತಿದ್ದದ್ದು ಏಕೆ? ಎಂದು ಕೇಳಿದ್ದಾರೆ.
ನಿನ್ನೆ ರಾಹುಲ್​ ಗಾಂಧಿಯವರು ಪುಲ್ವಾಮಾ ದಾಳಿಯ ಕುರಿತಾಗಿ ಮೂರು ಪ್ರಶ್ನೆಗಳನ್ನು ಆಡಳಿತ ಪಕ್ಷಕ್ಕೆ ಕೇಳಿದ್ದರು. ಈ ದಾಳಿಗೆ ಯಾರು ಹೊಣೆಗಾರರು? ಅದರ ತನಿಖೆ ಎಲ್ಲಿವರೆಗೆ ನಡೆದಿದೆ? ಈ ದಾಳಿಯಿಂದಾಗಿ ಯಾರಿಗೆ ಹೆಚ್ಚಿನ ಲಾಭವಾಯಿತು ಎಂದು ಕಾಂಗ್ರೆಸ್​ನ ನಾಯಕ ಪ್ರಶ್ನೆಗಳನ್ನು ಕೇಳಿದ್ದರು. ಇಂದು ರಾಹುಲ್​ ಗಾಂಧಿಯವರ ಬೆಂಬಲಕ್ಕೆ ನಿಂತ ಉದಿತ್​ ರಾಜ್​​ “ರಾಹುಲ್​ ಗಾಂಧಿಯವರ ಪ್ರಶ್ನೆಗಳು ಸರಿಯಾಗಿವೆ. ಪುಲ್ವಾಮಾ ದಾಳಿಯ ಫಲಿತಾಂಶವನ್ನು ನಾವು ತಿಳಿದುಕೊಳ್ಳಲೇಬೇಕು” ಎಂದು ಹೇಳಿದ್ದಾರೆ.(ಏಜೆನ್ಸೀಸ್​)
राहुल गांधी जी ने सही सवाल उठाया की पुलवामा हमले के जांच का नतीजा अभी तक नही आया जब गृहमंत्रालय को खबर मिल गयी थी कि CRPF को रोड से नहीं बल्कि एयर से ले जाना चाहिए तो इजाजत नहीं दिया अर्थात राजनैतिक लाभ के लिए यह घटना होने दिया।.@INCIndia
— Dr. Udit Raj (@Dr_Uditraj)February 14, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
